ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ತಂಡದ ಆಯ್ಕೆಯ ನಿರ್ಧಾರದ ಬಗ್ಗೆ ಗಂಭೀರ ಪ್ರಶ್ನೆ ಮುಂದಿಟ್ಟ ಸೆಹ್ವಾಗ್

Sehwag wants an explanation from Indian selectors for Chahals exclusion from T20 World Cup squad

ಈ ಬಾರಿಯ ಐಪಿಎಲ್ ಆವೃತ್ತಿ ಅಂತ್ಯವಾಗುತ್ತಿದ್ದಂತೆಯೇ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ವಿಶ್ವಕಪ್‌ಗೆ ಭಾರತೀಯ ಕ್ರಿಕೆಟ್ ತಂಡದ 15 ಮಂದಿ ಸದಸ್ಯರನ್ನು ಘೋಷಿಸಲಾಗಿದೆ. ಐಪಿಎಲ್ ನಡೆಯುತ್ತಿರುವ ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಸ್ಕ್ವಾಡ್ ಆಯ್ಕೆಯ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಇದಕ್ಕೆ ಕಾರಣ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್. ಟೀಮ್ ಇಂಡಿಯಾ ತಂಡದ ಓರ್ವ ಸದಸ್ಯನನ್ನು ಈ ವಿಶ್ವಕಪ್‌ನ ತಂಡಕ್ಕೆ ಪರಿಗಣಿಸದ ಬಗ್ಗೆ ಸೆಹ್ವಾಗ್ ತಮ್ಮ ಅಸಮಾಧಾನವನ್ನು ಸೆಹ್ವಾಗ್ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನಿರ್ಧಾರಕ್ಕೆ ಗೊಂದಲವನ್ನು ವ್ಯಕ್ತಪಡಿಸಿದ್ದಾರೆ. ಆ ಓರ್ವ ಆಟಗಾರನನ್ನು ಯಾವ ಖಾರಣಕ್ಕಾಗಿ ಟಿ20 ವಿಶ್ವಕಪ್‌ನಿಂದ ಹೊರಗಿಡಲಾಯಿತು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಹಾಗಾಗಿ ಈ ಬಗ್ಗೆ ಆಯ್ಕೆ ಸಮಿತಿ ವಿವರಣೆಯನ್ನು ನೀಡಬೇಕು ಎಂದು ವೀರೇಂದ್ರ ಸೆಹ್ವಾಗ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ರೈನಾ ಹೊರಗಿಟ್ಟು ಈತನನ್ನೇ ಪ್ರಮುಖ ಬ್ಯಾಟರ್ ಆಗಿ ಕಣಕ್ಕಿಳಿಸಿ: ಮಂಜ್ರೇಕರ್ ಹೇಳಿದ ಅಚ್ಚರಿಯ ಹೆಸರು!ರೈನಾ ಹೊರಗಿಟ್ಟು ಈತನನ್ನೇ ಪ್ರಮುಖ ಬ್ಯಾಟರ್ ಆಗಿ ಕಣಕ್ಕಿಳಿಸಿ: ಮಂಜ್ರೇಕರ್ ಹೇಳಿದ ಅಚ್ಚರಿಯ ಹೆಸರು!

ಹಾಗಾದರೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದೇನು? ಯಾವ ಆಟಗಾರನನ್ನು ಉದ್ದೇಶಿಸಿ ಸೆಹ್ವಾಗ್ ಮಾತನಾಡಿದ್ದಾರೆ? ಮುಂದೆ ಓದಿ..

ಯುಜುವೇಂದ್ರ ಚಾಹಲ್ ಪರಿಗಣಿಸದ್ದಕ್ಕೆ ಸೆಹ್ವಾಗ್ ಪ್ರತಿಕ್ರಿಯೆ

ಯುಜುವೇಂದ್ರ ಚಾಹಲ್ ಪರಿಗಣಿಸದ್ದಕ್ಕೆ ಸೆಹ್ವಾಗ್ ಪ್ರತಿಕ್ರಿಯೆ

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅನುಭವಿ ಆಟಗಾರ ಯುಜುವೇಂದ್ರ ಚಾಹಲ್‌ಗೆ ಟಿ20 ವಿಶ್ವಕಪ್‌ನ ತಂಡದಲ್ಲಿ ಸ್ಥಾನವನ್ನು ನೀಡದ ಬಗ್ಗೆ ಸೆಹ್ವಾಗ್ ತಮ್ಮ ಗೊಂದಲವನ್ನು ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್‌ನ ತಂಡದಲ್ಲಿ ಚಾಹಲ್‌ಗೆ ಯಾವ ಕಾರಣಕ್ಕೆ ಅವಕಾಶ ನೀಡಿಲ್ಲ ಎಂಬುದು ನನಗೆ ಅರ್ಥವೇ ಆಗುತ್ತಿಲ್ಲ ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಚಾಹಲ್

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಚಾಹಲ್

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಯುಜುವೇಂದ್ರ ಚಾಹಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧಧ ಪಂದ್ಯದಲ್ಲಿ ಚಾಹಲ್ ತಮ್ಮ ಅಮೋಘ ಬೌಲಿಂಗ್ ದಾಳಿಯ ಮೂಲಕ ಮುಂಬೈ ದಾಂಡಿಗರಿಗೆ ಸವಾಲಾದರು. ಈ ಪಂದ್ಯದಲ್ಲಿ ನಾಲ್ಕು ಓವರ್‌ಗಳನ್ನು ಎಸೆದ ಚಾಹಲ್ ಕೇವಲ 11 ರನ್‌ಗಹಳನ್ನು ನೀಡಿದ್ದು 3 ವಿಕೆಟ್ ಪಡೆದುಕೊಂಡಿದ್ದಾರೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 111 ರನ್‌ಗಳಿಗೆ ಆಲೌಟ್ ಆಗಿತ್ತು.

ಇನ್ನು ಮತ್ತೊಂದೆಡೆ ಚಾಹಲ್ ಬದಲಿಗೆ ಈ ಬಾರಿಯ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ರಾಹುಲ್ ಚಹರ್ ಎರಡನೇ ಚರಣದ ಐಪಿಎಲ್‌ನಲ್ಲಿ ಈವರೆಗೆ ಕೇವಲ 1 ವಿಕೆಟ್ ಪಡೆಯುವಲ್ಲಿ ಮಾತ್ರವೇ ಯಶಸ್ವಿಯಾಗಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಚಹರ್ 33 ರನ್‌ಗಳನ್ನು ನೀಡಿ 1 ವಿಕೆಟ್ ಕಬಳಿಸಿದ್ದರು. ಹೀಗಾಗಿ ವೀರೇಂದ್ರ ಸೆಹ್ವಾಗ್ ಚಾಹಲ್‌ಗೆ ಸ್ಥಾನವನ್ನು ನಿರಾಕರಿಸಿದ್ದಕ್ಕೆ ಆಯ್ಕೆಗಾರರು ಕಾರಣವನ್ನು ನೀಡಬೇಕಾಗುತ್ತದೆ ಎಂದಿದ್ದಾರೆ.

ಚಾಹಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಸೆಹ್ವಾಗ್

ಚಾಹಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಸೆಹ್ವಾಗ್

ಮುಂಬೈ ವಿರುದ್ಧದ ಪಂದ್ಯದ ಬಳಿಕ ಕ್ರಿಕ್‌ಬಜ್‌ಗೆ ವಿರೇಂದ್ರ ಸೆಹ್ವಾಗ್ ಪ್ರತಿಕ್ರಿಯಿಸಿದ್ದಾರೆ. "ಚಾಹಲ್ ಇದಕ್ಕೂ ಮೊದಲು ಕೂಡ ಉತ್ತಮವಾಗಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಆತನನ್ನು ತಂಡದಿಂದ ಹೊರಗಿಟ್ಟ ಕಾರಣ ನನಗೆ ಅರ್ಥವಾಗುತ್ತಿಲ್ಲ. ಆಯ್ಕೆಗಾರರು ಈಬಗ್ಗೆ ಖಂಡಿತಾ ವಿವರಣೆಯನ್ನು ನೀಡಬೇಕು. ಇದು ಶ್ರೀಲಂಕಾದಲ್ಲಿ ರಾಹುಲ್ ಚಹರ್ ಉತ್ತಮವಾಗಿ ಬೌಲಿಂಗ್ ಮಾಡಿದಂತಲ್ಲ. ಚಾಹಲ್ ಬೌಲಿಂಗ್ ಮಾಡುವ ರೀತಿ, ಟಿ20 ಮಾದರಿಯಲ್ಲಿ ಯಾವುದೇ ತಂಡಕ್ಕಾದರೂ ಚಾಹಲ್ ಮಿಂಚಬಲ್ಲ ಸಾಮರ್ಥ್ಯ ಅವರನ್ನು ತಂಡದ ಪ್ರಮುಖ ಅಸ್ತ್ರವನ್ನಾಗಿ ಮಾಡಬಲ್ಲದು" ಎಂದಿದ್ದಾರೆ ಸೆಹ್ವಾಗ್.

ಹರ್ಷಲ್‌ಗೂ ಮುನ್ನ ಮುಂಬೈಗೆ ಆಘಾತ ನೀಡಿದ್ದು ಚಾಹಲ್- ಮ್ಯಾಕ್ಸ್‌ವೆಲ್ ಜೋಡಿ

ಹರ್ಷಲ್‌ಗೂ ಮುನ್ನ ಮುಂಬೈಗೆ ಆಘಾತ ನೀಡಿದ್ದು ಚಾಹಲ್- ಮ್ಯಾಕ್ಸ್‌ವೆಲ್ ಜೋಡಿ

ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡದ ವೇಗಿ ಹರ್ಷಲ್ ಪಟೇಲ್ ಹ್ಯಾಟ್ರಿಕ್ ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್‌ಗೆ ಆರಂಭದಿಂದ ಆಘಾರ ನೀಡಿದ್ದು ಯುಜುವೇಂದ್ರ ಚಾಹಲ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿ. ಆರ್‌ಸಿಬಿ ತಂಡದ ಈ ಇಬ್ಬರು ಸ್ಪಿನ್ನರ್‌ಗಳು ಮುಂಬೈ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಹಂಚಿಕೊಂಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಈ ಜೋಡಿಯೇ ಫೆವಿಲಿಯನ್ ಹಾದಿ ತೋರಿಸಿತ್ತು. ಈ ಪಂದ್ಯದಲ್ಲಿ ಚಾಹಲ್ 3 ವಿಕೆಟ್ ಪಡೆದರೆ ಮ್ಯಾಕ್ಸ್‌ವೆಲ್ 2 ವಿಕೆಟ್ ಸಂಪಾದಿಸಿದರು.

ಅರ್ಧಶತಕಕ್ಕಾಗಿ ಚೆನ್ನೈ ವಿರುದ್ಧ ಬ್ಯಾಟ್ ಬೀಸಿದ್ರಾ ಕೊಹ್ಲಿ?; ಮಾಜಿ ಕ್ರಿಕೆಟಿಗನ ಅಸಮಾಧಾನ

ಇನ್ನು ಯುಎಇ ಚರಣದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಚಾಹಲ್ ಐದು ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ಚಾಹಲ್ ಈಗ 9 ವಿಕೆಟ್ ಕಬಳಿಸಿದ್ದಾರೆ. ಮೊದಲ ಚರಣದ ಟೂರ್ನಿಯಲ್ಲಿ ಮಿಂಚಿವಲ್ಲಿ ವಿಫಲವಾಗಿದ್ದ ಚಾಹಲ್ ಈಗ ತಮ್ಮ ಎಂದಿನ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸ್ಟಾರ್ ಆಟಗಾರನ ಭವಿಷ್ಯದ ಜೊತೆ ವಿರಾಟ್ ಚೆಲ್ಲಾಟವಾಡ್ತಿರೋದು ಯಾಕೆ? | Oneindia Kannada
ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ

ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ


ಭಾರತ ವಿಶ್ವಕಪ್ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್

Story first published: Tuesday, September 28, 2021, 10:15 [IST]
Other articles published on Sep 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X