ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕತ್ವದಿಂದ ಸರ್ಫರಾಜ್ ಅಹ್ಮದ್ ಕೆಳಗಿಳಿಸಿದ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್

Sarfaraz Ahmed Sacked As Pakistan Captain, Azhar Ali Takes Over In Tests

ಇಸ್ಲಮಾಬಾದ್, ಅಕ್ಟೋಬರ್ 18: ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್ (ಪಿಸಿಬಿ), ಟೆಸ್ಟ್‌ ಮತ್ತು ಟಿ20ಐ ನಾಯಕತ್ವದಿಂದ ಸರ್ಫರಾಜ್ ಅಹ್ಮದ್ ಅವರನ್ನು ಕೆಳಗಿಳಿಸಿದೆ. ಶುಕ್ರವಾರ (ಅಕ್ಟೋಬರ್ 18) ಪಾಕ್‌ ಈ ವಿಚಾರ ತಿಳಿಸಿದೆ. ಏಕದಿನ ತಂಡಕ್ಕೆ ಮಾತ್ರ ಸರ್ಫರಾಜ್ ಇನ್ಮುಂದೆ ನಾಯಕರಾಗಿ ಇರಲಿದ್ದಾರೆ.

ಕೋಚ್‌ಗಳಿಗೆ ಗೇಟ್‌ಪಾಸ್ ಕೊಟ್ಟ ಬಾಂಗ್ಲಾದೇಶ, ಕಾರಣ ಏನ್ ಗೊತ್ತಾ?!ಕೋಚ್‌ಗಳಿಗೆ ಗೇಟ್‌ಪಾಸ್ ಕೊಟ್ಟ ಬಾಂಗ್ಲಾದೇಶ, ಕಾರಣ ಏನ್ ಗೊತ್ತಾ?!

ಪಾಕ್ ಟೆಸ್ಟ್ ತಂಡವನ್ನು ಅಝರ್ ಅಲಿ ಮತ್ತು ಟಿ20 ತಂಡವನ್ನು ಬಾಬರ್ ಅಝಮ್ ಮುನ್ನಡೆಸಲಿದ್ದಾರೆ ಎಂದು ಪಿಸಿಬಿ ಹೇಳಿದೆ. ಸರ್ಫರಾಜ್ ಏಕದಿನ ತಂಡಕ್ಕೆ ಮಾತ್ರ ನಾಯಕರಾಗಿರಲಿದ್ದಾರೆ, ಆದರೆ ಅವರಿಗೆ ಮುಂದಿನ ವರ್ಷ ಜುಲೈ ವರೆಗೆ ಯಾವುದೇ ಪಂದ್ಯಗಳಿಲ್ಲ. ಅನಂತರ ಆಮ್ಸ್‌ಟೆಲ್ವಿನ್‌ನಲ್ಲಿ ನೆದರ್ಲ್ಯಾಂಡ್‌ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಿದೆ.

ಐಪಿಎಲ್‌ನಲ್ಲಿ ಈ ಮಹತ್ವದ ಬದಲಾವಣೆ ತಂದ ಮೊದಲ ತಂಡ ಆರ್‌ಸಿಬಿ!ಐಪಿಎಲ್‌ನಲ್ಲಿ ಈ ಮಹತ್ವದ ಬದಲಾವಣೆ ತಂದ ಮೊದಲ ತಂಡ ಆರ್‌ಸಿಬಿ!

ಪಾಕಿಸ್ತಾನ ಟೆಸ್ಟ್‌ ಮತ್ತು ಟಿ20 ತಂಡದ ನಾಯಕತ್ವದಿಂದ ಸರ್ಫರಾಜ್ ಅಹ್ಮದ್ ಅವರನ್ನು ಕೆಳಗಿಳಿಸಿರುವುದಷ್ಟೇ ಅಲ್ಲ, ಅವರನ್ನು ಟೆಸ್ಟ್ ಮತ್ತು ಟಿ20ಐ ತಂಡದಿಂದಲೂ ಹೊರಗಿಲಾಗಿದೆ. ಯಾಕೆಂದರೆ ಸರ್ಫರಾಜ್ ಈಗ ಯಾವುದೇ ಕ್ರಿಕೆಟ್‌ ಮಾದರಿಗೆ ಸೂಕ್ತವೆನಿಸುವ ಫಾರ್ಮ್ ಹೊಂದಿಲ್ಲ.

44 ವರ್ಷಗಳ ವಿಶ್ವದಾಖಲೆ ಮುರಿದ ಭಾರತದ ಕ್ರಿಕೆಟರ್ ಯಶಸ್ವಿ ಜೈಸ್ವಾಲ್44 ವರ್ಷಗಳ ವಿಶ್ವದಾಖಲೆ ಮುರಿದ ಭಾರತದ ಕ್ರಿಕೆಟರ್ ಯಶಸ್ವಿ ಜೈಸ್ವಾಲ್

ಟೆಸ್ಟ್‌ ತಂಡಕ್ಕೆ ನೂತನ ನಾಯಕರಾಗಿ ಆಯ್ಕೆಯಾಗಿರುವ ಅಝರ್ ಅಲಿ ಮಾತನಾಡಿ, 'ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ರಾಷ್ಟ್ರೀಯ ತಂಡಕ್ಕೆ ನಾಯಕನಾಗಿ ಆಯ್ಕೆಯಾಗುವುದಕ್ಕಿಂತ ಬೇರೆ ಗೌರವ ಇಲ್ಲ,' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಸದ್ಯ ಟಿ20ಐ ಮಾದರಿಯಲ್ಲಿ ನಂ.1 ಸ್ಥಾನದಲ್ಲಿದೆ.

Story first published: Friday, October 18, 2019, 16:16 [IST]
Other articles published on Oct 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X