ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಂಕಡಿಂಗ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್

Sanjay Manjrekar Opinion On Mankading

ಮಂಕಡಿಂಗ್ ಮೂಲಕ ಔಟ್ ಮಾಡುವ ಚರ್ಚೆ ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಶುರುವಾಗಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಆರ್ ಅಶ್ವಿನ್ ಬಟ್ಲರ್ ವಿಕೆಟ್ ಮಂಕಡ್ ಮಾಡುವ ಮೂಲಕ ಔಟ್ ಮಾಡಿದ ಬಳಿಕ ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ರಿಕಿ ಪಾಂಟಿಂಗ್ ಈ ಬಗ್ಗೆ ತನ್ನ ನಿಲುವನ್ನು ವ್ಯಕ್ತಪಡಿಸಿದ ನಂತರ ಇದು ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಮಂಕಡಿಂಗ್ ಮೂಲಕ ಔಟ್ ಮಾಡುವ ವಿಧಾನಕ್ಕೆ ಬೆಂಬಲವನ್ನು ವ್ಯಕ್ತಪಡಿಸಿ ಪ್ರತಿಕ್ರಿಯಸಿಸಿದ್ದರು. ಇದಕ್ಕೆ ಸಂಜಯ್ ಮಂಜ್ರೇಕರ್ ಸಹಿತ ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯವನ್ನೂ ಅವರು ಟ್ವಿಟ್ಟರ್‌ನಲ್ಲಿ ಕೇಳಿದ್ದರು. ಇದಕ್ಕೆ ಮಂಜ್ರೇಕರ್ ಪ್ರತಿಕ್ರಿಯಿಸಿದ್ದಾರೆ.

ಮಂಕಡಿಂಗ್ ವಿವಾದಕ್ಕೆ ಆರ್ ಅಶ್ವಿನ್ ಸೂಪರ್ ಸಲಹೆ: ಫ್ರೀಹಿಟ್‌ ರೀತಿಯಲ್ಲೇ ಫ್ರೀ ಬಾಲ್!ಮಂಕಡಿಂಗ್ ವಿವಾದಕ್ಕೆ ಆರ್ ಅಶ್ವಿನ್ ಸೂಪರ್ ಸಲಹೆ: ಫ್ರೀಹಿಟ್‌ ರೀತಿಯಲ್ಲೇ ಫ್ರೀ ಬಾಲ್!

ಮೈದಾಬದಲ್ಲಿ ಕೆಟ್ಟದಾಗಿ ಮುಂಚಿತವಾಗಿ ಕ್ರೀಸ್ ಬಿಟ್ಟು ಕೆಟ್ಟದಾಗಿ ಔಟಾಗುವುದನ್ನು ನೋಡಲು ಆರಂಭಿಸಿ ಎಂದು ಹೇಳಿದ್ದಾರೆ. ಈ ಮೂಲಕ ಸಂಜಯ್ ಮಂಜ್ರೇಕರ್ ಮಂಕಡ್ ವಿಧಾನದ ಮೂಲಕ ಔಟ್ ಮಾಡುವುದಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಸತತವಾಗಿ ರನ್ ಔಟ್ ಮಾಡಿದಂತೆಯೇ ಮಂಕಡ್ ಔಟ್ ಮಾಡಿದರೆ ಬ್ಯಾಟ್ಸ್‌ಮನ್‌ಗಳು ಜಾಗರೂಕರಾಗಿರುತ್ತಾರೆ. ಜೊತೆಗೆ ಅದನ್ನು ಮಾಡುವುದನ್ನು ನಿಲ್ಲಿಸುತ್ತಾರೆ. ಆದರೆ ಅದನ್ನು ಪ್ರೋತ್ಸಾಹಿಸದ ಕಾರಣ ಮತ್ತು ಋಣಾತ್ಮಕ ರೀತಿಯಲ್ಲಿ ನೋಡುವುದರಿಂದ ಜೊತೆಗೆ ಜನರು ನೈತಿಕವಾಗಿ ಅನುಮಾನಿಸಲ್ಪಡುತ್ತಿರುವುದರಿಂದ ಬೌಲರ್‌ಗಳು ತಂಡದ ನಾಯಕರು ಇನ್ನೇನಾದರೂ ಆಗುವ ಪರಿಣಾಮಗಳಿಗೆ ಭಯಪಡುತ್ತಾರೆ ಎಂದು ಮಂಜ್ರೇಕರ್ ಹೇಳಿದ್ದಾರೆ.

ಸಚಿನ್ ಹೆಸರಲ್ಲಿರುವ 100 ಶತಕಗಳ ದಾಖಲೆ ಮುರಿಯುವ ಸಾಮರ್ಥ್ಯವಿರುವುದು ಆತನೊಬ್ಬನಿಗೆ: ಪಠಾಣ್ಸಚಿನ್ ಹೆಸರಲ್ಲಿರುವ 100 ಶತಕಗಳ ದಾಖಲೆ ಮುರಿಯುವ ಸಾಮರ್ಥ್ಯವಿರುವುದು ಆತನೊಬ್ಬನಿಗೆ: ಪಠಾಣ್

ದಿನೇಶ್ ಕಾರ್ತಿಕ್ ಮಂಕಡಿಂಗ್ ವಿಧಾನದ ಮೂಲಕ ಔಟ್ ಮಾಡುವುದಕ್ಕೆ ಬೆಂಬಲವನ್ನು ವ್ತಕ್ತಪಡಿಸಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. "ಡಾನ್ ಬ್ರಾಡ್ಮನ್‌ರಿಂದ ಹಿಡಿದು ಸುನಿಲ್ ಗವಾಸ್ಕರ್‌ವರೆಗೆ ಪ್ರತಿಯೊಬ್ಬರು ಇದು ನಿಯಮದೊಳಗೆ ಬರುತ್ತದೆ ಎಂದಿದ್ದಾರೆ. ಐಸಿಸಿ ಹಾಗೂ ಎಂಸಿಸಿ ಕೂಡ ಈ ಬಗ್ಗೆ ಒಪ್ಪಿಗೆಯ ನಿಲುವನ್ನು ತೆಗೆದುಕೊಂಡಿದೆ. ಆದರೆ ಇದನ್ನು ಎಲ್ಲಾ ತಂಡಗಳು ನಕಾರಾತ್ಮಕವಾಗಿ ಯಾಕೆ ನೋಡುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದಿದ್ದರು

Story first published: Tuesday, August 25, 2020, 9:48 [IST]
Other articles published on Aug 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X