ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ನ್ಯೂಜಿಲೆಂಡ್ ಮೊದಲ ಟಿ20 ಪಂದಕ್ಕೆ ಶೇ. 100ರಷ್ಟು ಪ್ರೇಕ್ಷಕರಿಗೆ ಅವಕಾಶ: SMS ಸ್ಟೇಡಿಯಂ ವಿಶೇಷತೆ ಏನು?

Sawai mansingh stadium

ಕೋವಿಡ್-19 ಸಾಂಕ್ರಾಮಿಕ ರೋಗವು ಜಗತ್ತಿಗೆ ಆವರಿಸಿದ ಮೇಲೆ ಎಲ್ಲವೂ ಅಸ್ತವ್ಯಸ್ತಗೊಂಡಿತ್ತು. ಅದ್ರಲ್ಲೂ ವಿವಿಧ ಕ್ರೀಡೆಯ ಅದೆಷ್ಟೋ ಟೂರ್ನಿಗಳು ರದ್ದಾದರೆ, ಅನೇಕ ಟೂರ್ನಿಗಳನ್ನ ಮುಂದೂಡಲಾಗಿತ್ತು. ಇನ್ನು ಸ್ಟೇಡಿಯಂನಲ್ಲಿ ಪ್ರೇಕ್ಷಕರಂತು ಕಾಣಸಿಗದಾಗಿತ್ತು.

ಆದ್ರೆ ಇದೀಗ ಮತ್ತೆ ಆ ಕ್ಷಣ ಮರುಕಳಿಸಿದೆ. ಅದ್ರಲ್ಲೂ ಕ್ರಿಕೆಟ್‌ನಲ್ಲಿ ನೂರಕ್ಕೆ ನೂರರಷ್ಟು ಪ್ರೇಕ್ಷಕರನ್ನು ಕಾಣುವ ಸಮಯ ಸನಿಹವಾಗಿದೆ. ಮುಂಬರುವ ಭಾರತ-ನ್ಯೂಜಿಲೆಂಡ್ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶೇಕಡಾ 100ರಷ್ಟು ಪ್ರೇಕ್ಷಕರನ್ನು ಕಾಣಬಹುದಾಗಿದೆ.

ಹೌದು ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ (SMS) ಕ್ರೀಡಾಂಗಣವು ಶೇಕಡಾ 100ರಷ್ಟು ಪ್ರೇಕ್ಷಕರನ್ನು ಸ್ವಾಗತಿಸಲು ಸಿದ್ಧಗೊಂಡಿದೆ. ಕೋವಿಡ್-19 ಸಾಂಕ್ರಾಮಿಕದ ಬಳಿಕ ಪ್ರೇಕ್ಷಕರು ಸ್ಟೇಡಿಯಂ ಹೋಗಿ ಪಂದ್ಯವನ್ನ ನೋಡಲು ಸಾಧ್ಯವಾಗಿರಲಿಲ್ಲ. ಆದ್ರೆ ಈಗ ಬಹಳ ಸಮಯದ ಬಳಿಕ ಪಂದ್ಯವನ್ನ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ಸಿಕ್ಕಿದೆ.

ನವೆಂಬರ್ 17ರಂದು ಮೊದಲ ಟಿ20 ಪಂದ್ಯ

ನವೆಂಬರ್ 17ರಂದು ಮೊದಲ ಟಿ20 ಪಂದ್ಯ

ಜೈಪುರದ ಎಸ್‌ಎಂಎಸ್ ಸ್ಟೇಡಿಯಂ ಶೇ. 100ರಷ್ಟು ಪ್ರೇಕ್ಷಕರನ್ನು ಸೇರಿಸಲು ತನ್ನ ಹೆಸರನ್ನು ಕ್ರೀಡಾಂಗಣಗಳ ಪಟ್ಟಿಗೆ ಸೇರಿಸಿದ್ದು, ಅಭಿಮಾನಿಗಳಿಗೆ ಹಿಂತಿರುಗಲು ಅವಕಾಶ ನೀಡಿದೆ.

"ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ T20I ಪಂದ್ಯವು 100% ಪ್ರೇಕ್ಷಕರೊಂದಿಗೆ ವೀಕ್ಷಿಸಲು ಸಿದ್ಧವಾಗಿದೆ. ಸವಾಯಿ ಮಾನ್ಸಿಂಗ್ (SMS) ಕ್ರೀಡಾಂಗಣವು ನವೆಂಬರ್ 17 ರಂದು ಪೂರ್ಣ ಸಾಮರ್ಥ್ಯದೊಂದಿಗೆ ಭಾರತ-ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯಕ್ಕೆ ಸಾಕ್ಷಿಯಾಗಲಿದೆ''

''ರಾಜಸ್ಥಾನದಲ್ಲಿ ಸಾಂಕ್ರಾಮಿಕ ಪರಿಸ್ಥಿತಿಯು ಸುಧಾರಿಸುತ್ತಿರುವುದರಿಂದ, ರಾಜ್ಯ ಸರ್ಕಾರವು ಅಸೋಸಿಯೇಷನ್‌ಗೆ ಬರೆದ ಪತ್ರದಲ್ಲಿ 100 ಪ್ರತಿಶತದಷ್ಟು ಆಸನ ಸಾಮರ್ಥ್ಯಕ್ಕೆ ಅನುಮತಿ ನೀಡಿದೆ" ಎಂದು ಆರ್‌ಸಿಎ ಅಧ್ಯಕ್ಷ ವೈಭವ್ ಗೆಹ್ಲೋಟ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಐಪಿಎಲ್‌ 2022 ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಬಿಡ್ ಆಗಲಿರುವ 8 ಭಾರತದ ಆಟಗಾರರು

ಮಾಸ್ಕ್‌ ಧರಿಸುವುದು ಕಡ್ಡಾಯ

ಮಾಸ್ಕ್‌ ಧರಿಸುವುದು ಕಡ್ಡಾಯ

ಇನ್ನು ಮಾಸ್ಕ್ ಧರಿಸುವುದ ಕಡ್ಡಾಯವಾಗಿದ್ದು, ಸುತ್ತಲಿನ ಪ್ರದೇಶವು ಸಂಪೂರ್ಣ ನೈರ್ಮಲ್ಯವನ್ನು ಖಾತ್ರಿಪಡಿಸಲಾಗುವುದು. ಇದರ ಜೊತೆಗೆ ಥರ್ಮಲ್ ಸ್ಕ್ರೀನಿಂಗ್ ಸ್ಥಳವಿದ್ದು , ದೇಹದ ಉಷ್ಣಾಂಶ ಹೆಚ್ಚಿರುವವರಿಗೆ ಸ್ಟೇಡಿಯಂ ಪ್ರವೇಶ ಅನುಮಾನವಾಗಿರಲಿದೆ. ಇದರ ಜೊತೆಗೆ ಸಂಪೂರ್ಣ ಲಸಿಕೆ ಪಡೆದ ಪ್ರೇಕ್ಷಕರಿಗೆ ಮಾತ್ರ ಅನುಮತಿಸಲಾಗುತ್ತದೆ. ಆದರೆ ಕೇವಲ ಒಂದು ಲಸಿಕೆ ಪಡೆದ ಪ್ರೇಕ್ಷಕರು ಪ್ರವೇಶಿಲು 48 ಗಂಟೆ ಒಳಗಿನ RTPCR ನೆಗೆಟಿವ್ ವರದಿಯನ್ನು ಕೊಂಡೊಯ್ಯಬೇಕಾಗುತ್ತದೆ'' ಎಂದು ವೈಭವ್ ಗೆಹ್ಲೋಟ್ ಹೇಳಿದ್ದಾರೆ.

ಈ ಮಧ್ಯೆ, 2021 ರ T20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಭಾರತವು ಕಿವೀಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರೀ ತಯಾರಿ ನಡೆಸುತ್ತಿದೆ. ಮೂರು ಟಿ20 ಪಂದ್ಯಗಳು ಹಾಗೂ 2 ಟೆಸ್ಟ್ ಪಂದ್ಯಗಳಲ್ಲಿ ಉಭಯ ತಂಡಗಳು ಸೆಣಸಾಟ ನಡೆಸಲಿವೆ.

ಎಂಟು ವರ್ಷದ ಬಳಿಕ SMS ಸ್ಟೇಡಿಯಂನಲ್ಲಿ ಅಂತರಾಷ್ಟ್ರೀಯ ಪಂದ್ಯ

ಎಂಟು ವರ್ಷದ ಬಳಿಕ SMS ಸ್ಟೇಡಿಯಂನಲ್ಲಿ ಅಂತರಾಷ್ಟ್ರೀಯ ಪಂದ್ಯ

ಬರೋಬ್ಬರಿ ಎಂಟು ವರ್ಷಗಳ ಬಳಿಕ SMS ಸ್ಟೇಡಿಯಂನಲ್ಲಿ ಅಂತರಾಷ್ಟ್ರೀಯ ಪಂದ್ಯವೊಂದು ನಡೆಯುತ್ತಿದೆ. 16, ಅಕ್ಟೋಬರ್ 2013ರಲ್ಲಿ ಕೊನೆಯ ಬಾರಿಗೆ ಇಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಪಂದ್ಯ ನಡೆದಿತ್ತು. ಅದಾದ ಬಳಿಕ ಬಹಳ ಸಮಯದ ಬಳಿಕ ಜೈಪುರದ ಅಭಿಮಾನಿಗಳು ಅಂತರಾಷ್ಟ್ರೀಯ ಪಂದ್ಯ ವೀಕ್ಷಿಸಲು ಅವಕಾಶ ಸಿಕ್ಕಂತಾಗಿದೆ.

David Warner ಹೊಡೆದ 6 ಈಗ ಎಲ್ಲೆಡೆ ವೈರಲ್ | Oneindia Kannada
ಸ್ಟೇಡಿಯಂನ ವಿಶೇಷತೆ ಏನು?

ಸ್ಟೇಡಿಯಂನ ವಿಶೇಷತೆ ಏನು?

ಸುಮಾರು 30,000 ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಈ ಸ್ಟೇಡಿಯಂ ಹೊಂದಿದೆ. ಈ ಸ್ಟೇಡಿಯಂ ವಿಶೇಷ ಏನಂದ್ರೆ ಇಲ್ಲಿ ನಡೆದಿರೋದು ಕೇವಲ ಒಂದೇ ಒಂದು ಟೆಸ್ಟ್‌ ಪಂದ್ಯವಾಗಿದೆ. ಅದೂ 1987ರಲ್ಲಿ ಭಾರತ -ಪಾಕಿಸ್ತಾನ ವಿರುದ್ಧ ನಡೆದಿತ್ತು. ಇದೇ ಪಿಚ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್‌ನಲ್ಲಿ ಅಜೇಯ 183ರನ್ ಸಿಡಿಸಿದ್ರು. ಇದೀಗ ಈ ಸ್ಟೇಡಿಯಂ ಮೊದಲ ಅಂತರಾಷ್ಟ್ರೀಯ ಟಿ20 ಪಂದ್ಯಕ್ಕೆ ವೇದಿಕೆಯಾಗಿದೆ.

Story first published: Friday, November 12, 2021, 9:52 [IST]
Other articles published on Nov 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X