ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಯಾಮ್ಸನ್, ಧವನ್ ಮಿಂಚು, ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಭಾರತ 'ಎ'ಗೆ ಸರಣಿ

Sanju Samson, Shikhar Dhawan shine as India A complete 4-1 series win over South Africa A

ತಿರುವನಂತಪುರಂ, ಸೆಪ್ಟೆಂಬರ್ 6: ಯುವ ಆಲ್‌ ರೌಂಡರ್ ಸಂಜು ಸ್ಯಾಮ್ಸನ್ ಮತ್ತು ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಅರ್ಧಶತಕದ ನೆರವಿನಿಂದ ಕೇರಳದ ತಿರುವನಂತಪುರಂನಲ್ಲಿ ಶುಕ್ರವಾರ (ಸೆಪ್ಟೆಂಬರ್ 6) ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ 'ಎ' ಮತ್ತು ಭಾರತ 'ಎ' ನಡುವಿನ 5ನೇ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ 'ಎ' 36 ರನ್ ಜಯ ಗಳಿಸಿದೆ.

ದ್ವಿಶತಕದ ಮೂಲಕ 'ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾನೇ ಕಿಂಗ್‌' ಎಂದ ಸ್ಟೀವ್ ಸ್ಮಿತ್!ದ್ವಿಶತಕದ ಮೂಲಕ 'ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾನೇ ಕಿಂಗ್‌' ಎಂದ ಸ್ಟೀವ್ ಸ್ಮಿತ್!

ಐದು ಪಂದ್ಯಗಳ ಏಕದಿನ ಸರಣಿಯ ಈ ಕೊನೇ ಪಂದ್ಯದಲ್ಲಿ ಸ್ಯಾಮ್ಸನ್ 91, ಶಿಖರ್ ಧವನ್ 51, ನಾಯಕ ಶ್ರೇಯಸ್ ಐಯ್ಯರ್ 36 ರನ್‌ ಕೊಡುಗೆಯೊಂದಿಗೆ ಭಾರತ 20 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 204 ರನ್ ಗಳಿಸಿತು.

ಮಿಥಾಲಿ ಬದಲಿಗೆ ಭಾರತ ಟಿ20 ತಂಡ ಸೇರಿದ 15ರ ಹರೆಯದ ಶೆಫಾಲಿ!ಮಿಥಾಲಿ ಬದಲಿಗೆ ಭಾರತ ಟಿ20 ತಂಡ ಸೇರಿದ 15ರ ಹರೆಯದ ಶೆಫಾಲಿ!

ಕೊನೇ ಪಂದ್ಯದ ಗೆಲುವಿನೊಂದಿಗೆ ಭಾರತ 5 ಪಂದ್ಯಗಳ ಏಕದಿನ ಸರಣಿನ್ನು 4-1ರಿಂದ ಗೆದ್ದುಕೊಂಡಿದೆ. 5ನೇ ಪಂದ್ಯವನ್ನು ಮಳೆಯ ಕಾರಣ 20 ಓವರ್‌ಗೆ ಕಡಿತಗೊಳಿಸಲಾಗಿತ್ತು.

ಶಾರ್ದೂಲ್‌ಗೆ 3 ವಿಕೆಟ್

ಶಾರ್ದೂಲ್‌ಗೆ 3 ವಿಕೆಟ್

5ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 'ಎ' 20 ಓವರ್‌ಗೆ 204 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 'ಎ' ತಂಡ, ರೀಜಾ ಹೆಂಡ್ರಿಕ್ಸ್ 59, ಕೈಲ್ ವೆರೆನ್ನೆ 44 ರನ್‌ನೊಂದಿಗೆ 20 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 168 ರನ್‌ ಗಳಿಸಿತು. ಭಾರತದ ಶಾರ್ದೂಲ್ ಠಾಕೂರ್ 3, ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದು ಗಮನ ಸೆಳೆದರು.

ದೂಬೆ, ಅಕ್ಸರ್ ಅದ್ಭುತ ಆಟ

ದೂಬೆ, ಅಕ್ಸರ್ ಅದ್ಭುತ ಆಟ

ತಿರುವನಂತಪುರಂನ ಗ್ರೀನ್‌ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಆಗಸ್ಟ್ 29ರಂದು ನಡೆದಿದ್ದ ಇತ್ತಂಡಗಳ ಮೊದಲ ಏಕದಿನ ಪಂದ್ಯದಲ್ಲಿ ಶುಬ್‌ಮಾನ್‌ ಗಿಲ್ 46, ನಾಯಕ ಮನೀಶ್ ಪಾಂಡೆ 39, ಇಶಾನ್ ಕಿಶಾನ್ 37, ಶಿವಂ ದೂಬೆ 79, ಅಕ್ಸರ್ ಪಟೇಲ್ 60 ರನ್‌ನೊಂದಿಗೆ ಭಾರತ 47 ಓವರ್‌ಗೆ 327 ರನ್‌ ಗಳಿಸಿತ್ತಲ್ಲದೆ ಇದರಲ್ಲಿ 69 ರನ್‌ ಗೆಲುವನ್ನಾಚರಿಸಿತ್ತು.

ಭಾರತ ರೋಚಕ ಗೆಲುವು

ಭಾರತ ರೋಚಕ ಗೆಲುವು

ಆಗಸ್ಟ್ 31ರಂದು ನಡೆದಿದ್ದ 2ನೇ ಏಕದಿನ ಪಂದ್ಯವನ್ನು 21 ಓವರ್‌ಗೆ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಫ್ರಿಕಾ, ನಾಯಕ ತೆಂಬ ಬವುಮ 40 ರನ್‌ನೊಂದಿಗೆ 163 ರನ್ ಮಾಡಿತ್ತು. ಭಾರತ ಇಶಾನ್ ಕಿಶಾನ್ 55, ಅನ್‌ಮೋಲ್‌ಪ್ರೀತ್ ಸಿಂಗ್ 30 ರನ್ ಕೊಡುಗೆಯೊಂದಿಗೆ 163 ರನ್ ನೊಂದಿಗೆ 2 ವಿಕೆಟ್ ಜಯ ಗಳಿಸಿತು.

ಮನೀಷ್ ಪಾಂಡೆ ಭರ್ಜರಿ ಆಟ

ಮನೀಷ್ ಪಾಂಡೆ ಭರ್ಜರಿ ಆಟ

ಸರಣಿಯುದ್ದಕ್ಕೂ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು ನಿಜ. 3ನೇ ಏಕದಿನ ಪಂದ್ಯವನ್ನು 30 ಓವರ್‌ಗೆ ಕಡಿತಗೊಳಿಸಲಾಗಿತ್ತು. ಈ ಪಂದ್ಯದಲ್ಲಿ ಮನೀಷ್ ಪಾಂಡೆ 81 ರನ್ (59 ಎಸೆತ) ಕೊಡುಗೆಯೊಂದಿಗೆ ಭಾರತ 4 ವಿಕೆಟ್ ಗೆಲುವನ್ನಾಚರಿಸಿತ್ತು. 4ನೇ ಪಂದ್ಯದಲ್ಲಿ ಮಾತ್ರ ಪ್ರವಾಸಿ ದಕ್ಷಿಣ ಆಫ್ರಿಕಾ 4 ರನ್ ಗೆಲುವು ದಾಖಲಿಸಿತು. ಈ ಪಂದ್ಯ 25 ಓವರ್‌ಗೆ ನಡೆದಿತ್ತು.

Story first published: Friday, September 6, 2019, 21:14 [IST]
Other articles published on Sep 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X