ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಸ್ಟ್ರೇಲಿಯಾ ಪ್ರವಾಸದ ವೇಳೆ ಸಂಜಯ್ ಮಂಜ್ರೇಕರ್ ಮತ್ತೆ ಕಾಮೆಂಟರಿಗೆ

Sanjay Manjrekar to return to commentary during Indias tour of Australia

ನವದೆಹಲಿ: ಈ ತಿಂಗಳು ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಭಾರತದ ಮಾಜಿ ಬ್ಯಾಟ್ಸ್‌ಮನ್, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಮತ್ತೆ ಕಾಮೆಂಟರಿಗೆ ಬರಲಿದ್ದಾರೆ. ಟಿವಿ ಕಾಮೆಂಟರಿಯಲ್ಲಿ ಮಂಜ್ರೇಕರ್ ಕಾಣಿಸಿಕೊಳ್ಳಲಿದ್ದಾರೆ.

ವಿರಾಟ್ ಕೊಹ್ಲೀನ ಆರ್‌ಸಿಬಿ ನಾಯಕತ್ವದಿಂದ ಕಿತ್ಹಾಕಿ: ಗೌತಮ್ ಗಂಭೀರ್ವಿರಾಟ್ ಕೊಹ್ಲೀನ ಆರ್‌ಸಿಬಿ ನಾಯಕತ್ವದಿಂದ ಕಿತ್ಹಾಕಿ: ಗೌತಮ್ ಗಂಭೀರ್

ತಾನು ಮತ್ತೆ ಕಾಮೆಂಟರಿಗೆ ಮರಳುತ್ತಿರುವುದನ್ನು ಸಂಜಯ್ ಮಂಜ್ರೇಕರ್ ಶನಿವಾರ (ನವೆಂಬರ್ 7) ಖಾತರಿಪಡಿಸಿದ್ದಾರೆ. ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಲಿರುವ ಭಾರತ ತಂಡ ಅಲ್ಲಿ ನವೆಂಬರ್ 27ರಿಂದ ಜನವರಿ 19ರ ವರೆಗೆ 3 ಏಕದಿನ ಪಂದ್ಯ, 3 ಟಿ20ಐ ಪಂದ್ಯ ಮತ್ತು 4 ಟೆಸ್ಟ್ ಪಂದ್ಯಗಳನ್ನಾಡಲಿದೆ.

ಸೋನಿ ಪಿಕ್ಟರ್ ನೆಟ್ವರ್ಕ್ಸ್ ಭಾರತ-ಆಸ್ಟ್ರೇಲಿಯಾ ಸರಣಿಯ ಪಂದ್ಯಗಳನ್ನು ನೇರಪ್ರಸಾರಗೊಳಿಸಲಿದೆ. 2019ರ ವಿಶ್ವಕಪ್‌ ವೇಳೆ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿದ್ದರಿಂದ ಮಂಜ್ರೇಕರ್ ಅವರನ್ನು ಬಿಸಿಸಿಐ ಕಾಮೆಂಟರಿ ಪ್ಯಾನೆಲ್‌ನಿಂದ ಕಿತ್ತು ಹಾಕಲಾಗಿತ್ತು.

2021ರ ಐಪಿಎಲ್ ಆರಂಭ, ಹರಾಜು, ಆತಿಥೇಯ ದೇಶ, ತಂಡಗಳ ಮಾಹಿತಿ2021ರ ಐಪಿಎಲ್ ಆರಂಭ, ಹರಾಜು, ಆತಿಥೇಯ ದೇಶ, ತಂಡಗಳ ಮಾಹಿತಿ

55ರ ಹರೆಯದ ಸಂಜಯ್, ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿದ್ದರು. ಭಾರತದ ಪರ 37 ಟೆಸ್ಟ್ ಪಂದ್ಯಗಳಲ್ಲಿ 2043 ರನ್, 74 ಏಕದಿನ ಪಂದ್ಯಗಳಲ್ಲಿ 1994 ರನ್ ಬಾರಿಸಿದ್ದಾರೆ. ಸಂಜಯ್ ಮಂಜ್ರೇಕರ್ ಹುಟ್ಟಿದ್ದು ಕರ್ನಾಟಕ ಮಂಗಳೂರಿನಲ್ಲಿ.

Story first published: Saturday, November 7, 2020, 19:59 [IST]
Other articles published on Nov 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X