ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುಎಇಗೆ ಸೋಲುಣಿಸಿ ಟಿ20 ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಸ್ಕಾಟ್ಲೆಂಡ್‌

Scotland crush UAE to secure T20 World Cup berth

ದುಬೈ, ಅಕ್ಟೋಬರ್ 30: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡವನ್ನು ಸೋಲಿಸಿ ಸ್ಕಾಟ್ಲೆಂಡ್‌, ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಬುಧವಾರ (ಅಕ್ಟೋಬರ್ 30) ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪುರುಷರ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ ಸ್ಕಾಟ್ಲೆಂಡ್ 90 ರನ್ ಜಯ ದಾಖಲಿಸಿತು.

ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡಕ್ಕೆ ಭಯೋತ್ಪಾದನಾ ಬೆದರಿಕೆ!ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡಕ್ಕೆ ಭಯೋತ್ಪಾದನಾ ಬೆದರಿಕೆ!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸ್ಕಾಟ್ಲೆಂಡ್‌, ಆರಂಭಿಕ ಬ್ಯಾಟ್ಸ್‌ಮನ್ ಜಾರ್ಜ್ ಮುನ್ಸೆ 65 (43 ಎಸೆತ), ನಾಯಕ ಕೈಲ್ ಕೋಟ್ಜರ್ 34, ಮೈಕೆಲ್ ಲೀಸ್ಕ್ 12, ರಿಚೀ ಬೆರಿಂಗ್ಟನ್ 48, ಕ್ಯಾಲಮ್ ಮ್ಯಾಕ್ಲಿಯೋಡ್ 25 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 198 ರನ್ ಗಳಿಸಿತು.

ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಡೇ-ನೈಟ್ ಟೆಸ್ಟ್‌ ಆಡಲಿದೆ ಟೀಮ್ ಇಂಡಿಯಾಬಾಂಗ್ಲಾದೇಶ ವಿರುದ್ಧ ಚೊಚ್ಚಲ ಡೇ-ನೈಟ್ ಟೆಸ್ಟ್‌ ಆಡಲಿದೆ ಟೀಮ್ ಇಂಡಿಯಾ

ಗುರಿ ಬೆನ್ನಟ್ಟಿದ ಯುಎಇ, ರಮೀಝ್ ಶಹಝಾದ್ 34, ಡೇರಿಯಸ್ ಡೆ'ಸಿಲ್ವಾ 19, ಮೊಹಮ್ಮದ್ ಉಸ್ಮಾನ್ 20 ರನ್‌ ಕೊಡುಗೆಯೊಂದಿಗೆ 18.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 108 ರನ್ ಗಳಿಸಲಷ್ಟೇ ಶಕ್ತವಾಯ್ತು. ಯುಎಇ ಇನ್ನಿಂಗ್ಸ್‌ನಲ್ಲಿ ಸ್ಕಾಟ್ಲೆಂಡ್‌ನ ಸಫಿಯಾನ್ ಶರೀಫ್ 3, ಮಾರ್ಕ್ ವ್ಯಾಟ್‌ 3 ವಿಕೆಟ್‌ ಪಡೆದು ಗಮನ ಸೆಳೆದರು.

ಭಾರತ vs ಬಾಂಗ್ಲಾದೇಶ ಡೇ-ನೈಟ್ ಟೆಸ್ಟ್‌ ಕ್ರಿಕೆಟ್‌ ಟಿಕೆಟ್ ಬೆಲೆ ತೀರಾ ಕಮ್ಮಿ!ಭಾರತ vs ಬಾಂಗ್ಲಾದೇಶ ಡೇ-ನೈಟ್ ಟೆಸ್ಟ್‌ ಕ್ರಿಕೆಟ್‌ ಟಿಕೆಟ್ ಬೆಲೆ ತೀರಾ ಕಮ್ಮಿ!

14 ತಂಡಗಳು ಪಾಲ್ಗೊಳ್ಳುತ್ತಿರುವ ಈ ವಿಶ್ವ ಟಿ20 ಕ್ವಾಲಿಫೈಯರ್ ಟೂರ್ನಿಯಲ್ಲಿ 2020ರ ಟಿ20 ವಿಶ್ವಕಪ್‌ಗಾಗಿ ಆರು ತಂಡಗಳನ್ನು ಆರಿಸಲಾಗುತ್ತದೆ. ಇಲ್ಲಿ ಆಯ್ದ ಆರು ತಂಡಗಳು ಸೇರಿ ಒಟ್ಟಿಗೆ 16 ತಂಡಗಳು ಮುಂದಿನ ವರ್ಷ ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಮೈದಾನಕ್ಕಿಳಿಯಲಿವೆ.

Story first published: Wednesday, October 30, 2019, 21:40 [IST]
Other articles published on Oct 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X