ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೆಯುವ ಚಳಿಯಲ್ಲಿ ಸೆಹ್ವಾಗ್, ಸ್ಮಿತ್, ಅಫ್ರಿದಿ ಟಿ20 ಕ್ರಿಕೆಟ್

By Mahesh

ಬೆಂಗಳೂರು, ಡಿಸೆಂಬರ್ 26: ಸ್ವಿಟ್ಜರ್ಲೆಂಡ್ ನ ಸೈಂಟ್ ಮೊರಿಟ್ಜ್ ಐಸ್ ಕ್ರಿಕೆಟ್ ಮೈದಾನದಲ್ಲಿ ಚೊಚ್ಚಲ ಐಸ್ ಕ್ರಿಕೆಟ್ ಟಿ20 ಪಂದ್ಯಾವಳಿ ನಡೆಯಲಿದೆ. ಕ್ರಿಕೆಟ್ ಲೋಕದ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್, ಗ್ರಹಾಂ ಸ್ಮಿತ್, ಶಾಹೀದ್ ಅಫ್ರಿದಿ ಅವರು ಈ ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ.

2018ರ ಫೆಬ್ರವರಿ 8 ಹಾಗೂ 9ರಂದು ಈ ಪಂದ್ಯಾವಳಿ ನಡೆಯಲಿದೆ. ಅಫ್ರಿದಿ ಹಾಗೂ ಸೆಹ್ವಾಗ್ ಇತ್ತೀಚೆಗೆ ದುಬೈನಲ್ಲಿ ಟಿ10 ಟೂರ್ನಮೆಂಟ್ ನಲ್ಲಿ ಪಾಲ್ಗೊಂಡಿದ್ದರು.

Sehwag, Graeme Smith, Afridi confirmed for Ice Cricket


ಆದರೆ, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರಹಾಂ ಸ್ಮಿತ್ ಅವರು 2016ರ ಮಾಸ್ಟರ್ ಚಾಂಪಿಯನ್ಸ್ ಲೀಗ್ ನಂತರ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಂಡಿರಲಿಲ್ಲ.

ಉಳಿದಂತೆ ಈ ಐಸ್ ಕ್ರಿಕೆಟ್ ನಲ್ಲಿ ಮೊಹಮ್ಮದ್ ಕೈಫ್, ಶೋಯಿಬ್ ಅಖ್ತರ್, ಮಹೇಲ ಜಯವರ್ದನೆ, ಲಸಿತ್ ಮಾಲಿಂಗ, ಮೈಕಲ್ ಹಸ್ಸಿ, ಜಾಕ್ ಕಾಲಿಸ್, ಡೇನಿಯಲ್ ವೆಟ್ಟೋರಿ, ನಾಥನ್ ಮೆಕಲಮ್, ಗ್ರಾಂಟ್ ಎಲಿಯಟ್, ಮೊಂಟಿ ಪನೇಸರ್ ಹಾಗು ಓವಿಶ್ ಶಾ ಪಾಲ್ಗೊಳ್ಳಲಿದ್ದಾರೆ.

ಏನು ವ್ಯತ್ಯಾಸ : ಹಾಲಿ ಕ್ರಿಕೆಟ್ ಮೈದಾನದಲ್ಲಿ ಆಡುವ ಕ್ರಿಕೆಟ್ ನಂತೆ ಐಸ್ ಕ್ರಿಕೆಟ್ ನಲ್ಲೂ ನಿಯಮಗಳಿವೆ, ಕೆಂಪು ಚೆಂಡು ಬಳಸಲಾಗುತ್ತದೆ. ಆದರೆ, ಸೈಕ್ಪ್ಸ್ ಇರುವ ಶೂಗಳನ್ನು ಬಳಸುವುದಿಲ್ಲ. ಸುಮಾರು ಮೈನಸ್ 20 ಡಿಗ್ರಿ ಸೆಲ್ಸಿಯಸ್ ಹವಾಮಾನದಲ್ಲಿ ಆಡಬೇಕಾಗಬಹುದು.

ಸಮುದ್ರಮಟ್ಟದಿಂದ 5910 ಅಡಿ ಎತ್ತರದ ಪ್ರದೇಶದಲ್ಲಿ ಕೃತಕ ಪಿಚ್ ನಿರ್ಮಿಸಲಾಗುತ್ತದೆ. ಈ ಪಿಚ್ ನಲ್ಲಿ ಚೆಂಡು ಹೆಚ್ಚು ಪುಟಿದೇಳದಿರಬಹುದು. ವಿಕೆಟ್ ನಡುವೆ ಓಡುವಾಗ ಹೆಚ್ಚಿನ ಶಕ್ತಿ ಹಾಗೂ ಮನೋಬಲ ಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X