ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ನಾಯಕತ್ವ ವಿಭಜನೆ ಚರ್ಚೆ ಬಗ್ಗೆ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ

Sanjay Manjrekar Opines On Split Captaincy In Indian Cricket

ಕ್ರಿಕೆಟ್‌ನ ಮಾದರಿಗಳಿಗೆ ಅನುಗುಣವಾಗಿ ನಾಯಕತ್ವ ಬದಲಾವಣೆ ಆಗಬೇಕು ಎಂಬ ಅಭಿಪ್ರಾಯ ಕಳೆದ ಕೆಲ ಸಮಯಗಳಿಂದ ಕೇಳಿಬರುತ್ತಿದೆ. ಐಪಿಎಲ್‌ನಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಯಶಸ್ಸು ಈ ಚರ್ಚೆಗೆ ಮತ್ತಷ್ಟು ಇಂಬು ನೀಡುತ್ತಿದೆ. ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯಿಸಿದ್ದಾರೆ.

ಟೀಮ್ ಇಂಡಿಯಾದ ಹಾಲಿ ನಾಯಕ ಎಲ್ಲಾ ಮಾದರಿಯಲ್ಲೂ ಉತ್ತಮವಾಗಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ನಾಯಕನಾಗಿಯೂ ಮೂರು ಮಾದರಿಯಲ್ಲಿ ಕೊಹ್ಲಿ ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಇಂತಾ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ನಾಯಕತ್ವ ವಿಭಜನೆಯ ಅಗತ್ಯವಿಲ್ಲ ಎಂದು ಮಂಜ್ರೇಕರ್ ಅಭಿಪ್ರಾಯ ವ್ಯಕ್ತಡಿಸಿದ್ದಾರೆ.

ಮೊದಲ ODIನಲ್ಲೇ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟಾಪ್ 5 ಭಾರತೀಯರ ಪಟ್ಟಿಯಲ್ಲಿ ನಾಲ್ವರು ಕನ್ನಡಿಗರು!ಮೊದಲ ODIನಲ್ಲೇ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟಾಪ್ 5 ಭಾರತೀಯರ ಪಟ್ಟಿಯಲ್ಲಿ ನಾಲ್ವರು ಕನ್ನಡಿಗರು!

ಟ್ವಿಟ್ಟರ್‌ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಮಂಜ್ರೇಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ಉತ್ತರವನ್ನು ನೀಡುತ್ತಿದ್ದರು. ಸದ್ಯ ಟೀಮ್ ಇಂಡಿಯಾದಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿ ಮೂರು ಮಾದರಿಯಲ್ಲಿ ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಇಂತಾ ಸಂದರ್ಭದಲ್ಲಿ ನಾಯಕತ್ವ ವಿಭಜನೆಯ ಅಗತ್ಯವಿಲ್ಲ. ಭವಿಷ್ಯದಲ್ಲಿ ಟೀಮ್ ಇಂಡಿಯಾಗೆ ನಾಯಕತ್ವ ವಿಭಜನೆ ಬಂದರೂ ಬರಬಹುದು ಎಂದು ಹೇಳಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿಯಂತಾ ನಾಯಕರನ್ನು ಪಡೆಯಲು ಭಾರತ ಅದೃಷ್ಟ ಮಾಡಿದೆ. ಹಾಗಾಗಿ ಈಗಿನ ಪರಿಸ್ಥಿತಿಯಲ್ಲಿ ನಾಯಕತ್ವ ವಿಭಜನೆ ಅಗತ್ಯವಿಲ್ಲ ಎಂದು ಮಂಜ್ರೇಕರ್ ಹೇಳಿದ್ದಾರೆ. ಧೋನಿ ಕೂಡ ಮೂರೂ ಮಾದರಿಯಲ್ಲಿ ಉತ್ತಮ ನಾಯಕತ್ವವನ್ನು ನೀಡಿದ್ದರು ಎಂದಿದ್ದಾರೆ.

ಆ ಸಂದರ್ಭದಲ್ಲಿ ಒಂದು ಕ್ಷಣವೂ ನನ್ನ ಕುಟುಂಬ ಒಂಟಿಯಾಗಿರಲು ಬಿಟ್ಟಿರಲಿಲ್ಲ: ಮೊಹಮದ್ ಶಮಿಆ ಸಂದರ್ಭದಲ್ಲಿ ಒಂದು ಕ್ಷಣವೂ ನನ್ನ ಕುಟುಂಬ ಒಂಟಿಯಾಗಿರಲು ಬಿಟ್ಟಿರಲಿಲ್ಲ: ಮೊಹಮದ್ ಶಮಿ

ಭಾರತ ಅತ್ಯುತ್ತಮ ಟೆಸ್ಟ್ ನಾಯಕ ಮತ್ತು ಟೆಸ್ಟ್ ಆಟಗಾರನನ್ನು ಹೊಂದಿದ್ದು ಆತ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಉತ್ತಮವಾಗಿಲ್ಲದಿದ್ದಾಗ ನಾಯಕತ್ವ ವಿಭಜನೆ ಮಾಡಬಹುದು. ಅಂತಾ ಸಂದರ್ಭದಲ್ಲಿ ಟೆಸ್ಟ್‌ಗೆ ಓರ್ವ ಮುನ್ನಡೆಸಿದರೆ ಸೀಮಿತ ಓವರ್‌ಗಳಿಗೆ ಇನ್ನೊಬ್ಬ ಆಟಗಾರ ಮುನ್ನಡೆಸಬಹುದು ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Story first published: Friday, June 19, 2020, 22:06 [IST]
Other articles published on Jun 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X