ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ ಇಬ್ಬರು ಈಗ ಸಾಧ್ಯವೇ ಇಲ್ಲ; ಈತನೆ ಮುಂದಿನ ಟೆಸ್ಟ್ ನಾಯಕ: ಸಂಜಯ್ ಮಂಜ್ರೇಕರ್

Sanjay Manjrekar said Rohit Sharma will be Indias test skipper

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಮುಕ್ತಾಯವಾಗಿದ್ದು ಭಾರತ 1-2 ಅಂತರದಿಂದ ಸೋಲು ಕಂಡಿದೆ. ಈ ಸರಣಿ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾರತೀಖಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಇತ್ತೀಚೆಗಷ್ಟೇ ಸೀಮಿತ ಓವರ್‌ಗಳ ನಾಯಕತ್ವದಿಂದ ಕೆಳಗಿಳಿದಿದ್ದ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ಕೂಡ ತೊರೆಯುವುದಾಗಿ ಘೋಷಿಸಿದ್ದಾರೆ. ಕೊಹ್ಲಿಯ ಈ ನಿರ್ಧಾರ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಅಲ್ಲದೆ ಟೀಮ್ ಇಂಡಿಯಾವನ್ನು ಟೆಸ್ಟ್ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಮುನ್ನಡೆಸುವ ಆಟಗಾರ ಯಾರು ಎಂಬುದು ಕೂಡ ಪ್ರಶ್ನೆಯಾಗಿದೆ.

ಟೀಮ್ ಇಂಡಿಯಾವನ್ನು ಟೆಸ್ಟ್ ಮಾದರಿಯಲ್ಲಿ ಮುನ್ನಡೆಸುವವರು ಯಾರು ಎಂಬ ಬಗ್ಗೆ ಬಿಸಿಸಿಐ ಮುಂದಿನ ದಿನಗಳಲ್ಲಿ ನಿರ್ಧಾರವನ್ನು ಪ್ರಕಟಿಸಲಿದೆ. ಕನಿಷ್ಟ 15 ದಿನಗಳ ನಂತರವೇ ಟೀಮ್ ಇಂಡಿಯಾದ ಟೆಸ್ಟ್ ಮಾದರಿಗೆ ನಾಯಕನ ಘೋಷಣೆಯಾಗಬಹುದು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸೀಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಹೆಸರುಗಳು ಟೆಸ್ಟ್ ನಾಯಕತ್ವಕ್ಕೆ ಬಲವಾಗು ಕೇಳಿ ಬರುತ್ತಿದೆ. ಆದರೆ ಇದರಲ್ಲಿ ಸಂಜಯ್ ಮಂಜ್ರೇಕರ್ ಓರ್ವ ಆಟಗಾರನ ಹೆಸರನ್ನು ನೇರವಾಗಿ ತೆಗೆದುಕೊಂಡಿದ್ದು ಈತ ಭಾರತೀಯ ತಂಡವನ್ನು ಟೆಸ್ಟ್ ಮಾದರಿಯಲ್ಲಿ ಮುನ್ನಡೆಸಸಲಿದ್ದಾರೆ ಎಂದಿದ್ದಾರೆ.

ಕೊಹ್ಲಿಯದ್ದು ವೈಯಕ್ತಿಕ ನಿರ್ಧಾರ: ನಾಯಕತ್ವ ತೊರೆದ ವಿರಾಟ್ ಬಗ್ಗೆ ಗಂಗೂಲಿ ಮೊದಲ ಪ್ರತಿಕ್ರಿಯೆಕೊಹ್ಲಿಯದ್ದು ವೈಯಕ್ತಿಕ ನಿರ್ಧಾರ: ನಾಯಕತ್ವ ತೊರೆದ ವಿರಾಟ್ ಬಗ್ಗೆ ಗಂಗೂಲಿ ಮೊದಲ ಪ್ರತಿಕ್ರಿಯೆ

ಈ ಸಂದರ್ಭದಲ್ಲಿ ಸಂಜಯ್ ಮಂಜ್ರೇಜರ್ ಟೆಸ್ಟ್ ತಂಡದ ನಾಯಕತ್ವದ ಹೊಣೆಗಾಗಿಕೆ ಕೆಎಲ್ ರಾಹುಲ್‌ಗೆ ಅಥವಾ ರಿಷಭ್ ಪಂತ್‌ಗೆ ಒಲಿಯುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಕೂಡ ನಾಯಕತ್ವಕ್ಕೆ ಕಾಯಬೇಕಿದ್ದು ರೋಹಿತ್ ಶರ್ಮಾ ಅವರೇ ಟೀಮ್ ಇಂಡಿಯಾದ ಟೆಸ್ಟ್ ತಂಡದ ಮುಂದಿನ ನಾಯಕ ಎಂಬುದನ್ನು ಹೇಳಿದ್ದಾರೆ.

"ನನ್ನ ಪ್ರಕಾರ ಭಾರತೀಯ ಕ್ರಿಕೆಟ್ ತಂಡದಲ್ಲಿರುವ ಎಲ್ಲರಿಗೂ ಟೆಸ್ಟ್ ಕ್ರಿಕೆಟ್ ಪವಿತ್ರವಾದ ಕ್ರಿಕೆಟ್ ಮಾದರಿ ಎಂದು ನಾನು ಭಾವಿಸುತ್ತೇನೆ. ಆದರೆ ಈ ಸುದೀರ್ಘ ಮಾದರಿಯ ನಾಯಕತ್ವ ರಿಷಭ್ ಪಂತ್ ಅಥವಾ ಕೆಎಲ್ ರಾಹುಲ್‌ಗೆ ಇಳಿಯಲಿದೆ ಎಂದು ನನಗೆ ಅನಿಸುತ್ತಿಲ್ಲ. ರೋಹಿತ್ ಶರ್ಮಾ ಅವರೇ ನಾಯಕನಾಗಲಿದ್ದಾರೆ. ಈ ಇಬ್ಬರು ಕೂಡ ಟೆಸ್ಟ್ ನಾಯಕತ್ವಕ್ಕೆ ಇನ್ನೂ ಕಾಯಬೇಕಿದೆ ಎಂದು ಮಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರಿಗೆ ಅವರ ಫಿಟ್‌ನೆಸ್‌ ಸವಾಲಾಗಲಿದೆ ಎಂಬ ಮಾತನ್ನು ಕೂಡ ಹೇಳಿದ್ದಾರೆ. ಆದರೆ ರೋಹಿತ್ ಶರ್ಮಾ ಅರಲ್ಲಿರುವ ನಾಯಕತ್ವದ ಕೌಶಲ್ಯಗಳಿಂದಾಗಿ ಈ ಹುದ್ದೆಗೆ ಅವರು ಹೆಚ್ಚು ಸೂಕ್ತವಾಗುತ್ತಾರೆ ಎಂದಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಕ್ಕಿಳಿದಿರುವ ಕಾರಣ ರೋಹಿತ್ ಶರ್ಮಾ ಅವರೇ ಮುಂದಿನ ಟೆಸ್ಟ್ ಪಂದ್ಯಲ್ಲಿ ಬಾರಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದಿದ್ದಾರೆ.

ಆಶಸ್ ಸರಣಿ: ಅಂತಿಮ ಪಂದ್ಯವನ್ನೂ ಗೆದ್ದು ಬೀಗಿದ ಆಸ್ಟ್ರೇಲಿಯಾ: 4-0 ಅಂತರದಿಂದ ಸರಣಿ ವಶಕ್ಕೆಆಶಸ್ ಸರಣಿ: ಅಂತಿಮ ಪಂದ್ಯವನ್ನೂ ಗೆದ್ದು ಬೀಗಿದ ಆಸ್ಟ್ರೇಲಿಯಾ: 4-0 ಅಂತರದಿಂದ ಸರಣಿ ವಶಕ್ಕೆ

Virat Kohli ನಿರ್ಧಾರದಿಂದ ಆಘಾತಗೊಂಡ Rohit Sharma ಹೇಳಿದ್ದೇನು? | Oneindia Kannada

ಭಾರತದ ಮುಂದಿನ ಟೆಸ್ಟ್ ಸರಣಿ ಶ್ರೀಲಂಕಾ ವಿರುದ್ಧ ಭಾರತದಲ್ಲಿ ನಡೆಯಲಿದ್ದು ಮುಂದಿನ ತಿಂಗಳು ಫೆಬ್ರವರಿ 25ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯವಾಗಿರಲಿದೆ. ಇನ್ನು ರೋಹಿತ್ ಶರ್ಮಾ ಈಗಾಗಲೇ ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ತಂಡದ ನಾಯಕನಾಗಿದ್ದು ಟೆಸ್ಟ್ ತಂಡದ ಉಪನಾಯಕನಾಗಿದ್ದರು.

Story first published: Monday, January 17, 2022, 13:47 [IST]
Other articles published on Jan 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X