ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೀವನವಿಡೀ ನೆನಪಿಟ್ಟುಕೊಳ್ಳವಂತಾ ಋತು ಎಂದು ಹೆಮ್ಮೆಯ ಮಾತುಗಳನ್ನಾಡಿದ ಕೋಚ್ ರವಿ ಶಾಸ್ತ್ರಿ

Season of lifetime: Ravi Shastri praised Team India for voctory against England and Australia

ಈ ಕ್ರಿಕೆಟ್ ಋತು ಜೀವನವಿಡೀ ನೆನಪಿನಲ್ಲಿಟ್ಟುಕೊಳ್ಳುವಂತಾ ಋತು ಎಂದು ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಬಯೋ ಬಬಲ್‌ನಂತಾ ಕಠಿಣ ವಾತಾವರಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಹಾಗೂ ಟೆಸ್ಟ್ ಸರಣಿ ಗೆಲುವು ಹಾಗೂ ಇಂಗ್ಲೆಂಡ್ ವಿರುದ್ಧದ ಮೂರು ಮಾದರಿಯಲ್ಲೂ ಭಾರತದ ಸರಣಿ ಗೆಲುವಿನ ಸಾಧನೆಯನ್ನು ದೃಷ್ಟಿಯಲ್ಲಿಟ್ಟು ಈ ಮಾತುಗಳನ್ನು ಆಡಿದ್ದಾರೆ ರವಿ ಶಾಸ್ತ್ರಿ.

"ಅಭಿನಂದನೆಗಳು ಟ್ರೋಫಿಯನ್ನು ಎತ್ತಿ ಹಿಡಿದಿರುವುದಕ್ಕಾಗಿ. ವಿಶ್ವದ ಎರಡು ಅತ್ಯುತ್ತಮ ತಂಡಗಳ ವಿರುದ್ಧ ಎಲ್ಲಾ ಮಾದರಿಯಲ್ಲಿ ಕಠಿಣ ಸಮಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಜೀವಮಾನದ ಋತುವನ್ನು ಹೊಂದಿದ್ದೀರಿ. ಅಭಿನಂದನೆಗೆ ನೀವು ಅತ್ಯಂತ ಅರ್ಹರು" ಎಂದು ಶಾಸ್ತ್ರಿ ಆಟಗಾರರನ್ನು ಪ್ರಶಂಸಿಸಿದ್ದಾರೆ.

ಭಾರತ vs ಇಂಗ್ಲೆಂಡ್: 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ವಿಶ್ವದಾಖಲೆ ಸರಿಗಟ್ಟಿದ ಸ್ಯಾಮ್ ಕರ್ರನ್ಭಾರತ vs ಇಂಗ್ಲೆಂಡ್: 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ವಿಶ್ವದಾಖಲೆ ಸರಿಗಟ್ಟಿದ ಸ್ಯಾಮ್ ಕರ್ರನ್

ಸುದೀರ್ಘ ಕಾಲ ಬಯೋಬಬಲ್‌ನಲ್ಲಿರುವ ಆಟಗಾರರು

ಸುದೀರ್ಘ ಕಾಲ ಬಯೋಬಬಲ್‌ನಲ್ಲಿರುವ ಆಟಗಾರರು

ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಈ ಹಿಂದೆ ಹಲವು ಬಾರಿ ಬಯೋಬಬಲ್‌ನಲ್ಲಿದ್ದು ಆಡುವ ಒತ್ತಡದ ಬಗ್ಗೆ ಪ್ರಸ್ತಾಪವನ್ನು ಮಾಡಿದ್ದರು. ಈಗ ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಟ್ವೀಟ್‌ ಮಾಡಿ ಭಾರತೀಯ ಆಟಗಾರರ ಪರವಾಗಿ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಭಾರತದ ಬಹುಪಾಲು ಆಟಗಾರರು ಕಳೆದ 7 ತಿಂಗಳುಗಳಲ್ಲಿ ಆಸ್ಟ್ರೇಲಿಯಾ ಪ್ರವಾಸದ ನಂತರದ ಒಂದು ವಾರವನ್ನು ಹೊರತು ಪಡಿಸಿ ಉಳಿದ ಎಲ್ಲಾ ಸಮಯಗಳನ್ನು ಬಯೋಬಬಲ್‌ನಲ್ಲಿಯೇ ಕಳೆದಿದ್ದಾರೆ.

ಭಾರತದ ಗೆಲುವಿನ ಯಾತ್ರೆ

ಭಾರತದ ಗೆಲುವಿನ ಯಾತ್ರೆ

ಕಳೆದ ಐಪಿಎಲ್ ಆವೃತ್ತಿ ಮುಕ್ತಾವಾಗುತ್ತಿದ್ದಂತೆಯೇ ಭಾರತದ ಬಿಡುವಿಲ್ಲದ ಋತು ಆರಂಭವಾಗಿತ್ತು. ಆರಂಭದಲ್ಲಿ ಏಕದಿನ ಸರಣಿ ಆಸ್ಟ್ರೇಲಿಯಾಗೆ 1-2 ಅಂತರದಿಂದ ಸೋಲುವ ಮೂಲಕ ಆರಂಭವಾಯಿತು. ಆದರೆ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾಗೆ ತಿರುಗೇಟು ನೀಡಿದ ಭಾರತ 2-1 ಅಂತರದಿಂದ ಗೆಲುವು ಸಾಧಿಸಿತು. ಅದಾದ ಬಳಿಕ ಬಹು ನಿರೀಕ್ಷಿತ ಟೆಸ್ಟ್ ಸರಣಿ ಭಾರತೀಯ ಅಭಿಮಾನಿಗಳ ಪಾಲಿಗೆ ಸುದೀರ್ಘ ಕಾಲ ನೆನಪಿನಲ್ಲಿ ಉಳಿಯುವಂತಾದ್ದು. ಮೊದಲ ಪಂದ್ಯದಲ್ಲಿ ಹೀನಾಯ ಸೋಲಿನ ನಂತರ ಸ್ಟಾರ್ ಆಟಗಾರರ ಅಲಭ್ಯತೆಯ ಮಧ್ಯೆಯೂ ಭಾರತ ತಂಡದ ಆಟಗಾರರು ನೀಡಿದ ಪ್ರದರ್ಶನದಿಂದ ಭಾರತ 2-1 ಅಂತರದಿಂದ ಐತಿಹಾಸಿಕವಾಗಿ ಸರಣಿಯನ್ನು ಗೆದ್ದುಕೊಂಡಿತ್ತು.

ತವರಿನಲ್ಲೂ ಭಾರತದ ಅಬ್ಬರ

ತವರಿನಲ್ಲೂ ಭಾರತದ ಅಬ್ಬರ

ಬಳಿಕ ಭಾರತ ತವರಿನಲ್ಲಿಯೂ ಇದೇ ಪ್ರದರ್ಶನವನ್ನು ಮುಂದುವರಿಸಿದೆ. ಮೊದಲಿಗೆ ಟೆಸ್ಟ್‌ನಲ್ಲಿ 3-1 ಅಂತರದಿಂದ ಭಾರತ ಗೆಲುವು ಸಾಧಿಸಿತ್ತು. ಬಳಿಕ ಸೀಮಿತ ಓವರ್‌ಗಳಲ್ಲಿ ಇಂಗ್ಲೆಂಡ್ ಕಠಿಣ ಪೈಪೋಟಿಯನ್ನು ನೀಡಿತಾದರೂ ಭಾರತದ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Story first published: Monday, March 29, 2021, 13:51 [IST]
Other articles published on Mar 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X