ಸಂಜು ಸ್ಯಾಮ್ಸನ್ ತೋಳ್ಬಲದ ಸಂಭ್ರಮಾಚರಣೆ ಹಿಂದಿನ ಕಾರಣವೇನು? : 'ಸ್ಯಾಮ್ಸನ್' ರಹಸ್ಯ

ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅರ್ಧಶತಕ ದಾಖಳಿಸಿದ ಬಳಿಕ ಬೈಸೆಪ್ಸ್ ತೋರಿಸುತ್ತಾ ಸಂಭ್ರಮಾಚರಣೆಯನ್ನು ಆಚರಿಸಿದರು. ಈ ಮೂಲಕ ಬಲಗೈ ಬ್ಯಾಟ್ಸ್‌ಮನ್ ಅಂತಿಮವಾಗಿ ತಮ್ಮ ಫಾರ್ಮ್ ಅನ್ನು ಮರಳಿ ಪಡೆದರು, ಅದೂ ಕೂಡ ಅವರ ತಂಡಕ್ಕೆ ಹೆಚ್ಚು ಅಗತ್ಯವಿದ್ದಾಗ ಅಜೇಯ ಅರ್ಧಶತಕ ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಮುಂಬೈ ಇಂಡಿಯನ್ಸ್ ನೀಡಿದ 196 ರ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್‌ ಯಾರೂ ಊಹಿಸದ ರೀತಿಯಲ್ಲಿ 18.2 ಓವರ್‌ಗಳಲ್ಲೇ ಗುರಿಯನ್ನ ಮುಟ್ಟಿತು. ಇದರಲ್ಲಿ ಬೆನ್‌ಸ್ಟೋಕ್ಸ್‌ ಶತಕ ಸಿಡಿಸಿ ಮಿಂಚಿದ್ರೆ, ಸಂಜು ಸ್ಯಾಮ್ಸನ್ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಸಿ 31 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿದರು.

ಸಂಜು ಸ್ಯಾಮ್ಸನ್ ಸಾಮರ್ಥ್ಯ ತಿಳಿಯಲು ಪ್ರಥಮ ದರ್ಜೆ ಬ್ಯಾಟಿಂಗ್ ಸರಾಸರಿ ನೋಡಿ ಸಾಕು: ಸಂಜಯ್ ಮಂಜ್ರೇಕರ್

ಈ ಪಂದ್ಯದಲ್ಲಿ ಐವತ್ತು ರನ್ ಗಡಿ ದಾಟಿದ ಕೂಡಲೇ, ಸ್ಯಾಮ್ಸನ್ ತನ್ನ ಬೈಸೆಪ್ಸ್ ತೋರಿಸುವ ಮೂಲಕ ಅರ್ಧಶತಕವನ್ನ ಸಂಭ್ರಮಿಸಿದರು. ಆಟದ ನಂತರ ಸ್ಯಾಮ್ಸನ್ ತನ್ನ 'ಬೈಸ್ಪ್' ಆಚರಣೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದರು. ಈ ಆಚರಣೆಯು ಬೈಬಲ್‌ನ ಉಲ್ಲೇಖವಾಗಿದೆ ಮತ್ತು ಅವರ ಸಾಮರ್ಥ್ಯದ ಬಗ್ಗೆ ಸ್ವತಃ ನೆನಪಿಸಿಕೊಳ್ಳುವುದಾಗಿದೆ ಎಂದರು.

"ನನ್ನ ಹೆಸರು ಏನು ಎಂದು ನನಗೆ ನೆನಪಿಸಿಕೊಳ್ಳುತ್ತಾ, ಸ್ಯಾಮ್ಸನ್ ವಿಶ್ವದ ಪ್ರಬಲ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ, ನಾನು ಅದನ್ನು ನೆನಪಿಸಿಕೊಳ್ಳುತ್ತಲೇ ಇರುತ್ತೇನೆ. ನಾನು ತುಂಬಾ ಸ್ಟ್ರಾಂಗ್ ಮತ್ತು ನಾನು ಹೆಚ್ಚು ಸಿಕ್ಸರ್‌ಗಳನ್ನು ಹೊಡೆಯಬಲ್ಲೆ "ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

"ನಾನು ನನ್ನನ್ನೇ ನಂಬುತ್ತಲೇ ಇದ್ದೆ. ನೀವು 14 ಪಂದ್ಯಗಳನ್ನ ಆಡುವಾಗ, ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ನನ್ನ ಆಟದ ಯೋಜನೆಯಲ್ಲಿ ನಾನು ಸ್ವಲ್ಪ ಕೆಲಸ ಮಾಡಿದ್ದೇನೆ. ದೊಡ್ಡ ಮೈದಾನದಲ್ಲಿ, ವಿಭಿನ್ನ ವಿಕೆಟ್‌ಗಳಲ್ಲಿ, ಹೆಚ್ಚು ಸಮಯ ತೆಗೆದುಕೊಳ್ಳಬೇಕು, ಹೆಚ್ಚು ಕ್ರಿಕೆಟಿಂಗ್ ಹೊಡೆತಗಳನ್ನು ಆಡಬೇಕು, ಅದು ನಾನು ಇಂದು ಮಾಡಿದ ವ್ಯತ್ಯಾಸ. ಇದು ಸ್ಟೋಕ್ಸ್ ಅವರೊಂದಿಗೆ ಅದ್ಭುತ ಬ್ಯಾಟಿಂಗ್ ಆಗಿತ್ತು. ಕಳೆದ ಮೂರು ಪಂದ್ಯಗಳಲ್ಲಿ ನಾವು ವಿಕೆಟ್‌ಗಳ ನಡುವೆ ಉತ್ತಮ ಸಮಯವನ್ನು ಕಳೆದಿದ್ದೇವೆ, ಇದು ಅವರೊಂದಿಗೆ ಅತ್ಯುತ್ತಮ ಸಮಯ, ನಿಜವಾಗಿಯೂ ಆನಂದಿಸಿದೆವು "ಎಂದು ಅವರು ಹೇಳಿದರು.

ದೊಡ್ಡ ಸಿಕ್ಸರ್‌ಗಳನ್ನು ಹೊಡೆಯಲು ತಾನು ಹೆಚ್ಚು ಪ್ರಯತ್ನಿಸುತ್ತಿಲ್ಲ ಎಂದು ಕೇರಳ ತಾರೆ ತಮ್ಮ ಆಟದ ಬಗ್ಗೆ ಮತ್ತಷ್ಟು ತೆರೆದಿಟ್ಟರು. ಅವರು ಅಗತ್ಯವಿರುವ ರನ್-ದರ ಅಥವಾ ತಮ್ಮ ತಂಡಕ್ಕೆ ಅಗತ್ಯವಿರುವ ರನ್‌ಗಳನ್ನು ನೋಡುತ್ತಿಲ್ಲ ಮತ್ತು ವಿಷಯಗಳನ್ನು ಸರಳವಾಗಿಡಲು ಎದುರಿಸುವ ಚೆಂಡಿನ ಅರ್ಹತೆಗೆ ಅನುಗುಣವಾಗಿ ಆಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಗೆಲುವಿನೊಂದಿಗೆ, ರಾಯಲ್ಸ್ ಈಗ 12 ಪಂದ್ಯಗಳಿಂದ ಐದು ಗೆಲುವುಗಳನ್ನು ಹೊಂದಿದೆ ಮತ್ತು ಪ್ಲೇ ಆಫ್ ತಲುಪುವ ಹುಡುಕಾಟದಲ್ಲಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ 11 ಪಂದ್ಯಗಳಿಂದ ಏಳು ಜಯಗಳಿಸಿ ಪಾಯಿಂಟ್ ಟೇಬಲ್‌ನಲ್ಲಿ ಇನ್ನೂ ಅಗ್ರಸ್ಥಾನದಲ್ಲಿದೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, October 26, 2020, 17:28 [IST]
Other articles published on Oct 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X