ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಝಾರೆ, ದುಲೀಪ್, ದೇವಧರ್ ಟ್ರೋಫಿ ಈ ಋತುವಿನಲ್ಲಿ ಬೇಡ: ವಾಸಿಮ್ ಜಾಫರ್

Scrap Hazare, Duleep and Deodhar Trophy this season: Wasim Jaffer

ಭಾರತದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಋತುವಿನ ವಿಜಯ್ ಹಝಾರೆ, ದುಲೀಪ್ ಟ್ರೋಫಿ ಮತ್ತು ದೇವಧರ್ ಟ್ರೋಫಿಯನ್ನು ರದ್ದುಗೊಳಿಸಬೇಕು ಎಂದು ಭಾರತದ ಮಾಜಿ ಟೆಸ್ಟ್ ಕ್ರಿಕೆಟಿಗ ವಾಸಿಮ್ ಜಾಫರ್ ಆಗ್ರಹಿಸಿದ್ದಾರೆ.

ಇದರ ಬದಲಾಗಿ ಪೂರ್ಣ ಪ್ರಮಾಣದ ರಣಜಿ ಟ್ರೋಫಿ ಮತ್ತು ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯನ್ನು ಆಯೋಜಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ದೇಶೀಯ ಕ್ರಿಕೆಟ್ ಆಗಸ್ಟ್‌ನಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಆದರೆ ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ವೇಗವಾಗಿ ಏರುತ್ತಿರುವುದರಿಂದ ಬಿಸಿಸಿಐ ಈವರೆಗೂ ಕ್ರಿಕೆಟ್‌ಗೆ ಸಂಬಂಧಪಟ್ಟ ಯಾವುದೇ ಚಟುವಟಿಕೆಗಳಿಗೆ ಚಾಲನೆ ನೀಡಿಲ್ಲ.

ಐಪಿಎಲ್‌ಗೆ ದಿನಾಂಕ ನಿಗದಿ, ಸೆಪ್ಟೆಂಬರ್ 26 ರಿಂದ ನವೆಂಬರ್ 8ರವರೆಗೆ ನಡೆಯಲಿದೆ ಟೂರ್ನಿ : ವರದಿಐಪಿಎಲ್‌ಗೆ ದಿನಾಂಕ ನಿಗದಿ, ಸೆಪ್ಟೆಂಬರ್ 26 ರಿಂದ ನವೆಂಬರ್ 8ರವರೆಗೆ ನಡೆಯಲಿದೆ ಟೂರ್ನಿ : ವರದಿ

ಬಿಸಿಸಿಐ ಸದ್ಯ ಐಪಿಎಲ್ ಆಯೋಜನೆಗೆ ತುದಿಗಾಲಲ್ಲಿ ನಿಂತಿದ್ದು ಅದರ ಸಿದ್ದತೆಯಲ್ಲಿದೆ. ಬಹುತೇಕ ದಿನಾಂಕವನ್ನು ಕೂಡ ಅಂತಿಮಗೊಳಿಸಿದ್ದು ಟಿ20 ವಿಶ್ವಕಪ್‌ ಬಗ್ಗೆ ಐಸಿಸಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಈಗ ಕಾದುಕುಳಿತಿದೆ. ನವೆಂಬರ್ 28ರಿಂದ ಐಪಿಎಲ್ ಆಯೋಜಿಸಲು ತಾತ್ಕಾಲಿಕ ದಿನಾಂಕವನ್ನು ನಿಗದಿಗೊಳಿಸಿದೆ.

ಐಪಿಎಲ್ ನಂತರ ಬಿಸಿಸಿಐ ದೇಶೀಯ ಕ್ರಿಕೆಟ್‌ ಋತುವನ್ನು ಆರಂಭಿಸುವ ಸಾಧ್ಯತೆಯಿದೆ. ದೇಶೀಯ ಕ್ರಿಕೆಟ್ ಋತು ಬಹುತೇಕ ಇರಾನಿ ಟ್ರೋಫಿಯಿಂದ ಆರಂಭವಾಗುವ ಸಾಧ್ಯತೆಯಿದೆ. ಈ ಬಾರಿ ಇರಾನಿ ಟ್ರೋಫಿಯಲ್ಲಿ ಸೌರಾಷ್ಟ್ರ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಆಡುವ ಅರ್ಹತೆಯನ್ನು ಪಡೆದುಕೊಂಡಿದೆ. ರಣಜಿಯಲ್ಲಿ ಚಾಂಪಿಯನ್ ಆಗುವ ಮೂಲಕ ಈ ಅರ್ಹತೆಯನ್ನು ಅದು ಗಳಿಸಿಕೊಂಡಿದೆ.

ಪಾಕಿಸ್ತಾನಕ್ಕೆ ಭಾರತ ಸತತ 7ನೇ ವಿಶ್ವಕಪ್‌ ಸೋಲುಣಿಸಿದ್ದು ಇದೇ ದಿನಪಾಕಿಸ್ತಾನಕ್ಕೆ ಭಾರತ ಸತತ 7ನೇ ವಿಶ್ವಕಪ್‌ ಸೋಲುಣಿಸಿದ್ದು ಇದೇ ದಿನ

ಇದೇ ಸಂದರ್ಭದಲ್ಲಿ ರಣಜಿ ಕ್ರಿಕೆಟ್‌ನ ದಿಗ್ಗಜ ಎನಿಸಿಕೊಂಡಿರುವ ವಾಸಿಮ್ ಜಾಫರ್ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಹಾದಿಯನ್ನು ಕಠಿಣಗೊಳಿಸುವ ಅಗತ್ಯದ ಬಗ್ಗೆ ಹೇಳಿದ್ದಾರೆ. ರಣಜಿ ಟ್ರೋಫಿಯ ಮಾದರಿಯಲ್ಲಿ ಬದಲಾವಣೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

Story first published: Tuesday, June 16, 2020, 21:08 [IST]
Other articles published on Jun 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X