ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆತ್ತಲೆ ಫೋಟೋ ಹಾಕಿದ್ದ ಮಹಿಳಾ ಕ್ರಿಕೆಟರ್ ಸಾರಾ ಟೇಲರ್ ನಿವೃತ್ತಿ!

Sarah Taylor retires from international cricket

ಲಂಡನ್, ಸೆಪ್ಟೆಂಬರ್ 27: ಸಾಮಾಜಿಕ ಜಾಲತಾಣದಲ್ಲಿ ನಗ್ನ ಫೋಟೋ ಹಂಚಿಕೊಂಡು ಭಾರೀ ಸುದ್ದಿಯಾಗಿದ್ದ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಶುಕ್ರವಾರ (ಸೆಪ್ಟೆಂಬರ್ 27) ನಿವೃತ್ತಿ ಹೊಂದಿದ್ದಾರೆ. ಮಾನಸಿಕ ಗೊಂದಲದಿಂದ ಬಳಲುತ್ತಿರುವ ಸಾರಾ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.

ಮತ್ತೊಮ್ಮೆ ಬೆತ್ತಲಾಗಿ ಫೋಸ್ ಕೊಟ್ಟ ಇಂಗ್ಲೆಂಡ್ ವಿಕೆಟ್ ಕೀಪರ್ ಸಾರಾಮತ್ತೊಮ್ಮೆ ಬೆತ್ತಲಾಗಿ ಫೋಸ್ ಕೊಟ್ಟ ಇಂಗ್ಲೆಂಡ್ ವಿಕೆಟ್ ಕೀಪರ್ ಸಾರಾ

30ರ ಹರೆಯದ ಸಾರಾ ಟೇಲರ್, 2006ರಲ್ಲಿ ಇಂಗ್ಲೆಂಡ್‌ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾರಾ ಒಟ್ಟಿಗೆ 6,553 ರನ್ ಗಳಿಸಿದ್ದಾರೆ. ಇದು ಇಂಗ್ಲೆಂಡ್‌ ಮಹಿಳಾ ತಂಡದ ಆಲ್‌ ಟೈಮ್ ರನ್‌ ದಾಖಲೆ ಪಟ್ಟಿಗೆ ಸೇರಿಕೊಂಡಿದೆ.

ಇನ್ನೊಂದು ವಿಶ್ವಕಪ್‌ನಲ್ಲಿ ಆಡಬೇಕೆಂದಿದ್ದೆ: ಆಸೆ ಬಿಚ್ಚಿಟ್ಟ ಯುವರಾಜ್ ಸಿಂಗ್!ಇನ್ನೊಂದು ವಿಶ್ವಕಪ್‌ನಲ್ಲಿ ಆಡಬೇಕೆಂದಿದ್ದೆ: ಆಸೆ ಬಿಚ್ಚಿಟ್ಟ ಯುವರಾಜ್ ಸಿಂಗ್!

ಸಾರಾ ಟೇಲರ್ ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ನಗ್ನ ಫೋಟೋ ಹಾಕಿ ಹೆಚ್ಚು ಸುದ್ದಿಯಾಗಿದ್ದರು.

ಆರೋಗ್ಯ ಸಮಸ್ಯೆ

ಆರೋಗ್ಯ ಸಮಸ್ಯೆ

'ಇದು ಬಹಳ ಕಠಿಣ ನಿರ್ಧಾರ ಆದರೆ ನಾನು ಮತ್ತು ನನ್ನ ಆರೋಗ್ಯ ಸಮಸ್ಯೆಯಿಂದಾಗಿ ಮುಂದುವರಿಯಲೇಬೇಕಿರುವುದರಿಂದ ಈ ನಿರ್ಧಾರ ಸರಿಯಾದುದು ಎಂದು ನಾನು ಭಾವಿಸುತ್ತೇನೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ನನ್ನ ಹಿಂದಿನ ಮತ್ತು ಈಗಿನ ಸಹ ಆಟಗಾರ್ತಿಯರಿಗೆ ಮತ್ತು ಇಂಗ್ಲೆಂಡ್‌ ಕ್ರಿಕೆಟ್‌ ಬೋರ್ಡ್‌ಗೆ ಧನ್ಯವಾದ ಸಲ್ಲಿಸುತ್ತಿದ್ದೇನೆ,' ಎಂದುನಿವೃತ್ತಿ ಘೋಷಿಸುತ್ತ ಸಾರಾ ಹೇಳಿದ್ದಾರೆ.

ಬೆತ್ತಲೆ ಫೋಟೋ ಶೇರ್

ಬೆತ್ತಲೆ ಫೋಟೋ ಶೇರ್

ಆಗಸ್ಟ್‌ 14ರಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಾರಾ ಬೆತ್ತಲೆ ಫೋಟೊ ಪ್ರಕಟಿಸಿದ್ದರು. ವಿಕೆಟ್‌ ಕೀಪಿಂಗ್‌ ಮಾಡುತ್ತಿರುವಂತೆ, ಸ್ಟಂಪ್ಸ್ ಮೇಲಿನ ಬೇಲ್ಸ್ ಉರುಳುತ್ತಿರುವ ರೀತಿಯಲ್ಲಿ ಪೋಸ್‌ ನೀಡಿದ್ದ ಸಾರಾ ಆ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಿದ್ದರು. ಹೀಗೆ ಬೆತ್ತಲೆ ಪೋಸ್‌ ಕೊಡೋದು ನನ್ನ ಸಹನೆಗೆ ಮೀರಿದ್ದಾಗಿದ್ದರೂ ಕೂಡ ಒಂದು ಉದ್ದೇಶದ ಕಾರಣ ಈ ರೀತಿ ಮಾಡಿರುವುದಾಗಿ ಫೋಟೊ ಜೊತೆಗಿನ ಶೀರ್ಷಿಕೆಯಲ್ಲಿ ಆಗ ಸಾರಾ ಬರೆದುಕೊಂಡಿದ್ದರು.

ಮತ್ತೊಂದು ನಗ್ನ ಫೋಟೋ

ಮತ್ತೊಂದು ನಗ್ನ ಫೋಟೋ

'ವಿಮೆನ್ಸ್‌ ಹೆಲ್ತ್ ಯುಕೆ'ಯ ಎಂಬ ಆರೋಗ್ಯ ಸಂಬಂಧಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಸಾರಾ, 'ನಗ್ನವಾಗಿ ಕಾಣಿಸಿಕೊಳ್ಳುವುದು ನನ್ನ ಸಹನೆಗೆ ಮೀರಿದ್ದು ಎಂಬುದನ್ನು ನನ್ನನ್ನು ಹತ್ತಿರದಿಂದ ಬಲ್ಲವರಿಗೆ ತಿಳಿದಿದೆ. ಆದರೆ, ಮಹಿಳೆಯರ ಸಮಸ್ಯೆಗಳ ಕುರಿತಾಗಿ ಜಾಗೃತಿ ಮೂಡಿಸಲು ಇಂಥದ್ದೊಂದು ಅಭಿಯಾನಕ್ಕೆ ಆಹ್ವಾನಿಸಿದ @womenshealthukಗೆ ಧನ್ಯವಾದಗಳು' ಎಂದು ನಗ್ನ ಫೋಟೋ ಶೇರ್ ಮಾಡಿದ್ದಾಗ ಸಾರಾ ಹೇಳಿಕೊಂಡಿದ್ದರು. ಅದಾಗಿ ಆಗಸ್ಟ್ 26ರಂದು ಸಾರಾ ಮತ್ತೊಂದು ಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.

7 ಶತಕ, 20 ಅರ್ಧ ಶತಕ

7 ಶತಕ, 20 ಅರ್ಧ ಶತಕ

126 ಏಕದಿನ ಪಂದ್ಯಗಳನ್ನಾಡಿರುವ ಸಾರಾ, 38.26ರ ಸರಾಸರಿಯಲ್ಲಿ 4056 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 7 ಶತಕ ಮತ್ತು 20 ಅರ್ಧಶತಕಗಳು ಸೇರಿವೆ. ಜೊತೆಗೆ ಆಡಿದ 10 ಟೆಸ್ಟ್‌ ಪಂದ್ಯಗಳಲ್ಲಿ 300 ರನ್‌ಗಳನ್ನು ಗಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 90 ಪಂದ್ಯಗಳನ್ನಾಡಿ 2177 ರನ್‌ಗಳನ್ನು ಚೆಚ್ಚಿದ್ದಾರೆ. ವಿಕೆಟ್‌ ಹಿಂಬದಿಯಲ್ಲೂ ಮಿಂಚಿರುವ ಅವರು, ಏಕದಿನ ಮತ್ತು ಟಿ20ಯಲ್ಲಿ ತಲಾ 51 ಸ್ಟಂಪಿಂಗ್‌ ಮಾಡಿದ್ದಾರೆ.

Story first published: Friday, September 27, 2019, 19:19 [IST]
Other articles published on Sep 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X