ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾಮೆಂಟರಿ ಪ್ಯಾನೆಲ್‌ನಿಂದ ಕಿಕ್‌ಔಟ್: ಟ್ವಿಟ್ಟರ್‌ನಲ್ಲಿ ಮಂಜ್ರೇಕರ್ ಭಾವುಕ ಸಂದೇಶ

Sanjay Manjrekar Reacts To Removal From Commentary Panel

ಬಿಸಿಸಿಐ ಕಾಮೆಂಟರಿ ಪ್ಯಾನಲ್‌ನಿಂದ ಸಂಜಯ್ ಮಂಜ್ರೇಕರ್‌ ಅವರನ್ನು ಕಿಕ್‌ಔಟ್‌ ಮಾಡಲಾಗಿದೆ. ಕಳೆದ ಶನಿವಾರ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿತ್ತು. ಈ ಬೆಳವಣಿಯ ಬಳಿಕ ಸಂಜಯ್ ಮಂಜ್ರೇಕರ್ ಟ್ವಿಟ್ಟರ್‌ನಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ.

ಕಾಮೆಂಟರಿ ನನ್ನ ಅರ್ಹತೆ ಎಂದು ಕೊಂಡಿರಲಿಲ್ಲ ಅದು ನನಗೆ ಸಿಕ್ಕ ದೊಡ್ಡದೊಂದು ಅವಕಾಶ ಎಂದುಕೊಂಡಿದ್ದೆ. ನನ್ನನ್ನು ಆಯ್ಕೆ ಮಾಡುವುದು ನನಗೆ ಕೆಲಸ ನೀಡುವವರಿಗೆ ಬಿಟ್ಟಿರುವುದು. ನನ್ನನ್ನು ಆಯ್ಕೆ ಮಾಡಿದರೂ ಮಾಡದಿದ್ದರೂ ನಾನು ಅದನ್ನು ಗೌರವಿಸುತ್ತೇನೆ ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ಕಾಮೆಂಟರಿ ಪ್ಯಾನೆಲ್‌ನಿಂದ ಸಂಜಯ್ ಮಂಜ್ರೇಕರ್ ಕೈ ಬಿಟ್ಟ ಬಿಸಿಸಿಐಕಾಮೆಂಟರಿ ಪ್ಯಾನೆಲ್‌ನಿಂದ ಸಂಜಯ್ ಮಂಜ್ರೇಕರ್ ಕೈ ಬಿಟ್ಟ ಬಿಸಿಸಿಐ

ಇದೇ ಸಂದೇಶದಲ್ಲಿ 'ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರವನ್ನು ವರತ್ತಿಪರನಾಗಿ ನಾನು ಸ್ವೀಕರಿಸುತ್ತೇನೆ ಎಂದು ಕೂಡ ಸಂಜಯ್ ಮಂಜ್ರೇಕರ್ ಬರೆದುಕೊಂಡಿದ್ದಾರೆ. ಈ ಮೂಲಕ ಮಂಜ್ರೇಕರ್ ತನಗಾಗಿರುವ ಆಘಾತವನ್ನು ಟ್ವಿಟರ್‌ಮೂಲಕ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಸಂಜಯ್ ಮಂಜ್ರೇಕರ್ ತನ್ನ ಮಾತುಗಳಿಂದ ಒಂದಷ್ಟು ವಿವಾದಗಳಿಗೆ ಈಡಾಗಿದ್ದರು. ಕೊಲ್ಕತ್ತಾದಲ್ಲಿ ನಡೆದ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್‌ನ ಸಂದರ್ಭದಲ್ಲಿ ತನ್ನ ಸಹವಿಶ್ಲೇಷಣೆಕಾರ ಹರ್ಷ ಭೋಗ್ಲೆ ಅವರಿಗೆ ಟಾಂಗ್ ನೀಡಿ ವಿವಾದವನ್ನು ಮಾಡಿಕೊಂಡಿದ್ದರು.

ಸದ್ಯ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಗ್ಗೆಯೂ ಕ್ಷುಲ್ಲಕ ಟ್ವೀಟ್‌ವೊಂದನ್ನು ಮಾಡಿದ್ದರು. ಸೌರವ್ ಗಂಗೂಲಿ ಕಾಮೆಂಟರ್ ಬಾಕ್ಸ್‌ನಲ್ಲಿದ್ದಾಗ ಇತರ ವೀಕ್ಷಕವಿವರಣೆಕಾರರರಿಗೆ ಮಾತನಾಡಲು ವಿಡುವುದಿಲ್ಲ ಎಂದಿದ್ದರು. ಬಳಿಕ ಟೀಮ್ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಪ್ರದರ್ಶನದ ಬಗ್ಗೆಯೂ ಕಟುಮಾತುಗಳನ್ನಾಡಿದ್ದರು. ಜಡೇಜಾ ಇದಕ್ಕೆ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ತಿರುಗೇಟು ನೀಡಿದ್ದರು.

Story first published: Monday, March 16, 2020, 10:24 [IST]
Other articles published on Mar 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X