ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯೋ ಯೋ ಟೆಸ್ಟ್ ನಲ್ಲಿ ಭರ್ಜರಿ ಫಿಟ್ನೆಸ್ ತೋರಿಸಿದ ಸಂಜು ಸ್ಯಾಮ್ಸನ್!

Sanju Samson clears Yo-Yo test in banglore

ನವದೆಹಲಿ, ಜುಲೈ 12: ಒಂದು ತಿಂಗಳ ಹಿಂದೆ ಯೋ ಯೋ ಟೆಸ್ಟ್ ಫೇಲಾಗಿ ಇಂಗ್ಲೆಂಡ್ ಪ್ರವಾಸದ ಭಾರತ ಎ ತಂಡದಿಂದ ಹೊರಗುಳಿದಿದ್ದ ಸಂಜು ಸ್ಯಾಮ್ಸನ್ ಬುಧವಾರ ಯೋ ಯೋ ಫಿಟ್ನೆಸ್ ಟೆಸ್ಟನ್ನು ಪಾಸ್ ಮಾಡಿದ್ದರೆ. ಅದೂ ಟೆಸ್ಟ್ ನಲ್ಲಿ 17.3 ಪಾಯಿಂಟ್ ಗಳಿಸುವ ಮೂಲಕ ಅತ್ಯಂತ ಚುರುಕಿನ ಕ್ರಿಕೆಟರ್ ಆಗಿ ಗುರುತಿಸಿಕೊಂಡಿದ್ದಾರೆ.

ಕಾಮನ್ವೆಲ್ತ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದ ಕನ್ನಡಿಗನ ಕಡೆಗಣಿಸಿದ ಸರ್ಕಾರ!ಕಾಮನ್ವೆಲ್ತ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದ ಕನ್ನಡಿಗನ ಕಡೆಗಣಿಸಿದ ಸರ್ಕಾರ!

ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ(ಎನ್ಸಿಎ)ಯಲ್ಲಿ ನಡೆದ ಫಿಟ್ನೆಸ್ ಟೆಸ್ಟ್ ನಲ್ಲಿ ಬುಧವಾರ ಪಾಲ್ಗೊಂಡ ಸ್ಯಾಮ್ಸನ್ ಸುಲಭವಾಗಿ ಟೆಸ್ಟ್ ಮುಗಿಸುವ ಮೂಲಕ ತಾನು ಫಿಟ್ಟಾಗಿರುವುದನ್ನು ಸಾಭೀತು ಪಡಿಸಿದರು.

ಕಳೆದ ಸಾರಿ ಸಂಜು ಟೆಸ್ಟ್ ನಲ್ಲಿ ಪಾಲ್ಗೊಂಡಿದ್ದಾಗ ಬರೀ 15.6 ಅಂಕಗಳನ್ನಷ್ಟೇ ಗಳಿಸಿದ್ದರು. ಟೆಸ್ಟ್ ಪಾಸಾಗಬೇಕಾದರೆ ಆಟಗಾರ ಕನಿಷ್ಠ 16.1 ಅಂಕ ಗಳಿಸಲೇಬೇಕು. ಈ ಬಾರಿಯ ಐಪಿಯಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಪ್ರತಿನಿಧಿಸಿದ್ದ ಸಂಜು 441 ರನ್ ಸಿಡಿಸಿದ್ದರು. ಆದರೆ ಯೋಯೋ ಟೆಸ್ಟ್ ನಲ್ಲಿ ಸಂಜು ಫೇಲಾಗಿದ್ದು ಕ್ರೀಡಾಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು.

ಹಿಂದಿನ ಸಾರಿ ಯೋ ಯೋ ಟೆಸ್ಟ್ ನಲ್ಲಿ ಸಂಜು ಫೇಲಾಗಿದ್ದರಿಂದ ಭಾರತ ಎ ತಂಡದಲ್ಲಿ ಸ್ಯಾಮ್ಸನ್ ಬದಲಿಗೆ ಇಶಾನ್ ಕಿಶಾನ್ ಗೆ ಅವಕಾಶ ನೀಡಲಾಗಿತ್ತು. ಆದರೀಗ ಸಂಜು ಟೆಸ್ಟ್ ಪಾಸ್ ಮಾಡಿಕೊಳ್ಳುವ ಮೂಲಕ ಸೈ ಎನಿಸಿಕೊಂಡಿದ್ದು, ಕ್ರೀಡಾಭಿಮಾನಿಗಳಿಗೂ ಖುಷಿ ತಂದಿದೆ.

ಇತ್ತೀಚೆಗೆ ಲೋಕಸಭಾ ಸದಸ್ಯ ಶಶಿ ತರೂರ್ ಅವರು ಯೋಯೋ ಟೆಸ್ಟ್ ಬಗ್ಗೆ ಪ್ರಶ್ನಿಸಿದ್ದು, ಆ ವೇಳೆ ಸ್ಯಾಮ್ಸನ್ ಅವರನ್ನೂ ಉಲ್ಲೇಖಿಸಿದ್ದರು. ಜೊತೆಗೆ ತರೂರ್, ಯೋಯೋ ಟೆಸ್ಟ್ ಪ್ರಕ್ರಿಯೆಯನ್ನು ಮರು ಪರಿಶೀಲಿಸುವಂತೆ ಬಿಸಿಸಿಐಯನ್ನು ಕೋರಿಕೊಂಡಿದ್ದಾರೆ ಕೂಡ.

Story first published: Thursday, July 12, 2018, 22:15 [IST]
Other articles published on Jul 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X