ಸುರಕ್ಷಿತವಾಗಿ ನ್ಯೂಜಿಲೆಂಡ್ ತಲುಪಿದ ಎರಡನೇ ಹಂತದಲ್ಲಿ ತೆರಳಿದ ಆಟಗಾರರು

ಐಪಿಎಲ್ 14ನೇ ಆವೃತ್ತಿ ಮುಕ್ತಾಯದ ನಂತರ ಬಹುತೇಕ ಕ್ರಿಕೆಟಿಗರು ತವರಿಗೆ ಮರಳಿದ್ದಾರೆ. ಕೀವಿಸ್ ಆಟಗಾರರ ಮೊದಲ ತಂಡ ನ್ಯೂಜಿಲೆಂಡ್‌ಗೆ ವಾಪಾಸಾದ ನಂತರ ಇಂದು ಎರಡನೇ ಹಂತದ ಆಟಗಾರರು ತವರಿಗೆ ಯಶಸ್ವಿಯಾಗಿ ಮರಳಿದ್ದಾರೆ.

ಎರಡನೇ ವಿಭಾಗದಲ್ಲಿ ತೆರಳಿದ ಈ ತಂಡದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್, ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಬ್ರೆಂಡನ್ ಮೆಕ್ಕಲಮ್ ಕೂಡ ಸೇರಿದ್ದಾರೆ. ಲ್ಯೂಕಿ ಫರ್ಗ್ಯೂಸನ್, ಅಂಪಾಯರ್ ಕ್ರಿಸ್ ಜಾಫನೇಯ್, ಕಾಮೆಂಟೇಟರ್‌ಗಳಾದ ಸ್ಕಾಟ್ ಸ್ಟೈರಿಸ್ ಹಾಗೂ ಸೈಮನ್ ಡೌಲ್ ತವರಿಗೆ ಮರಳಿದ್ದಾರೆ. ಭಾನುವಾರ ಸ್ಥಳೀಯ ಕಾಲಮಾನ 6 ಗಂಟೆ ವೇಳೆಗೆ ಈ ತಂಡವನ್ನು ಹೊತ್ತ ವಿಮಾನ ಆಕ್ಲೆಂಡ್‌ಗೆ ತಲುಪಿದೆ.

ವಾರ್ನರ್‌ರನ್ನು ನಾಯಕತ್ವದಿಂದ ವಜಾಗೊಳಿಸಿದಾಗ ನಾವ್ಯಾರೂ ತಲೆಕೆಡಿಸಿಕೊಳ್ಳಲಿಲ್ಲ ಎಂದ ಹೈದರಾಬಾದ್ ಆಟಗಾರ

ಭಾರತದಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಕೂಡ ಭಾರತದಿಂದ ತೆರಳುವ ವಿಮಾನಗಳಿಗೆ ನಿರ್ಬಂಧವನ್ನು ಹೇರಿದೆ. ಹೀಗಾಗಿ ಈ ಆಟಗಾರರು ಹಾಗೂ ಸಿಬ್ಬಂದಿಗಳ ತಂಡ ಜಪಾನ್‌ನ ಟೋಕಿಯೋ ಮಾರ್ಗವಾಗಿ ತೆರಳಿದೆ.

ಶನಿವಾರ ಮೊದಲ ತಂಡ ನ್ಯೂಜಿಲೆಂಡ್‌ಗೆ ಮರಳಿದ್ದು ಆ ಬಳಗದಲ್ಲಿ ಟ್ರೆಂಟ್ ಬೋಲ್ಟ್, ಆಡಮ್ ಮಿಲ್ನೆ, ಫಿನ್ ಅಲೆನ್ ಮತ್ತು ಜಿಮ್ಮಿ ನೀಶಮ್ ಇದ್ದರು. ಕೆಕೆಆರ್ ಮತ್ತು ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಟಿಮ್ ಸೈಫರ್ಟ್ ಕೊರೊನಾ ವೈರಸ್‌ಗೆ ತುತ್ತಾಗಿದ್ದು ಭಾರತದಲ್ಲಿಯೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, May 9, 2021, 15:24 [IST]
Other articles published on May 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X