T20 ವಿಶ್ವಕಪ್‌ಗೂ ಮುನ್ನ ಕೊಹ್ಲಿ, ರೋಹಿತ್ ಮತ್ತು ರಾಹುಲ್‌ನೊಂದಿಗೆ ಆಯ್ಕೆಗಾರರು ಮಾತನಾಡಲಿ: ಸಾಬಾ ಕರೀಂ

ಟಿ20 ವಿಶ್ವಕಪ್ ಸಮೀಪಿಸುತ್ತಿರುವ ಸಂದರ್ಭದಲ್ಲಿ ಭಾರತ ತಂಡ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಅಂದ್ರೆ ಅದು ತಂಡದ ಆಯ್ಕೆಯಾಗಿದೆ. ಭಾರತ ತಂಡವು ಸೂಪರ್‌ಸ್ಟಾರ್‌ಗಳ ದೊಡ್ಡ ಪಟ್ಟಿಯನ್ನು ಹೊಂದಿದೆ. ಹೀಗಿರುವಾಗ ಯಾರನ್ನು ಹೊರಗಿಡಬೇಕು, ಯಾರನ್ನು ಆಯ್ಕೆ ಮಾಡಬೇಕು ಎಂಬುದು ಸದ್ಯ ಕಠಿಣ ಪ್ರಶ್ನೆಯಾಗಿದೆ.

ಪ್ರಸ್ತುತ ಆಟಗಾರರ ಫಾರ್ಮ್ ಅನ್ನು ಪರಿಗಣಿಸಿದರೆ, ಅನೇಕ ಸೂಪರ್‌ಸ್ಟಾರ್‌ಗಳು ತಂಡದಲ್ಲಿ ಸ್ಥಾನ ಕಳೆದುಕೊಳ್ಳುತ್ತಾರೆ. ಆದರೆ ಅವರೆಲ್ಲರೂ ಹಿರಿಯ ಆಟಗಾರರೇ ಆಗಿರುವುದರಿಂದ ತಂಡದಿಂದ ಹೊರಗುಳಿಯುವುದು ಸಹ ಕಷ್ಟಸಾಧ್ಯ.

ಟಾಪ್‌ ಆರ್ಡರ್‌ನಲ್ಲಿ ಹೆಚ್ಚಿದ ಸ್ಪರ್ಧೆ

ಟಾಪ್‌ ಆರ್ಡರ್‌ನಲ್ಲಿ ಹೆಚ್ಚಿದ ಸ್ಪರ್ಧೆ

ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸ್ಪರ್ಧೆ ಎದುರಾಗಿದೆ. ಮೊದಲ ಮೂರರಲ್ಲಿ ಯಾರಿರಬೇಕು ಎಂಬುದೇ ಭಾರತಕ್ಕೆ ಅತ್ಯಂತ ಗೊಂದಲಮಯ ಪ್ರಶ್ನೆಯಾಗಿದೆ. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಓಪನಿಂಗ್ ಮಾಡುವ ಸಾಧ್ಯತೆಯಿದ್ದು, ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೆ ಇಳಿಯುವ ಸಾಧ್ಯತೆಯಿದೆ. ಆದರೆ ಅವರ ನಿಧಾನಗತಿಯ ಬ್ಯಾಟಿಂಗ್ ಭಾರತಕ್ಕೆ ದೊಡ್ಡ ತಲೆನೋವಾಗಿದೆ. ರಾಹುಲ್ ಸ್ಥಿರವಾಗಿ ಆಡುತ್ತಾರೆ ಆದರೆ ದೊಡ್ಡ ಸ್ಟ್ರೈಕ್‌ನಲ್ಲಿ ಆಡುವುದು ಕಷ್ಟ. ಪವರ್‌ಪ್ಲೇನಲ್ಲಿ ಯಾರು ಲಾಭ ಮಾಡಿಕೊಳ್ಳಬಹುದು ಎಂಬುದನ್ನು ಭಾರತ ಸಕ್ರಿಯವಾಗಿ ಚರ್ಚಿಸಬೇಕಾಗಿದೆ.

ವಿಶ್ವಕಪ್‌ಗೂ ಮುನ್ನ ತ್ರಿವಳಿ ಸ್ಟಾರ್‌ಗಳ ಜೊತೆ ಮಾತನಾಡಿ

ವಿಶ್ವಕಪ್‌ಗೂ ಮುನ್ನ ತ್ರಿವಳಿ ಸ್ಟಾರ್‌ಗಳ ಜೊತೆ ಮಾತನಾಡಿ

ವಿಶ್ವಕಪ್‌ಗೂ ಮುನ್ನ ಆಯ್ಕೆಗಾರರು ಕೊಹ್ಲಿ, ರೋಹಿತ್ ಮತ್ತು ರಾಹುಲ್ ಅವರೊಂದಿಗೆ ಮಾತನಾಡಬೇಕು ಎಂದು ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಬಾ ಕರೀಂ ಹೇಳಿದ್ದಾರೆ. ತಂಡದ ಪರಿಸ್ಥಿತಿಗೆ ಅನುಗುಣವಾಗಿ ತಂಡದಲ್ಲಿ ಬದಲಾವಣೆ ಮಾಡುವ ಬಗ್ಗೆ ಗಂಭೀರವಾಗಿ ಮಾತನಾಡುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.

ರಮೀಜ್ ರಾಜಾರನ್ನು ಐಪಿಎಲ್‌ಗೆ ಆಹ್ವಾನಿಸಿದ್ದ ಸೌರವ್ ಗಂಗೂಲಿ; ಪಾಕ್ ಕ್ರಿಕೆಟ್ ಅಧ್ಯಕ್ಷ ತಿರಸ್ಕರಿಸಿದ್ದೇಕೆ?

ರೋಹಿತ್ ಮತ್ತು ಕೊಹ್ಲಿ ಕೆಟ್ಟ ಫಾರ್ಮ್ ಎದುರಿಸುತ್ತಿದ್ದಾರೆ!

ರೋಹಿತ್ ಮತ್ತು ಕೊಹ್ಲಿ ಕೆಟ್ಟ ಫಾರ್ಮ್ ಎದುರಿಸುತ್ತಿದ್ದಾರೆ!

ಇತ್ತೀಚಿನ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ನಿರಾಸೆ ಮೂಡಿಸಿದ್ದರೆ, ವಿರಾಟ್ ಕೊಹ್ಲಿಗೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿ ಇಬ್ಬರ ಪ್ರದರ್ಶನ ನಿರ್ಣಾಯಕ. ಇಂಗ್ಲೆಂಡ್‌ನ ಪೇಸ್ ಪಿಚ್‌ನಲ್ಲಿ ಅವರ ಪ್ರದರ್ಶನವನ್ನು ಆಧರಿಸಿ, ವಿಶ್ವಕಪ್‌ನಲ್ಲಿ ಅವರ ಅವಕಾಶಗಳು ಒಂದೇ ಆಗಿವೆ ಎಂದು ಹೇಳಬಹುದು. ಏಕೆಂದರೆ ಇಶಾನ್ ಕಿಶನ್ ಉತ್ತಮ ಫಾರ್ಮ್‌ನಲ್ಲಿ ಆಡುತ್ತಿರುವಾಗ ಅವರನ್ನು ತಂಡದಿಂದ ಹೊರಗಿಡುವುದು ಕಷ್ಟ.

ಈತ ಕಣಕ್ಕಿಳಿದರೆ ಹಾರ್ದಿಕ್, ದಿನೇಶ್ ಕಾರ್ತಿಕ್ ಮೇಲಿನ ಒತ್ತಡ ಕಡಿಮೆಯಾಗಲಿದೆ: ಸಂಜಯ್ ಮಂಜ್ರೇಕರ್

ರಾಹುಲ್ - ರೋಹಿತ್ ಜೋಡಿ ಮುಗ್ಗರಿಸಿತ್ತು

ರಾಹುಲ್ - ರೋಹಿತ್ ಜೋಡಿ ಮುಗ್ಗರಿಸಿತ್ತು

2021ರ ಟಿ20 ವಿಶ್ವಕಪ್‌ನಲ್ಲಿ ರಾಹುಲ್-ರೋಹಿತ್ ಆರಂಭಿಕ ಜೊತೆಯಾಟ ಪ್ರಮುಖ ಪಂದ್ಯಗಳಲ್ಲಿ ವಿಫಲವಾಗಿತ್ತು. ಹೀಗಾಗಿ ಈ ಬಾರಿ ಇಬ್ಬರನ್ನೂ ನಂಬುವುದು ಕಷ್ಟ. ಇಬ್ಬರೂ ಸೂಪರ್ ಬ್ಯಾಟ್ಸ್‌ಮನ್‌ಗಳು ಆದರೆ ಬಲಗೈ ಬ್ಯಾಟ್ಸ್‌ಮನ್‌ಗಳು. ಆದ್ದರಿಂದ, ಆರಂಭಿಕರಾಗಿ ಕಣಕ್ಕಿಳಿದಾಗ ಎದುರಾಳಿ ತಂಡಕ್ಕೆ ಫೀಲ್ಡಿಂಗ್ ಮಾಡುವುದು ಸುಲಭ.

ಇನ್ನೊಂದು ಸಮಸ್ಯೆಯೆಂದರೆ ರಿಷಭ್ ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಫಾರ್ಮ್ ಅಷ್ಟಾಗಿ ಚೆನ್ನಾಗಿಲ್ಲ. ರಿಷಭ್ ಟೆಸ್ಟ್‌ನಲ್ಲಿ ಭಾರತದ ನಿಷ್ಠಾವಂತ ಬ್ಯಾಟರ್ ಆಗಿದ್ದು, ಆದರೆ ಸೀಮಿತ ಓವರ್‌ಗಳಲ್ಲಿ ಅಲ್ಲ. ಈ ಹಿನ್ನೆಲೆಯಲ್ಲಿ ಭಾರತ ರಿಷಭ್ ಬದಲಿಗೆ ದಿನೇಶ್ ಕಾರ್ತಿಕ್ ಅವರನ್ನು ವಿಕೆಟ್ ಕೀಪರ್ ಆಗಿ ಪರಿಗಣಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ರಿಷಭ್ ಮತ್ತು ಕಾರ್ತಿಕ್ ಅವರನ್ನು ಒಟ್ಟಿಗೆ ಪ್ಲೇ 11 ರಲ್ಲಿ ಸೇರಿಸಲು ಸಾಧ್ಯವಿಲ್ಲದ ಕಾರಣ ತಂಡದ ಆಡಳಿತದ ನಿರ್ಧಾರವು ನಿರ್ಣಾಯಕವಾಗಿರುತ್ತದೆ.

ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವುದು ಭಾರತಕ್ಕೆ ಇನ್ನಷ್ಟು ಕಷ್ಟಕರವಾಗಿದೆ. ಆಸ್ಟ್ರೇಲಿಯಾದ ಪಿಚ್‌ನಲ್ಲಿ ಹೆಚ್ಚುವರಿ ವೇಗ ಮತ್ತು ಬೌನ್ಸ್ ದೊಡ್ಡ ಸವಾಲಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Saturday, June 25, 2022, 16:22 [IST]
Other articles published on Jun 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X