ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಪ್ರವಾಸ ಕೈಗೊಳ್ಳಲು 10 ಶ್ರೀಲಂಕಾ ಕ್ರಿಕೆಟರ್ಸ್ ಹಿಂದೇಟು

Security fears prompt 10 Sri Lanka players to opt out of Pakistan tour

ಕೊಲಂಬೋ, ಸೆ. 10: ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಶ್ರೀಲಂಕಾದ 10 ಮಂದಿ ಆಟಗಾರರು ಹಿಂದೇಟು ಹಾಕಿದ್ದಾರೆ. ಪಾಕಿಸ್ತಾನದಲ್ಲಿ ಆಟಗಾರರಿಗೆ ಸುರಕ್ಷತೆ ಇರುವುದಿಲ್ಲ, ಈ ಹಿಂದೆ ಆದಂತೆ ಭದ್ರತಾ ಲೋಪವಾದರೆ ಏನು ಮಾಡುವುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಿರಿಯ ಆಟಗಾರರ ಈ ವಾದದಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್ಎಲ್ ಸಿ) ಕೂಡಾ ಚಿಂತೆ ಮಾಡುವಂತಾಗಿದೆ. ಸೆಪ್ಟೆಂಬರ್ 27 ರಿಂದ ಶ್ರೀಲಂಕಾ ತಂಡವು ಪಾಕಿಸ್ತಾನ ಪ್ರವಾಸ ಕೈಗೊಳ್ಳುಲಿದೆ. ಪಾಕ್ ಪ್ರವಾಸದ ವೇಳೆ ಉಭಯ ತಂಡಗಳು ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಿವೆ.

ಅಂತಾರಾಷ್ಟ್ರೀಯ ಟಿ20 ಇತಿಹಾಸ ಬರೆದ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗಅಂತಾರಾಷ್ಟ್ರೀಯ ಟಿ20 ಇತಿಹಾಸ ಬರೆದ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ

ನಿರೋಶನ್ ಡಿಕ್​ವೆಲ್ಲಾ, ಕುಸಲ್ ಪೆರೇರಾ, ಧನಂಜಯ ಡಿ ಸಿಲ್ವಾ, ಥಿಸ್ಸರ ಪೆರೇರಾ, ಅಕಿಲ ಧನಂಜಯ, ಲಸಿತ್ ಮಾಲಿಂಗ, ಏಂಜೆಲೋ ಮ್ಯಾಥ್ಯೂಸ್, ಸುರಂಗ ಲಕ್ಮಲ್, ದಿನೇಶ್ ಚಾಂಡಿಮಲ್ ಹಾಗೂ ದಿಮುತ್ ಕರುಣರತ್ನೆ ಪಾಕಿಸ್ತಾನ ಪ್ರವಾಸ ಕೈಗೊಳ್ಳದಿರಲು ನಿರ್ಧರಿಸಿದ್ದಾರೆ.

ಪಾಕ್ ಮುಖ್ಯ ಕೋಚ್‌, ಚೀಫ್ ಸೆಲೆಕ್ಟರ್ ಆಗಿ ಮಿಸ್ಬಾ ಉಲ್ ಹಕ್ ಆಯ್ಕೆಪಾಕ್ ಮುಖ್ಯ ಕೋಚ್‌, ಚೀಫ್ ಸೆಲೆಕ್ಟರ್ ಆಗಿ ಮಿಸ್ಬಾ ಉಲ್ ಹಕ್ ಆಯ್ಕೆ

2009ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡದ ಆಟಗಾರರಿದ್ದ ಬಸ್ ಮೇಲೆ ಲಾಹೋರ್ ನಲ್ಲಿ ಶಸ್ತ್ರಧಾರಿಗಳು ಗುಂಡಿನ ಮಳೆಗೆರೆದಿದ್ದರು. ಹೀಗಾಗಿ ಪಾಕಿಸ್ತಾನದ ಸದ್ಯದ ಪರಿಸ್ಥಿತಿ ಅವಲೋಕಿಸಿದ ಶ್ರೀಲಂಕಾದ ಏರ್ ಫೋರ್ಸ್ ಕಮ್ಯಾಂಡರ್ ಮಾರ್ಷಲ್ ಏರ್ ರೋಷನ್ ಗುಣತಿಲಕೆ, ಈ ಬಗ್ಗೆ ಆಟಗಾರರಿಗೆ ತಿಳಿ ಹೇಳಿದ್ದಾರೆ. ಜೊತೆಗೆ ಪ್ರವಾಸ ಕೈಗೊಳ್ಳುವುದು ವೈಯಕ್ತಿಕ ಆಯ್ಕೆಗೆ ಬಿಡುವುದು ಉತ್ತಮ ಎಂದು ಹೇಳಿದ್ದಾರೆ.

Story first published: Tuesday, September 10, 2019, 11:19 [IST]
Other articles published on Sep 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X