ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ or ಚೆನ್ನೈ: ನೆಚ್ಚಿನ ಐಪಿಎಲ್ ತಂಡ ಹೆಸರಿಸಿದ ಸಂಜಯ್ ಮಂಜ್ರೇಕರ್

Sanjay Manjrekar picks which side holds the edge in IPL

ಮುಂಬೈ, ಏಪ್ರಿಲ್ 6: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಪಾರಮ್ಯ ಮೆರೆದಿರುವ ಎರಡು ತಂಡಗಳು. ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸಿಎಸ್‌ಕೆಯನ್ನು ಮುನ್ನಡೆಸುತ್ತಿದ್ದರೆ, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಎಂಐ ನಾಯಕತ್ವ ವಹಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾ ಕ್ರಿಕೆಟಿಗರ ವೇತನ ಕಡಿತ ಹೇಳಿಕೆಗೆ ಸುನಿಲ್ ಗವಾಸ್ಕರ್ ಕಿಡಿಟೀಮ್ ಇಂಡಿಯಾ ಕ್ರಿಕೆಟಿಗರ ವೇತನ ಕಡಿತ ಹೇಳಿಕೆಗೆ ಸುನಿಲ್ ಗವಾಸ್ಕರ್ ಕಿಡಿ

ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡ ಬಳಿಕ ಮುಂಬೈ ಇಂಡಿಯನ್ಸ್ ಇನ್ನಷ್ಟು ಸುಧಾರಣೆ ತೋರಿಕೊಂಡಿತ್ತು. ಅಲ್ಲದೆ ಹೆಚ್ಚು ಅದೃಷ್ಟಶಾಲಿ ತಂಡವಾಗಿಯೂ ಗುರುತಿಸಿಕೊಂಡಿತ್ತು. ಐಪಿಎಲ್‌ನ ಬಲಿಷ್ಟ ತಂಡಗಳಾದ ಮುಂಬೈ ಮತ್ತು ಚೆನ್ನೈಯಲ್ಲಿ ತನ್ನ ನೆಚ್ಚಿನ ತಂಡ ಯಾವುದೆಂದು ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಹೇಳಿಕೊಂಡಿದ್ದಾರೆ.

ಪೊಲೀಸರ ನಡೆಗೆ ಸೆಲ್ಯೂಟ್ ಹೊಡೆದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ಪೊಲೀಸರ ನಡೆಗೆ ಸೆಲ್ಯೂಟ್ ಹೊಡೆದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್

ಮುಂಬೈ ಮತ್ತು ಚೆನ್ನೈ ತಂಡಗಳಲ್ಲಿ ಎಂಐ ಎದುರಾಳಿಗೆ ಹೆಚ್ಚು ಸವಾಲೊಡ್ಡುವ ತಂಡವೆಂದು ಮಂಜ್ರೇಕರ್ ಹೇಳಿದ್ದಾರೆ. ಸಿಎಸ್‌ಕೆ ಮತ್ತು ಎಂಐ ತಂಡಗಳಲ್ಲಿ ಎಂಐ ಹೆಚ್ಚು ಸವಾಲೊಡ್ಡಬಲ್ಲ ತಂಡ. ಮುಂಬೈಯ ಜಯದ ಶೇಕಡವೂ ಹೆಚ್ಚಿದೆ ಎಂದು ಮಂಜ್ರೇಕರ್ ಅಭಿಪ್ರಾಯಿಸಿದ್ದಾರೆ.

ಧೋನಿ ಮಗಳು ಜೀವಾ ಇಲ್ಲೊಬ್ಬರ ಕೆಲಸಕ್ಕೇ ಕಲ್ಲು ಹಾಕ್ತಿದ್ದಾಳಂತೆ!ಧೋನಿ ಮಗಳು ಜೀವಾ ಇಲ್ಲೊಬ್ಬರ ಕೆಲಸಕ್ಕೇ ಕಲ್ಲು ಹಾಕ್ತಿದ್ದಾಳಂತೆ!

'ಐಪಿಎಲ್ ಆರಂಭವಾಗಿ 12 ವರ್ಷಗಳು ಕಳೆದಿವೆ. ಟೂರ್ನಿಯಲ್ಲಿ ತಂಡಗಳ ವಿಜಯದ ಶೇಕಡಾವಾರು ತೆಗೆದರೆ, ಗೆಲುವಿನ ದಾಖಲೆಗಳನ್ನು ಗಮನಿಸಿದರೆ, ಸಿಎಸ್‌ಕೆ ಎದ್ದು ಕಾಣುತ್ತದೆ. ಆದರೆ ಮುಂಬೈ ಇನ್ನೂ ಹೆಚ್ಚಿಗೆ ಹೊಳೆಯುತ್ತದೆ. ಮಂಬೈ 4 ಬಾರಿ ಟ್ರೋಫಿ ಗೆದ್ದಿದೆ. ಆದರೆ ಚೆನ್ನೈ ಕಡಿಮೆ ಪಂದ್ಯಗಳನ್ನಾಡಿ 3 ಬಾರಿ ಪ್ರಶಸ್ತಿ ಗೆದ್ದಿದೆ. ಗಮನಿಸಿದರೆ ಚೆನ್ನೈಗೆ ಮುಂಬೈ ಹೆಚ್ಚು ಭೀತಿ ಮೂಡಿಸಿದ ತಂಡವಾಗಿ ತೋರುತ್ತದೆ,' ಎಂದು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತ ಸಂಜಯ್ ವಿವರಿಸಿದರು.

Story first published: Monday, April 6, 2020, 14:08 [IST]
Other articles published on Apr 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X