ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: 'ಈ ವಿಚಾರದಲ್ಲಿ ವಿದೇಶಿ ಆಟಗಾರರಿಗೆ ಅನುಭವವಿದೆ, ಆದರೆ ಭಾರತೀಯ ಕ್ರಿಕೆಟಿಗರಿಗೆ ಕಷ್ಟವಾಗಲಿದೆ'

Scott Styris Has Highlighted One Point Of Concern For Indian Players Ahead Of Ipl 2020

ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು ಎಲ್ಲಾ ಆಟಗಾರರು ತಂಡಗಳು ಕೂಡ ಕೊರೊನಾದ ವಿಚಿತ್ರ ಸನ್ನಿವೇಶದಲ್ಲಿ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದೆ. ಅದರೆ ಈ ಬಾರಿಯ ಐಪಿಎಲ್‌ನಲ್ಲಿ ವಿದೇಶಿ ಆಟಗಾರರಿಗಿಂತ ಭಾರತೀಯ ಆಟಗಾರರು ಹೆಚ್ಚಿನ ಸಂಕಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ನ್ಯೂಜಿಲೆಂಟ್ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್ ಅಭಿಪ್ರಾಯ ಪಟ್ಟಿದ್ದಾರೆ.

ಸ್ಕಾಟ್ ಸ್ಟೈರಿಸ್ ಹೀಗೆ ಹೇಳಲು ಬಲವಾದ ಕಾರಣವನ್ನು ಮುಂದಿಟ್ಟಿದ್ದಾರೆ. ಭಾರತೀಯ ಕ್ರಿಕೆಟಿಗರಿಗೆ ಈ ಬಾರಿಯ ಐಪಿಎಲ್‌ನ ಅನುಭವ ನಿಜಕ್ಕೂ ಕಠಿಣವಾಗಿರಲಿದೆ. ಆದರೆ ವಿದೆಶಿ ಆಟಗಾರಿಗೆ ಅದು ಇದು ಅಷ್ಟೊಂದು ಕಾಡಲಾರದು ಎಂದು ಸ್ಟೈರಿಸ್ ಸಂದರ್ಭದವನ್ನು ವಿಶ್ಲೇಷಣೆ ಮಾಡಿದ್ದಾರೆ.

ಮತ್ತೆ ಕ್ರಿಕೆಟ್ ಅಂಗಳಕ್ಕೆ ಸಿಕ್ಸರ್ ಕಿಂಗ್ ಯುವಿ! : ಬಿಗ್‌ಬ್ಯಾಷ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಮತ್ತೆ ಕ್ರಿಕೆಟ್ ಅಂಗಳಕ್ಕೆ ಸಿಕ್ಸರ್ ಕಿಂಗ್ ಯುವಿ! : ಬಿಗ್‌ಬ್ಯಾಷ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ

ಹಾಗಾದರೆ ಸ್ಕಾಟ್ ಸ್ಟೈರಿಸ್ ಈ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಲು ಕಾರಣವೇನು? ಯಾವ ವಿಚಾರ ಭಾರತೀಯ ಕ್ರಿಕೆಟಿಗರಿಗೆ ಹಿನ್ನಡೆಯಾಗಬಹುದು.. ಮುಂದೆ ಓದಿ

ಪ್ರೇಕ್ಷಕರಿಲ್ಲದೆ ನಡೆಯಲಿದೆ ಐಪಿಎಲ್

ಪ್ರೇಕ್ಷಕರಿಲ್ಲದೆ ನಡೆಯಲಿದೆ ಐಪಿಎಲ್

ಈ ಬಾರಿಯ ಐಪಿಎಲ್ ಟೂರ್ನಿ ಪ್ರೇಕ್ಷಕರಿಲ್ಲದೆ ನಡೆಯುವುದು ಬಹುತೇಕ ಪಕ್ಕಾ ಆಗಿದೆ. ಯಾವಾಗಲೂ ಕ್ರೀಡಾಂಗಣದಲ್ಲಿ ತುಂಬಿ ತುಳುಕುತ್ತಾ ಪ್ರೇಕ್ಷಕರ ಕರತಾಡನದೊಂದಿಗೆ ನಡೆಯುತ್ತಿದ್ದ ಐಪಿಎಲ್‌ಗೆ ಈ ಬಾರಿ ಆ ಕಳೆಯೇ ಇರಲಾರದು. ಇದು ಆಟಗಾರರ ಉತ್ಸಾಹ ಕಡಿಮೆಯಾಗಲು ಕಾರಣವಾಗಬಹುದು ಎಂಬುದು ಸ್ಕಾಟ್ ಸ್ಟೈರಿಸ್ ವಿಶ್ಲೇಷಣೆ

ವಿದೇಶಿ ಆಟಗಾರರಿಗೆ ಅಭ್ಯಾಸವಿದೆ

ವಿದೇಶಿ ಆಟಗಾರರಿಗೆ ಅಭ್ಯಾಸವಿದೆ

ಭಾರತೀಯ ಕ್ರಿಕೆಟಿಗರನ್ನು ಹೊರತು ಪಡಿಸಿ ವಿದೇಶಿ ಕ್ರಿಕೆಟಿಗರಿಗೆ ಪ್ರೇಕ್ಷಕರಿಲ್ಲದೆ ಕ್ರಿಕೆಟ್ ಆಡಿ ಅನುಭವವಿದೆ. ಕಡಿಮೆ ಪ್ರಮಾಣದ ಪ್ರೇಕ್ಷಕರನ್ನು ಅಥವಾ ಪ್ರೇಕ್ಷಕರ ಅಲಭ್ಯತೆ ಹಲವು ದೇಶಗಳಲ್ಲಿ ಸಾಮಾನ್ಯವೇ ಆಗಿದೆ. ಹೀಗಾಗಿ ಈ ಬಾರಿ ಐಪಿಎಲ್‌ನಲ್ಲಿ ಪ್ರೇಕ್ಷಕರ ಅಲಭ್ಯತೆ ವಿದೇಶಿ ಆಟಗಾರರಿಗೆ ಪರಿಣಾಮ ಬೀರದು ಎಂದು ಸ್ಕಾಟ್ ಸ್ಟೈರಿಸ್ ಹೇಳಿದ್ದಾರೆ

ಭಾರತೀಯ ಕ್ರಿಕೆಟಿಗರಿಗೆ ಇದು ಸವಾಲು

ಭಾರತೀಯ ಕ್ರಿಕೆಟಿಗರಿಗೆ ಇದು ಸವಾಲು

ಆದರೆ ಭಾರತೀಯ ಕ್ರಿಕೆಟಿಗರು ಈ ರೀತಿಯ ಸ್ಥಿತಿಯಲ್ಲಿ ಕ್ರಿಕೆಟ್ ಆಡಿಯೇ ಇಲ್ಲ. ಪ್ರೇಕ್ಷಕರ ಕರತಾಡನ, ಅಬ್ಬರದಲ್ಲೆ ಆಟವಾಡಿ ಅವರಿಗೆ ಅಭ್ಯಾಸ. ಪ್ರೇಕ್ಷಕರ ಪ್ರೋತ್ಸಾಹದಿಂದ ಮತ್ತಷ್ಟು ಉತ್ತೇಜಿತರಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತಾರೆ. ಆದರೆ ಈ ಬಾರಿ ಪ್ರೇಕ್ಷಕರಿಲ್ಲದೆ ಆಡುವ ಕಾರಣ ಭಾರತೀಯ ಆಟಗಾರರಿಗೆ ಸವಾಲೆನಿಸಲಿದೆ ಎಂದಿದ್ದಾರೆ.

ದೊಡ್ಡ ಸಂಖ್ಯೆಯ ಅಭಿಮಾನಿಗಳು ಇರುತ್ತಾರೆ

ದೊಡ್ಡ ಸಂಖ್ಯೆಯ ಅಭಿಮಾನಿಗಳು ಇರುತ್ತಾರೆ

'ಭಾರತೀಯ ಕ್ರಿಕೆಟಿಗರು ಪ್ರೇಕ್ಷಕರಿಲ್ಲದ ಆಡಿರುವ ಬಗ್ಗೆ ನನಗಂತೂ ನೆನಪಿಲ್ಲ. ಅವರ ಸುತ್ತ ಯಾವಾಗಲೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಇರುತ್ತಾರೆ. ಆಟದಲ್ಲಿ ಅವರು ಹೆಣಗಾಡಲಾರರು, ಆದರೆ ಪ್ರೇಕ್ಷಕರ ಸಮ್ಮುಖದಲ್ಲಿ ದೊರೆಯುತ್ತಿದ್ದ ಆ ಶಕ್ತಿ ಬೇರೆ ಯಾವ ಮಾರ್ಗದಿಂದ ದೊರೆಯಬಹುದು ಎಂಬ ಹುಡುಕಾಟದಲ್ಲಿರುತ್ತಾರೆ' ಎಂದು ಸದಕಾಟ್ ಸ್ಟೈರಿಸ್ ಹೇಳಿದ್ದಾರೆ.

Story first published: Tuesday, September 8, 2020, 15:22 [IST]
Other articles published on Sep 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X