ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಂಜು ಸ್ಯಾಮ್ಸನ್ ಇಷ್ಟು ಮಾಡಿದ್ರೆ ಸಾಕು ಭಾರತದ ಪರ ಆಡೋದು ಕನ್ಫರ್ಮ್: ಶೇನ್ ವಾರ್ನ್

Sanju Samson Could Play All Formats For India If Consistent: Shane Warne

ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾ ಪರ ಮೂರು ಫಾರ್ಮೆಟ್‌ನಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದು, ಖಂಡಿತವಾಗಿಯೂ ಭಾರತದ ಪರ ಎಲ್ಲಾ ಫಾರ್ಮೆಟ್‌ನಲ್ಲಿ ಆಡುತ್ತಾರೆ ಎಂದು ರಾಜಸ್ಥಾನ್ ರಾಯಲ್ಸ್ ಮಾರ್ಗದರ್ಶಿ ಶೇನ್ ವಾರ್ನ್ ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷದ ಐಪಿಎಲ್‌ನಲ್ಲಿ ಸ್ಯಾಮ್ಸನ್ ಈವರೆಗೆ ಮೂರು ಪಂದ್ಯಗಳನ್ನು ಆಡಿದ್ದು, 167 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ, ಬಲಗೈ ಬ್ಯಾಟ್ಸ್‌ಮನ್ 74 ರನ್ ಗಳಿಸಿದರೆ, ಎರಡನೇ ಗೇಮ್‌ನಲ್ಲಿ ಅವರು 85 ರನ್ ಗಳಿಸಿ 224 ರ ಗುರಿಯನ್ನು ಬೆನ್ನಟ್ಟಿದರು. ಆದರೆ ಮೂರನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 8 ರನ್‌ಗೆ ಔಟಾದರು.

ಸುಲಭವಾಗಿ ಸಿಕ್ಸರ್ ಸಿಡಿಸುವ ಸಂಜು ಸ್ಯಾಮ್ಸನ್ ತಾಕತ್ತಿನ ಗುಟ್ಟು..!ಸುಲಭವಾಗಿ ಸಿಕ್ಸರ್ ಸಿಡಿಸುವ ಸಂಜು ಸ್ಯಾಮ್ಸನ್ ತಾಕತ್ತಿನ ಗುಟ್ಟು..!

ಎಎನ್‌ಐ ಜೊತೆಗಿನ ಸಂವಾದದಲ್ಲಿ, ವಾರ್ನ್ ರಾಯಲ್ಸ್ ಅಭಿಯಾನದಿಂದ ತಮ್ಮ ನಿರೀಕ್ಷೆಗಳ ಬಗ್ಗೆ ತೆರೆದಿಟ್ಟರು. ಈ ವರ್ಷ ಮತ್ತು ಐಪಿಎಲ್ 2020 ರಲ್ಲಿ ಮಾರ್ಗದರ್ಶಕರಾಗಿ ಅವರ ಪಾತ್ರ ಹೇಗೆ ಭಿನ್ನವಾಗಿರುತ್ತದೆ ಎಂಬುದರ ಕುರಿತು ಅವರು ತಿಳಿಸಿದರು.

ಇದೇ ವೇಳೆ ಸ್ಯಾಮ್ಸನ್ ಬಗ್ಗೆ ಮಾತನಾಡುತ್ತಾ, "ಸಂಜು ಸ್ಯಾಮ್ಸನ್‌ಗೆ ನಾನು ಬಹಳ ಸಮಯದಿಂದ ಹೇಳುತ್ತಿದ್ದೇನೆ, ಸಂಜು ಭಾರತಕ್ಕಾಗಿ ಎಲ್ಲಾ ರೀತಿಯ ಆಟಗಳನ್ನು ಆಡಬೇಕು. ಆತ ಅಂತಹ ಗುಣಮಟ್ಟದ ಆಟಗಾರ, ಅವರು ಮೊದಲ ಪಂದ್ಯದಲ್ಲಿ ಮತ್ತೆ ಆ ಶಕ್ತಿಯನ್ನು ತೋರಿಸಿದ್ದಾರೆ ಮತ್ತು ಅವರು ಈ ವರ್ಷ ಸ್ಥಿರ ಪ್ರದರ್ಶನ ತೋರುತ್ತಾರೆಂದು ನಾನು ಭಾವಿಸುತ್ತೇನೆ.''

"ಈ ವರ್ಷ ಅವರು ಸ್ಥಿರವಾದ ಪ್ರದರ್ಶನವನ್ನು ತೋರಿದರೆ, ಅವರು ಎಲ್ಲಾ ರೀತಿಯ ಆಟಗಳಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ನೀವು ನೋಡುತ್ತೀರಿ ಎಂದು ಶೇನ್ ವಾರ್ನ್ ಹೇಳಿದರು.

ಇದೇ ವೇಳೆ "ಅವರು ಬಹಳ ವಿಶೇಷ ಪ್ರತಿಭೆ ಮತ್ತು ಅವರು ಶೀಘ್ರದಲ್ಲೇ ಅಂತರರಾಷ್ಟ್ರೀಯ ವೇದಿಕೆಯನ್ನು ತಲುಪುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು 51 ವರ್ಷದ ಆಸೀಸ್ ಮಾಜಿ ಆಟಗಾರ ವಾರ್ನ್ ತಿಳಿಸಿದರು.

Story first published: Tuesday, October 6, 2020, 14:31 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X