ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಪರಾಧದ ಪೋಸ್ಟ್‌, ಇಂಗ್ಲೆಂಡ್‌ನ ಮತ್ತೊಬ್ಬ ಆಟಗಾರನ ವಿರುದ್ಧ ತನಿಖೆ

Second England cricketer investigated for past offensive social media post

ಲಂಡನ್: ಇಂಗ್ಲೆಂಡ್‌ ಬೌಲರ್ ಆಲಿ ರಾಬಿನ್ಸನ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಿದ ಬಳಿಕ, ಸಾಮಾಜಿಕ ಜಾಲತಾಣದಲ್ಲಿ ಅಪರಾಧದ ಪೋಸ್ಟ್‌ ಹಾಕಿದ್ದಕ್ಕಾಗಿ ಇಂಗ್ಲೆಂಡ್‌ನ ಮತ್ತೊಬ್ಬ ಆಟಗಾರನ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ವರದಿಯೊಂದು ಹೇಳಿದೆ. ಸಾಮಾಜಿಕ ಜಾಲತಾಣದಲ್ಲಿನ ಹಳೆಯ ಪೋಸ್ಟ್‌ನಿಂದಾಗಿ ಇಂಗ್ಲೆಂಡ್‌ನ ಕ್ರಿಕೆಟ್ ಆಟಗಾರರು ಸಮಸ್ಯೆಗೆ ಸಿಲುಕುತ್ತಿರುವ ಎರಡನೇ ಪ್ರಕರಣ ಇದಾಗಿದೆ (ಸಾಂದರ್ಭಿಕ ಚಿತ್ರ).

ಸರ್ಕಾರಿ ಹುದ್ದೆ ಹೊಂದಿರುವ ಭಾರತೀಯ 7 ಖ್ಯಾತ ಕ್ರಿಕೆಟಿಗರಿವರು!ಸರ್ಕಾರಿ ಹುದ್ದೆ ಹೊಂದಿರುವ ಭಾರತೀಯ 7 ಖ್ಯಾತ ಕ್ರಿಕೆಟಿಗರಿವರು!

ವಿಸ್ಡನ್ ಡಾಟ್‌ ಕಾಮ್, ಇಂಗ್ಲೆಂಡ್‌ನ ಮತ್ತೊಬ್ಬ ಆಟಗಾರ ಜನಾಂಗೀಯ ನಿಂದನೆಯ ಪೋಸ್ಟ್‌ ಮಾಡಿರುವುದಾಗಿ ವರದಿ ಮಾಡಿದೆ. ಆದರೆ ಆಟಗಾರನ ಪರಿಚಯ ತಿಳಿಸಲು ವಿಸ್ಡನ್ ಮುಂದಾಗಿಲ್ಲ. ಕಾರಣ, ಆ ಪೋಸ್ಟ್‌ ಹಾಕುವಾಗ ಆ ಆಟಗಾರ 16ನೇ ಹರೆಯದವನಾಗಿದ್ದ ಎಂದು ಹೇಳಿದೆ.

ಇಸಿಬಿ ಬೋರ್ಡ್‌ನ ಮಾಹಿತಿ

ಇಸಿಬಿ ಬೋರ್ಡ್‌ನ ಮಾಹಿತಿ

'ಇಂಗ್ಲೆಂಡ್‌ನ ಆಟಗಾರನೊಬ್ಬ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅಪರಾಧ ರೀತಿಯ ಪೋಸ್ಟ್‌ ಹಾಕಿಕೊಂಡಿರುವುದು ನಮ್ಮ ಗಮನ ಸೆಳೆದಿದೆ,' ಎಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್‌ನ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ(ಸಾಂದರ್ಭಿಕ ಚಿತ್ರ).

ಬಹಳ ಹಳೆಯ ಪೋಸ್ಟ್‌ಗೂ ಶಿಕ್ಷೆ

ಬಹಳ ಹಳೆಯ ಪೋಸ್ಟ್‌ಗೂ ಶಿಕ್ಷೆ

'ನಾವು ಮುಂದಿನ ಹೇಳಿಕೆ ನೀಡುವ ಮುನ್ನ ಆ ಆಟಗಾರ ಹಾಕಿರುವ ಪೋಸ್ಟ್ ಅನ್ನು ಮತ್ತೊಮ್ಮೆ ಪರಿಶೀಲಿಸಲಿದ್ದೇವೆ,' ಎಂದು ಇಸಿಬಿ ಮೂಲ ತಿಳಿಸಿರುವುದಾಗಿ ತಿಳಿದು ಬಂದಿದೆ. ಇಂಗ್ಲೆಂಡ್‌ ವೇಗಿ ಆಲಿ ರಾಬಿನ್ಸನ್ 2012, 13ರಲ್ಲಿ ಕೆಟ್ಟ ರೀತಿಯ ಪೋಸ್ಟ್‌ ಹಾಕಿದ್ದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತಾಗಿರುವ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ಮಿಂಚಿದ್ದ ವೇಗಿ ರಾಬಿನ್ಸನ್

ಮಿಂಚಿದ್ದ ವೇಗಿ ರಾಬಿನ್ಸನ್

ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್-ನ್ಯೂಜಿಲೆಂಡ್‌ ಮೊದಲನೇ ಟೆಸ್ಟ್‌ನಲ್ಲಿ ಪಾದಾರ್ಪಣೆ ಪಂದ್ಯ ಆಡಿ ಉತ್ತಮ ಪ್ರದರ್ಶನ ನೀಡಿದ ಬಳಿಕ ರಾಬಿನ್ಸನ್ ಮಾಡಿದ್ದ ಹಳೆಯ ಪೋಸ್ಟ್‌ ವೈರಲ್ ಆಗಿತ್ತು. ಮೊದಲ ಟೆಸ್ಟ್‌ನಲ್ಲಿ ರಾಬಿನ್ಸನ್ 4+3 ವಿಕೆಟ್ ಪಡೆದಿದ್ದರು. ಈ ಪಂದ್ಯ ಡ್ರಾ ಆಗಿತ್ತು. ಪಂದ್ಯದಲ್ಲಿ ರಾಬಿನ್ಸನ್ ಪ್ರದರ್ಶನ ಮೆಚ್ಚುಗೆ ಗಿಟ್ಟಿಸಿಕೊಂಡಿತ್ತಾದರೂ ಹಳೆಯ ಪೋಸ್ಟ್‌ಗಾಗಿ ರಾಬಿನ್ಸನ್ ಅಮಾನತಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿತ್ತು.

Story first published: Tuesday, June 8, 2021, 10:26 [IST]
Other articles published on Jun 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X