ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆಂಡು ನೋಡಿ ಬಲವಾಗಿ ಹೊಡಿ: ಟಿ20 ಚಾಲೆಂಜ್‌ಗೆ ಶಫಾಲಿ ರೆಡಿ

‘See the ball, hit with force’, Shafali Verma ready for T20 Challenge

ದುಬೈ: ಭಾರತದ ಯುವ ಬ್ಯಾಟ್ಸ್‌ಮನ್ ಶಫಾಲಿ ವರ್ಮಾಗೆ ಈಗಿನ್ನೂ 16ರ ಹರೆಯ. ಆದರೆ ಈಕೆಯ ದಿಟ್ಟ ಬ್ಯಾಟಿಂಗ್ ನೋಡಿದ ಯಾರಾದರೂ ಬೆರಗಾಗಬೇಕು. ರೋಹ್ತಕ್‌ನ ಈ ದಿಟ್ಟ ಆಟಗಾರ್ತಿ ಶಫಾಲಿ, ಮಹಿಳಾ ಟಿ20 ಚಾಲೆಂಜ್‌ಗೆ ತಯಾರಾಗಿದ್ದಾರೆ. ಟೂರ್ನಿಯಲ್ಲಿ ಶಫಾಲಿ ವೆಲಾಸಿಟಿ ಪರ ಆಡಲಿದ್ದಾರೆ.

ಐಪಿಎಲ್: ಹೈದರಾಬಾದ್ ವಿರುದ್ಧ ಮುಂಬೈ ಮಾಡಿದ 3 ಪ್ರಮುಖ ತಪ್ಪುಗಳುಐಪಿಎಲ್: ಹೈದರಾಬಾದ್ ವಿರುದ್ಧ ಮುಂಬೈ ಮಾಡಿದ 3 ಪ್ರಮುಖ ತಪ್ಪುಗಳು

2019ರ ಮಹಿಳಾ ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವವರೆಗೂ ಶಫಾಲಿ ವರ್ಮಾ ಹೆಸರೇ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಆದರೆ ವಿಶ್ವಕಪ್‌ನಲ್ಲಿ ಗಮನ ಸೆಳೆದಿದ್ದ ಶಫಾಲಿ, ಮೂರು ತಂಡಗಳ ಮಹಿಳಾ ಟಿ20 ಚಾಲೆಂಜ್‌ನಲ್ಲೂ ಚಿತ್ತ ತನ್ನತ್ತ ಹರಿಸಿಕೊಳ್ಳಲಿದ್ದಾರೆ. ಕಣಕ್ಕಿಳಿಯಲು ಕಾಯುತ್ತಿರುವ ಶಫಾಲಿ ದೊಡ್ಡ ಹೊಡೆತಗಳತ್ತ ಚಿತ್ತ ನೆಟ್ಟಿದ್ದಾರೆ.

ಈವರೆಗೆ ಒಟ್ಟು 19 ಟಿ20ಐ ಪಂದ್ಯಗಳನ್ನಾಡಿರುವ ಶಫಾಲಿಯ ಸ್ಟ್ರೈಕ್ ರೇಟ್ 146 ಇದೆ. ಶಫಾಲಿಯ ದಿಟ್ಟ ಬ್ಯಾಟಿಂಗ್‌ನಿಂದಲೇ ಭಾರತ ತಂಡ ಟಿ20ಐನಲ್ಲಿ ಒಂದು ಹೆಜ್ಜೆ ಮುಂದೆ ಸಾಗಲು ಸಾಧ್ಯವಾಗಿದೆ. ಅತೀ ಕಿರಿಯ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಅರ್ಧ ಶತಕ ಬಾರಿಸಿರುವ ಶೆಫಾಲಿ, ಸಚಿನ್ ತೆಂಡೂಲ್ಕರ್ ಅವರ ಸುಮಾರು 30 ವರ್ಷಗಳ ಹಿಂದಿನ ದಾಖಲೆ ಮುರಿದ್ದಾರೆ.

IPLನಲ್ಲಿ ಡೇವಿಡ್ ವಾರ್ನರ್ ದಾಖಲೆ: ಅತಿ ಹೆಚ್ಚು ಶತಕದ ಜೊತೆಯಾಟದಲ್ಲಿ ಭಾಗಿIPLನಲ್ಲಿ ಡೇವಿಡ್ ವಾರ್ನರ್ ದಾಖಲೆ: ಅತಿ ಹೆಚ್ಚು ಶತಕದ ಜೊತೆಯಾಟದಲ್ಲಿ ಭಾಗಿ

ಟಿ20 ಚಾಲೆಂಜ್‌ಗಾಗಿ ಸದ್ಯ ಯುಎಇಯಲ್ಲಿರುವ ಶೆಫಾಲಿ ಮಾತನಾಡಿ, 'ಪಂದ್ಯಗಳಲ್ಲಿ ಚೆಂಡುಗಳನ್ನು ಹೊಡೆಯಲು ನಾನು ಉತ್ಸುಕಳಾಗಿದ್ದೇನೆ. ನಾನು ನನ್ನದೇ ಶಾಟ್‌ಗಳನ್ನು ಆಡಲಿದ್ದೇನೆ. ನಾನು ಸ್ಮೃತಿ ಮಂಧಾನ ಮತ್ತು ಭಾರತ ತಂಡದ ಪರ ಆಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕೊರೊನಾ ಮಧ್ಯೆಯೂ ಮಹಿಳಾ ಟಿ20 ಚಾಲೆಂಜ್‌ ಆಯೋಜಿಸಿರುವುದು ಉತ್ತಮ ನಡೆ,' ಎಂದಿದ್ದಾರೆ.

Story first published: Wednesday, November 4, 2020, 11:52 [IST]
Other articles published on Nov 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X