ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೇಷ್ಠ ಆಟಗಾರರಿಗಿಂತಲೂ ಹೆಚ್ಚಿನ ಸಾಮರ್ಥ್ಯ ಈತನಲ್ಲಿದೆ: ಯುವ ಆಟಗಾರನ ಬಗ್ಗೆ ಸೆಹ್ವಾಗ್ ಪ್ರಶಂಸೆ

Sehwag praises KKR youngster said he can achieve immense success

ಯುಎಇನಲ್ಲಿ ಐಪಿಎಲ್ 14ನೇ ಆವೃತ್ತಿಯ ಎರಡನೇ ಸರಣಿ ಪಂದ್ಯಗಳು ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಎರಡನೇ ಚರಣದಲ್ಲಿ ಮೂರು ಪಂದ್ಯಗಳು ಅಂತ್ಯವಾಗಿದ್ದು ಕೆಲ ಆಟಗಾರರ ಪ್ರದರ್ಶನ ಅದ್ಭುತವಾಗಿದೆ. ಇನ್ನು ಈ ಸಂದರ್ಭದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದ ಬಗ್ಗೆ ಸೆಹ್ವಾಗ್ ಮಾತನಾಡಿದ್ದು ಯುವ ಆಟಗಾರನೋರ್ವನ ಬಗ್ಗೆ ಸೆಹ್ವಾಗ್ ಭಾರೀ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಯುವ ಆಟಗಾರ ಶುಬ್ಮನ್ ಗಿಲ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ ವೀರೇಂದ್ರ ಸೆಹ್ವಾಗ್. ಶುಬ್ಮನ್ ಗಿಲ್ ಅದ್ಭುತ ಆಟಗಾರನಾಗಿದ್ದು ಹಲವು ಶ್ರೇಷ್ಠ ಕ್ರಿಕೆಟಿಗರಿಂತಲೂ ಹೆಚ್ಚಿನ ಸಾಮರ್ಥ್ಯ ಈತನ ಬಳಿ ಇದೆ ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.

ಐಪಿಎಲ್ ಇತಿಹಾಸದಲ್ಲಿ 7ನೇ ಬಾರಿಗೆ ಮೂರಂಕಿ ದಾಟಲು ವಿಫಲವಾದ ಆರ್‌ಸಿಬಿಐಪಿಎಲ್ ಇತಿಹಾಸದಲ್ಲಿ 7ನೇ ಬಾರಿಗೆ ಮೂರಂಕಿ ದಾಟಲು ವಿಫಲವಾದ ಆರ್‌ಸಿಬಿ

ಮನಸ್ಥಿತಿ ಸಿದ್ಧಪಡಿಸಿಕೊಳ್ಳಬೇಕು

ಮನಸ್ಥಿತಿ ಸಿದ್ಧಪಡಿಸಿಕೊಳ್ಳಬೇಕು

"ಶುಬ್ಮನ್ ಗಿಲ್ ಕ್ರಿಕೆಟ್ ಆಟದ ಹಲವಾರು ಶ್ರೇಷ್ಠರಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಳೆಯ ತಲೆಮಾರಿನ ಆಟಗಾರರು ಬಲವಾದ ಮನಸ್ಥಿತಿಯನ್ನು ಹೊಂದಿದ್ದರು. ಅದು ಅವರ ಯಶಸ್ಸಿಗೆ ಕಾರಣವಾಯಿತು. ಗಿಲ್ ಯಶಸ್ವಿ ದಾಂಡಿಗನಾಗಲು ಬಯಸಿದರೆ ಆತ ತನ್ನ ಮನಸ್ಥಿತಿಯನ್ನು ಅದಕ್ಕೆ ಪೂರಕವಾಗಿ ಸಿದ್ಧಗೊಳಿಸಬೇಕಿದೆ" ಎಂದು ಅವರು ಹೇಳಿದರು. ಮುಂದುವರಿದು ಮಾತನಾಡಿದ ಸೆಹ್ವಾಗ್ "ಟಿ20 ಮಾದರಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಒತ್ತಡವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರು ಎದುರಿಸಿದ ಮೊದಲ ಚೆಂಡಿನಿಂದಲೇ ಹೊಡೆಯಲು ಆರಂಭಿಸಬೇಕು" ಎಂದು ಸೆಹ್ವಾಗ್ ಪ್ರತಿಪಾದಿಸಿದರು

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಶುಬ್ಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದರು. 93 ರನ್‌ಗಳ ಸುಲಭ ಗುರಿಯನ್ನು ಪಡೆದಿದ್ದ ಕೆಕೆಆರ್ ಈ ಗುರಿಯನ್ನು ಕೇವಲ 10 ಓವರ್‌ಗಳಲ್ಲಿ ತಲುಪಿತ್ತು. ಅರ್ಧ ಶತಕದ ಅಂಚಿನಲ್ಲಿ ಔಟಾಗುವ ಮುನ್ನ ಗಿಲ್ ಆರು ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಈ ಪ್ರದರ್ಶನದಿಂದಾಗಿ ಕೆಕೆಆರ್ ಸುಲಭವಾಗಿ ಆರ್‌ಸಿಬಿ ವಿರುದ್ಧದ ಪಂದ್ಯವನ್ನು ಗೆದ್ದು ಬೀಗಿತ್ತು.

ರನ್‌ ಬಗ್ಗೆ ತಲೆಕೆಡಿಸಿಕೊಳ್ಳಬಾರದು

ರನ್‌ ಬಗ್ಗೆ ತಲೆಕೆಡಿಸಿಕೊಳ್ಳಬಾರದು

ಭಾರತದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಗಿಲ್ ಬ್ಯಾಟಿಂಗ್ ಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರಿಕ್‌ಬಜ್‌ ಜೊತೆಗೆ ಮಾತನಾಡಿದ ಸೆಹ್ವಾಗ್ ಕೆಕೆಆರ್ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಟೀಕಾಕಾರರ ಬಗ್ಗೆ ತಲೆಕೆಡಿಸಿಕೊಳ್ಳದೆ ಯಾವಾಗಲೂ ಮುಕ್ತ ಮನಸ್ಸಿನಿಂದ ಆಡಬೇಕು ರನ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಆಟವನ್ನು ಮುಂದುವರಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಯಾವುದೇ ಪರಿಸ್ಥಿತಿ ಇದ್ದರೂ ಶುಬ್ಮನ್ ಗಿಲ್ ಮುಕ್ತವಾಗಿ ಬ್ಯಾಟಿಂಗ್ ಮಾಡಬೇಕು. ಆತ ರನ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಅವರ ನಂತರ 9 ಬ್ಯಾಟ್ಸ್‌ಮನ್‌ಗಳಿದ್ದಾರೆ, ಹೀಗಾಗಿ ಅವರು ಹೆಚ್ಚು ಯೋಚಿಸಬಾರದು. ಅವನು ಸುಲಭದ ಎಸೆತಗಳಿಗೆ ದಂಡಿಸುತ್ತಾ ಕಠಿಣ ಎಸೆತಗಳಿಂದ ಒಂಟಿ ರನ್‌ಗಳನ್ನು ಪಡೆಯುತ್ತಾ ಸಾಗಬೇಕು ಎಂದಿದ್ದಾರೆ ಸೆಹ್ವಾಗ್.

Virat Kohliಗೆ ABD ಈ ವಿಶೇಷ ಜೆರ್ಸಿ ಕೊಟ್ಟಿದ್ದೇಕೆ | Oneindia Kannada
ಭರ್ಜರಿ ಗೆಲುವು ಸಾಧಿಸಿದ ಕೆಕೆಆರ್

ಭರ್ಜರಿ ಗೆಲುವು ಸಾಧಿಸಿದ ಕೆಕೆಆರ್

ಐಪಿಎಲ್ 14ನೇ ಆವೃತ್ತಿಯ ಮೊದಲ ಚರಣದ ಟೂರ್ನಿಯಲ್ಲಿ ಆರ್‌ಸಿಬಿ ಅದ್ಭುತ ಆಟವನ್ನು ಪ್ರದರ್ಶಿಸಿದ್ದರೂ ಎರಡನೇ ಚರಣದ ಆರಂಭದ ಪಂದ್ಯದಲ್ಲಿ ಇದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಆರ್‌ಸಿಬಿ ವಿಫಲವಾಯಿತು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 9 ವಿಕೆಟ್‌ಗಳ ಭಾರೀ ಅಂತರದ ಸೋಲು ಅನುಭವಿಸಿತು. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಕೇವಲ 92 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಗಿತ್ತು. ಈ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿದ ಕೆಕೆಆರ್ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ. ಆರ್‌ಸಿಬಿ ತಂಡದ ಆರಂಭಿಕ ಆಟಗಾರರಾದ ಶುಬ್ಮನ್ ಗಿಲ್ ಹಾಗೂ ವೆಂಗಟೇಶ್ ಐಯ್ಯರ್ ಹತ್ತೇ ಓವರ್‌ಗಳಲ್ಲಿ ಈ ಗುರಿಯನ್ನು ತಲುಪುವಂತೆ ಮಾಡಿದರು. ಗೆಲುವಿನ ಸನಿಹದಲ್ಲಿರುವಾಗ ಶುಬ್ಮನ್ ಗಿಲ್ ವಿಕೆಟ್ ಕಳೆದುಕೊಂಡರು. ನಂತರ ವೆಂಕಟೇಶ್ ಐಯ್ಯರ್ ಗೆಲುವಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

Story first published: Wednesday, September 22, 2021, 0:37 [IST]
Other articles published on Sep 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X