ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಂಜು ಸ್ಯಾಮ್ಸನ್‌ಗೆ ಯುವರಾಜ್‌ ಸಿಂಗ್‌ನಂತೆ ಸಿಕ್ಸರ್ ಸಿಡಿಸುವ ಸಾಮರ್ಥ್ಯವಿದೆ: ಡೇಲ್ ಸ್ಟೇನ್

Sanju samson

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಹೋರಾಟದ ನಡುವೆಯು ಟೀಂ ಇಂಡಿಯಾ 9 ರನ್‌ಗಳಿಂದ ಸೋಲನ್ನ ಅನುಭವಿಸಿದೆ. ದಕ್ಷಿಣ ಆಫ್ರಿಕಾ ನೀಡಿದ್ದ 250ರನ್‌ಗಳ ಗುರಿ ಬೆನ್ನತ್ತಿದ ಭಾರತವು ಗುರಿ ತಲುಪಲಾಗದೇ ಮುಗ್ಗರಿಸಿತು.

ಅಂತಿಮ ಓವರ್‌ನಲ್ಲಿ ತನ್ನ ಸ್ಫೊಟಕ ಆಟವಾಡಿದ ಸಂಜು ಸ್ಯಾಮ್ಸನ್‌ 39ನೇ ಓವರ್‌ನಲ್ಲಿ ಹೆಚ್ಚು ಎಸೆತಗಳನ್ನ ಎದುರಿಸಿದ್ದೇ ಆದಲ್ಲಿ ಭಾರತ ಗೆಲುವಿನ ಗೆರೆ ದಾಟುತ್ತಿತ್ತು. 40 ಓವರ್‌ನಲ್ಲಿ 250 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಆದ್ರೂ ಕೊನೆಯಲ್ಲಿ ಶ್ರೇಯಸ್ ಅಯ್ಯರ್ ಅರ್ಧಶತಕ ಹಾಗೂ ಸಂಜು ಸ್ಯಾಮನ್ಸ ಅಜೇಯ ಹೋರಾಟ ತಂಡವನ್ನ ಗೆಲುವಿನ ಸಮೀಪಕ್ಕೆ ಕೊಂಡೊಯ್ದಿತು.

ಸಂಜು ಸ್ಯಾಮ್ಸನ್ ಅಜೇಯ ಹೋರಾಟ ವ್ಯರ್ಥ

ಸಂಜು ಸ್ಯಾಮ್ಸನ್ ಅಜೇಯ ಹೋರಾಟ ವ್ಯರ್ಥ

40 ಓವರ್‌ಗಳಲ್ಲಿ 250 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಶಿಖರ್ ಧವನ್, ಶುಭಮನ್ ಗಿಲ್ ಸಿಂಗಲ್ ಡಿಜಿಟ್‌ಗೆ ಔಟಾದ್ರೆ, ರುತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಉತ್ತಮ ಆಟವಾಡುವಲ್ಲಿ ಎಡವಿದ್ರು. ಆದ್ರೆ ಶ್ರೇಯಸ್ ಅಯ್ಯರ್ 37 ಎಸೆತಗಳಲ್ಲಿ 50ರನ್ ಕಲೆಹಾಕಿ ತಂಡಕ್ಕೆ ಆಧಾರವಾದ್ರು.

ಪಂದ್ಯದ ಅಂತ್ಯದವರೆಗೂ ಅಜೇಯರಾಗಿ ಉಳಿದ ಸಂಜು ಸ್ಯಾಮ್ಸನ್‌ ಅದ್ಭುತ ಆಟವಾಡಿದ್ರೂ ಸಹ ತಂಡವನ್ನ ಗೆಲುವಿನ ದಡ ತಲುಪಿಸುವಲ್ಲಿ ಶತ ಪ್ರಯತ್ನ ನಡೆಸಿದ್ರು. 63 ಎಸೆತಗಳಲ್ಲಿ ಅಜೇಯ 83ರನ್‌ ಕಲೆಹಾಕಿದ ಸಂಜು ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ ಒಳಗೊಂಡಿದ್ದವು.

ಆದ್ರೆ ಅದಾಗಲೇ ಟಾಪ್ ಆರ್ಡರ್ ಬ್ಯಾಟರ್‌ಗಳಾದ ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ ಸಾಕಷ್ಟು ಎಸೆತಗಳನ್ನ ವ್ಯರ್ತ ಮಾಡಿದ್ದರ ಜೊತೆಗೆ 39ನೇ ಓವರ್‌ನಲ್ಲಿ ಅವೇಶ್ ಖಾನ್ ನಾಲ್ಕು ಎಸೆತಗಳನ್ನ ಎದುರಿಸದ ಪರಿಣಾಮ ಅಂತಿಮ ಓವರ್‌ನಲ್ಲಿ ಸ್ಯಾಮ್ಸನ್‌ಗೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

IND vs SA 2022 : ಮೊದಲನೆ ಏಕದಿನ ಪಂದ್ಯದಲ್ಲಿ ನಿರ್ಮಾಣವಾದ ಮೂರು ದಾಖಲೆಗಳಿವು

ಸಂಜು ಸ್ಯಾಮ್ಸನ್ ಆಟಕ್ಕೆ ಹೊಗಳಿದ ಕ್ರಿಕೆಟ್ ದಿಗ್ಗಜರು

ಸಂಜು ಸ್ಯಾಮ್ಸನ್ ಆಟಕ್ಕೆ ಹೊಗಳಿದ ಕ್ರಿಕೆಟ್ ದಿಗ್ಗಜರು

ಟೀಂ ಇಂಡಿಯಾದ ವಿಕೆಟ್‌ಗಳ ಪತನ ಒಂದೆಡೆಯಾದ್ರೆ, ಸಂಜು ಸ್ಯಾಮ್ಸನ್ ಅಜೇಯ ಹೋರಾಟವು ಕ್ರಿಕೆಟ್ ದಿಗ್ಗಜರನ್ನೇ ಮೆಚ್ಚಿಸಿದೆ. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸಂಜು ಕಳೆದ ಕೆಲವು ತಿಂಗಳಿನಿಂದ ಉತ್ತಮ ಫಾರ್ಮ್‌ನಲ್ಲಿದ್ದು, ರನ್‌ಗಳ ಬೇಟೆಯಾಡುತ್ತಿದ್ದಾರೆ.

ಸಂಜು ಸ್ಯಾಮ್ಸನ್‌ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿ ಬಹಳ ಸಮಯವೇ ಆಗಿದ್ರೂ, ಸ್ಥಿರ ಪ್ರದರ್ಶನದ ಕೊರತೆ ಜೊತೆಗೆ, ಸತತ ಅವಕಾಶಗಳ ಕೊರತೆಯನ್ನ ಎದುರಿಸುತ್ತಿದ್ದರು. ಆದ್ರೆ ಸ್ಯಾಮ್ಸನ್ ಇದೀಗ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುತ್ತಿದ್ದು, ಸಿಕ್ಕ ಅವಕಾಶವನ್ನ ಎರಡೂ ಕೈನಿಂದ ಬಾಚಿಕೊಂಡಿದ್ದಾರೆ.

ನಾಯಿಗಳು ಬೊಗಳುತ್ತವೇ ಎಂದು ಕಲ್ಲು ಹೊಡೆಯುತ್ತಾ ನಿಲ್ಲಲಾರೆ: ಟೀಕಾಕಾರರ ಬಾಯಿ ಮುಚ್ಚಿಸಿದ ಜಸ್ಪ್ರೀತ್ ಬುಮ್ರಾ!

ಸಂಜುಗೆ ಯುವರಾಜ್ ಸಿಂಗ್‌ನಂತೆ ಆಡುವ ಸಾಮರ್ಥ್ಯವಿದೆ: ಡೇಲ್ ಸ್ಟೇನ್

ಸಂಜುಗೆ ಯುವರಾಜ್ ಸಿಂಗ್‌ನಂತೆ ಆಡುವ ಸಾಮರ್ಥ್ಯವಿದೆ: ಡೇಲ್ ಸ್ಟೇನ್

ಇದ್ರ ಜೊತೆಗೆ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಡೇಲ್ ಸ್ಟೇನ್, ಸಂಜು ಸ್ಯಾಮ್ಸನ್‌ಗೆ ಯುವರಾಜ್ ಸಿಂಗ್ ನಂತೆ ಆಡುವ ಸಾಮರ್ಥ್ಯವಿದೆ ಎಂದು ಹೊಗಳಿದಿದ್ದಾರೆ. ಯುವರಾಜ್ ಸಿಂಗ್ ರೀತಿಯಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸುವ ಸಾಮರ್ಥ್ಯ ಆತನಿಗಿದ್ದು, ಭಾರತಕ್ಕೆ ಪಂದ್ಯ ಗೆಲ್ಲಿಸಿಕೊಡಬಲ್ಲ ಎಂದಿದ್ದಾರೆ.

''ತಬ್ರೈಜ್ ಶಮ್ಸಿ ಅಂತಿಮ ಓವರ್‌ ಬೌಲಿಂಗ್ ಮಾಡುತ್ತಾರೆ ಎಂಬುದು ಅವರಿಗೆ(ಸ್ಯಾಮ್ಸನ್‌) ಅರಿವಿತ್ತು. ಶಮ್ಸಿ ಕೆಟ್ಟ ದಿನ ಎದುರಿಸಿದ್ದು, 39ನೇ ಓವರ್‌ನಲ್ಲಿ ಕಗಿಸೊ ರಬಾಡ ನೋ ಬಾಲ್ ಎಸೆದಾಗ ನಾನು ಆತಂಕಕ್ಕೆ ಒಳಗಾಗಿದ್ದೆ. ಏಕೆಂದರೆ ಸಂಜು ಸ್ಯಾಮ್ಸನ್‌ ಯುವರಾಜ್ ರೀತಿಯಲ್ಲಿ ಆರು ಸಿಕ್ಸರ್‌ಗಳನ್ನ ಹೊಡೆಯುವ ಸಾಮರ್ಥ್ಯ ಹೊಂದಿದ್ದಾನೆ. ಈ ಮೂಲಕ ಅಂತಿಮ ಓವರ್‌ನಲ್ಲಿ 30+ ರನ್‌ ಬೇಕಾದ್ರೂ ದಾಖಲಿಸಬಲ್ಲ'' ಎಂದು ದಕ್ಷಿಣ ಆಫ್ರಿಕಾ ಮಾಜಿ ವೇಗಿ ಡೇಲ್ ಸ್ಟೇನ್ ಹೇಳಿದ್ದಾರೆ.

ಪಂದ್ಯದ 38.3ನೇ ಓವರ್‌ನಲ್ಲಿ ಅವೇಶ್ ಖಾನ್ ನಾಲ್ಕು ಎಸೆತದಲ್ಲಿ 2 ರನ್ ಗಳಿಸಿದರು. ಆ ಓವರ್‌ನಲ್ಲಿ ಕೇವಲ 7 ರನ್‌ಗಳು ಬಂದವು. ಅವೇಶ್ ಖಾನ್ 4 ಎಸೆತಗಳನ್ನು ಎದುರಿಸಿ ವ್ಯರ್ಥವಾದರು. ಒಂದು ವೇಳೆ ಸಿಂಗಲ್‌ ತೆಗೆದುಕೊಂಡು ಸಂಜು ಸ್ಯಾಮ್ಸನ್‌ಗೆ ನೀಡಿದ್ದರೂ ಸುಲಭವಾಗಿ ಸಂಜು ಹೆಚ್ಚುವರಿಯಾಗಿ 10 ರನ್ ಗಳಿಸುತ್ತಿದ್ದರು. ಈ ಮೂಲಕ ಟೀಂ ಇಂಡಿಯಾ ಅತ್ಯಂತ ಸುಲಭವಾಗಿಯೇ ಪಂದ್ಯವನ್ನ ಗೆದ್ದು ಬಿಡುತ್ತಿತ್ತು. ಆದ್ರೆ ಗೆಲುವಿನ ಅದೃಷ್ಟ ದ.ಆಫ್ರಿಕಾ ಕಡೆಗಿತ್ತು ಎಂಬುದು ಸಾಭೀತಾಯಿತು.

Story first published: Friday, October 7, 2022, 17:33 [IST]
Other articles published on Oct 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X