ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಂಜು ಸ್ಯಾಮ್ಸನ್ ಸಾಮರ್ಥ್ಯ ತಿಳಿಯಲು ಪ್ರಥಮ ದರ್ಜೆ ಬ್ಯಾಟಿಂಗ್ ಸರಾಸರಿ ನೋಡಿ ಸಾಕು: ಸಂಜಯ್ ಮಂಜ್ರೇಕರ್

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ಆರಂಭಿಕ ಎರಡು ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬರಿದಿದ್ದ ರಾಜಸ್ತಾನ್ ರಾಯಲ್ಸ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ನಂತರದ ಮೂರು ಪಂದ್ಯಗಳಲ್ಲಿ ಮಂಕಾಗಿದ್ದಾರೆ. ಮ್ಯಾಚ್‌ ವಿನ್ನಿಂಗ್ ಸಾಮರ್ಥ್ಯವುಳ್ಳ ಸ್ಯಾಮ್ಸನ್ ಮೂರು ಪಂದ್ಯಗಳಲ್ಲಿ ಎರಡಂಕಿ ವೈಯಕ್ತಿಕ ಮೊತ್ತವನ್ನೂ ದಾಖಲಿಸುವಲ್ಲಿ ವಿಫಲರಾಗಿದ್ದಾರೆ.

ಸಂಜು ಸ್ಯಾಮ್ಸನ್‌ ಬ್ಯಾಟಿಂಗ್ ಸಾಮರ್ಥ್ಯದ ಕುರಿತು ಈಗಾಗಲೇ ದಿಗ್ಗಜರೇ ಅನೇಕ ಬಾರಿ ಹೊಗಳಿದ್ದಾರೆ. ಆದರೆ ಸ್ಯಾಮ್ಸನ್ ಪ್ರದರ್ಶನ ಎರಡೇ ಪಂದ್ಯಕ್ಕೆ ಮುಗೀತಾ ಎಂಬ ಟೀಕೆಗಳಿಗೆ ಕಾರಣವಾಗಿದೆ.

 ಈ 5 ಆಟಗಾರರನ್ನು ತಂಡದಿಂದ ಕೈ ಬಿಟ್ಟು ಇನ್ನೂ ಪಶ್ಚಾತ್ತಾಪ ಪಡುತ್ತಿರುವ ಡೆಲ್ಲಿ ಈ 5 ಆಟಗಾರರನ್ನು ತಂಡದಿಂದ ಕೈ ಬಿಟ್ಟು ಇನ್ನೂ ಪಶ್ಚಾತ್ತಾಪ ಪಡುತ್ತಿರುವ ಡೆಲ್ಲಿ

74 ಮತ್ತು 85 ರನ್‌ ದಾಖಲಿಸಿದ್ದ ಸಂಜು ಸ್ಯಾಮ್ಸನ್

74 ಮತ್ತು 85 ರನ್‌ ದಾಖಲಿಸಿದ್ದ ಸಂಜು ಸ್ಯಾಮ್ಸನ್

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ, ಬಲಗೈ ಬ್ಯಾಟ್ಸ್‌ಮನ್ ಸಂಜು 74 ರನ್ ಗಳಿಸಿದರೆ, ಎರಡನೇ ಗೇಮ್‌ನಲ್ಲಿ ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ 85 ರನ್ ಗಳಿಸಿ 224 ರ ಗುರಿಯನ್ನು ಬೆನ್ನಟ್ಟಿದರು. ಆದರೆ ಮೂರನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 8 ರನ್‌ಗೆ ಔಟಾದರು. ನಂತರದ ಎರಡು ಪಂದ್ಯಗಳಲ್ಲಿ 4 ಮತ್ತು 0 ರನ್‌ಗಳನ್ನು ಗಳಿಸಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ ಕ್ರಮವಾಗಿ 74 ಮತ್ತು 85 ರನ್‌ಗಳನ್ನು ದಾಖಲಿಸಿದ್ದ ಸಂಜು ಸ್ಯಾಮ್ಸನ್‌, ನಂತರ ಮೂರು ಪಂದ್ಯಗಳಲ್ಲಿ ಕ್ರಮವಾಗಿ 8, 2018 ಮತ್ತು 2019ರ ಆವೃತ್ತಿಗಳಲ್ಲಿ ಗಳಿಸುತ್ತಿದ್ದ ಶೇ. 40 ರಷ್ಟು ರನ್‌ಗಳನ್ನು ಸ್ಯಾಮ್ಸನ್‌ ಆಡಿದ ಮೂರು ಪಂದ್ಯಗಳಿಂದ ಗಳಿಸಿದ್ದಾರೆ.

ಸಂಜು ಸ್ಯಾಮ್ಸನ್ ಪ್ರದರ್ಶನಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದ ಶೇನ್ ವಾರ್ನ್

ಸಂಜು ಸ್ಯಾಮ್ಸನ್ ಪ್ರದರ್ಶನಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದ ಶೇನ್ ವಾರ್ನ್

2018 ಮತ್ತು 2019ರ ಆವೃತ್ತಿಗಳಲ್ಲಿ ಗಳಿಸುತ್ತಿದ್ದ ಶೇ. 40 ರಷ್ಟು ರನ್‌ಗಳನ್ನು ಸ್ಯಾಮ್ಸನ್‌ ಆಡಿದ ಮೂರು ಪಂದ್ಯಗಳಿಂದ ಗಳಿಸಿದ್ದರು. ಈತನ ಪ್ರದರ್ಶನ ಕಂಡು ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್‌ ಅಚ್ಚರಿ ವ್ಯಕ್ತಪಡಿಸಿದ್ದರು.

ಸಂಜು ಸ್ಯಾಮ್ಸನ್ ಮೂರು ಫಾರ್ಮೆಟ್‌ನಲ್ಲಿ ಆಡುವ ಸಾಮರ್ಥ್ಯವನ್ನು ಹೊಂದಿದ್ದು, ಇನ್ನೂ ಭಾರತದ ಪರ ಆಡದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ ಎಂದು ಶೇನ್ ವಾರ್ನ್ ಹೇಳಿದ್ದಾರೆ.

ಆತನೇನು ದೇವರಲ್ಲ: ಸ್ಟಾರ್ ಆಲ್‌ರೌಂಡರ್ ಬಗ್ಗೆ ಆಕಾಶ್ ಚೋಪ್ರ ಹೇಳಿಕೆ

ಶಾರ್ಟ್ ಬಾಲ್‌ ಎಸೆತಕ್ಕೆ ವಿಕೆಟ್ ಒಪ್ಪಿಸಿದ ಸಂಜು

ಶಾರ್ಟ್ ಬಾಲ್‌ ಎಸೆತಕ್ಕೆ ವಿಕೆಟ್ ಒಪ್ಪಿಸಿದ ಸಂಜು

ತಮ್ಮ ದೌರ್ಬಲ್ಯ ಶಾರ್ಟ್ ಬಾಲ್‌ ಎಂಬುದನ್ನು ಮತ್ತೊಮ್ಮೆ ಕೇರಳ ಬ್ಯಾಟ್ಸ್‌ಮನ್‌ ಸಾಭೀತು ಪಡಿಸಿದರು. ಕಳೆದ ಮೂರು ಇನಿಂಗ್ಸ್‌ಗಳಲ್ಲಿ ಸಂಜು ಸ್ಯಾಮ್ಸನ್‌, ಎರಡರಲ್ಲಿ ಶಾರ್ಟ್ ಎಸೆತ ಎದುರಿಸುವ ವೇಳೆ ವಿಕೆಟ್‌ ಒಪ್ಪಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಾರೆ ಮತ್ತೆ ಪುಟಿಯುವಲ್ಲಿ ಹತಾಶರಾಗಿದ್ದರೆ.

ಇದೇ ವೇಳೆಯಲ್ಲಿ ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಸಂಜಯ್‌ ಮಾಂಜ್ರೇಕರ್‌, ಬಲಗೈ ಬ್ಯಾಟ್ಸ್‌ಮನ್‌ ಬಗ್ಗೆ ಆತಂಕಕಾರಿ ಸಂಗತಿಯೊಂದಿಗೆ ಗಮನ ಸೆಳೆದಿದ್ದಾರೆ.

ಸಂಜು ಸ್ಯಾಮ್ಸನ್ ಪ್ರಥಮ ದರ್ಜೆ ಬ್ಯಾಟಿಂಗ್ ಸರಾಸರಿ ನೋಡಿ!

ಸಂಜು ಸ್ಯಾಮ್ಸನ್ ಪ್ರಥಮ ದರ್ಜೆ ಬ್ಯಾಟಿಂಗ್ ಸರಾಸರಿ ನೋಡಿ!

ಮಂಗಳವಾರ ನಡೆದಿದ್ದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿಯೂ ಸಂಜು ಸ್ಯಾಮ್ಸನ್‌ ವೈಫಲ್ಯ ಅನುಭವಿಸಿದ್ದರು. ಈ ಬಗ್ಗೆ ಟ್ವೀಟ್‌ ಮಾಡಿದ ಸಂಜಯ್‌ ಮಂಜ್ರೇಕರ್ ಪ್ರಥಮ ದರ್ಜೆ ದಾಖಲೆಯನ್ನು ನೋಡುವ ಮೂಲಕ ಸಂಜು ಸ್ಯಾಮ್ಸನ್‌ ಅವರ ಸಾಮರ್ಥ್ಯವನ್ನು ನಿರ್ಣಯಿಸಬೇಕು ಎಂದು ಹೇಳಿದರು.

ಕೇರಳ ಬ್ಯಾಟ್ಸ್‌ಮನ್‌ ಪ್ರಥಮ ದರ್ಜೆ ಕ್ರಿಕೆಟ್‌ ಸರಾಸರಿ 37(37.64) ಇದೆ. ಇವರ ಸರಾಸರಿಗಿಂತ ಮಯಾಂಕ್‌ ಅಗರ್ವಾಲ್‌(57) ಹಾಗೂ ಯುವ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌(73) ಜಾಸ್ತಿ ಇದೆ.

"ಯಾವುದೇ ಸ್ವರೂಪ ಇರಲಿ, ಆಟಗಾರನ ಬಗ್ಗೆ ಸಾಮಾನ್ಯ ಕಲ್ಪನೆಯನ್ನು ಪಡೆಯಲು ಆಟಗಾರನ ಪ್ರಥಮ ದರ್ಜೆ ದಾಖಲೆಯನ್ನು ನೋಡುವುದನ್ನು ನಾನು ಸೂಚಿಸುತ್ತೇನೆ. ಸ್ಯಾಮ್ಸನ್ ಬಗ್ಗೆ ಯಾವಾಗಲೂ ನನ್ನನ್ನು ಇದೇ ಕಾಡುತ್ತಿದೆ. ಅವರ ಪ್ರಥಮ ದರ್ಜೆ ಕ್ರಿಕೆಟ್‌ ಸರಾಸರಿ 37 ಇದೆ. ಮಾಯಾಂಕ್ 57 ಮತ್ತು ಗಿಲ್ ಅವರ 21 ಪಂದ್ಯಗಳಲ್ಲಿ 73 ರನ್ ಗಳಿಸಿದ್ದಾರೆ," ಎಂದು ಮಂಜ್ರೇಕರ್ ಟ್ವೀಟ್‌ ಮಾಡಿದ್ದಾರೆ.

ಸಂಜಯ್ ಮಂಜ್ರೇಕರ್ ಮಾತಿನ ಅರ್ಥವೇನು?

ಸಂಜಯ್ ಮಂಜ್ರೇಕರ್ ಮಾತಿನ ಅರ್ಥವೇನು?

ಸಂಜಯ್‌ ಮಾಂಜ್ರೇಕರ್‌ ಅವರ ತಮ್ಮ ಮಾತಿನ ಅರ್ಥ ಸಂಜು ಸ್ಯಾಮ್ಸನ್‌ ಸಾಮರ್ಥ್ಯ ತಿಳಿದುಕೊಳ್ಳಲು ಪ್ರಥಮ ದರ್ಜೆ ಕ್ರಿಕೆಟ್‌ ಸರಾಸರಿ ನೋಡಿದರೆ, ಸಾಕು ಅರ್ಥವಾಗುತ್ತದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ದಾಖಲೆ ಅಷ್ಟೊಂದು ಚೆನ್ನಾಗಿಲ್ಲ. ಇನ್ನೂ ಐಪಿಎಲ್‌ನಲ್ಲಿ ವಿಫಲರಾಗುತ್ತಿರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂಬುದಾಗಿದೆ.

ಸಂಜು ಸ್ಯಾಮ್ಸನ್‌ ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧ ಡಕ್‌ ಔಟ್‌ ಆದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 57 ರನ್‌ಗಳಿಂದ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿತು. ಆ ಮೂಲಕ ರಾಜಸ್ಥಾನ್ ರಾಯಲ್ಸ್ ಸತತ ಮೂರು ಪಂದ್ಯಗಳಲ್ಲಿ ಸೋಲನ್ನ ಕಂಡಿದೆ.

Story first published: Wednesday, October 7, 2020, 18:03 [IST]
Other articles published on Oct 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X