ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಪರ ಟಿ20ಐ ಇತಿಹಾಸ ನಿರ್ಮಿಸಿದ ವೇಗಿ ದೀಪಕ್ ಚಹಾರ್!

Sensational Deepak Chahar claims best-ever figures in T20I cricket

ನಾಗ್ಪುರ, ನವೆಂಬರ್ 11: ನಾಗ್ಪುರದಲ್ಲಿ ಭಾನುವಾರ (ನವೆಂಬರ್ 10) ನಡೆದ ಭಾರತ vs ಬಾಂಗ್ಲಾದೇಶ 3ನೇ ಟಿ20 ಪಂದ್ಯದಲ್ಲಿ ಭಾರತ ಬಹುತೇಕ ಸೋಲಿನಂಚಿನಲ್ಲಿತ್ತು. ಆದರೆ ಆಟ ಮುಕ್ತಾಯದ ಹಂತಕ್ಕೆ ಬರುವಾಗ ಫಲಿತಾಂಶ ರೋಚಕ ತಿರುವು ಪಡೆದುಕೊಂಡಿತು.

ಮಿಂಚು ಹರಿಸಿದ ಚಹಾರ್, ಬಾಂಗ್ಲಾ ಟೈಗರ್ಸ್ ಬೇಟೆಯಾಡಿದ ಬ್ಲೂ ಬಾಯ್ಸ್!ಮಿಂಚು ಹರಿಸಿದ ಚಹಾರ್, ಬಾಂಗ್ಲಾ ಟೈಗರ್ಸ್ ಬೇಟೆಯಾಡಿದ ಬ್ಲೂ ಬಾಯ್ಸ್!

ಬಾಂಗ್ಲಾ ಟೈಗರ್ಸ್ ಕಟ್ಟಿಹಾಕುವಲ್ಲಿ ಭಾರತದ ಬೌಲಿಂಗ್‌ನಲ್ಲಿ ವಿಭಾಗದಲ್ಲಿ ದೀಪಕ್ ಚಹಾರ್ ಮತ್ತು ಶಿವಂ ದೂಬೆ ನೆರವಾದರೆ, ಬ್ಯಾಟಿಂಗ್ ವಿಭಾಗದಲ್ಲಿ ಶ್ರೇಯಸ್ ಐಯ್ಯರ್, ಕನ್ನಡಿಗ ಕೆಎಲ್ ರಾಹುಲ್ ಬಲ ತುಂಬಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಚಹಾರ್ ಮ್ಯಾಜಿಕ್ ಬೌಲಿಂಗ್, ರೋಹಿತ್ ಶರ್ಮಾ ಪಡೆ ಬಾಂಗ್ಲಾ ವಿರುದ್ಧ ಪ್ರತಿಷ್ಠೆಯ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಸಚಿನ್ ತೆಂಡೂಲ್ಕರ್ 30 ವರ್ಷಗಳ ದಾಖಲೆ ಮುರಿದ 15ರ ಹರೆಯದ ಶೆಫಾಲಿ!ಸಚಿನ್ ತೆಂಡೂಲ್ಕರ್ 30 ವರ್ಷಗಳ ದಾಖಲೆ ಮುರಿದ 15ರ ಹರೆಯದ ಶೆಫಾಲಿ!

ಇದೇ ಪಂದ್ಯದಲ್ಲಿ ಗೆಲುವಿನ ಹೀರೋ ಚಹಾರ್, ಭಾರತ ಪರ ದಾಖಲೆಯೂ ನಿರ್ಮಿಸಿದ್ದಾರೆ.

ಹ್ಯಾಟ್ರಿಕ್ ಹೀರೋ ಚಹಾರ್

ಹ್ಯಾಟ್ರಿಕ್ ಹೀರೋ ಚಹಾರ್

ನಾಗ್ಪುರ ಪಂದ್ಯದಲ್ಲಿ ಚಹಾರ್, ಬಾಂಗ್ಲಾದ 6 ವಿಕೆಟ್‌ಗಳನ್ನು ಕೇವಲ 7 ರನ್‌ ನೀಡಿ ಕೆಡವಿದರು. ಇದರಲ್ಲಿ ಹ್ಯಾಟ್ರಿಕ್ ವಿಕೆಟ್ ಕೂಡ ಸೇರಿದೆ. 17.6ನೇ ಓವರ್‌ನಲ್ಲಿ ಶಫೀವುಲ್ಲ ಇಸ್ಲಾಮ್, 19.1ನೇ ಓವರ್ನಲ್ಲಿ ಮುಷ್ತಫಿಝುರ್ ರಹ್ಮಾನ್, 19.2 ಓವರ್‌ನಲ್ಲಿ ಸಮೀನುಲ್ಲ ಇಸ್ಲಾಮ್ ವಿಕೆಟ್‌ಗಳನ್ನು ಮುರಿದು ಚಹಾರ್ ಗಮನ ಸೆಳೆದಿದ್ದರು.

ಭಾರತಕ್ಕೆ ರೋಚಕ ಜಯ

ಭಾರತಕ್ಕೆ ರೋಚಕ ಜಯ

ಕೆಎಲ್ ರಾಹುಲ್ 52, ಶ್ರೇಯಸ್ ಐಯ್ಯರ್ 62 ರನ್‌ನೊಂದಿಗೆ ಭಾರತ ಎದುರಾಳಿಗೆ 175 ರನ್ ಗುರಿ ನೀಡಿತ್ತು. ಮೊಹಮ್ಮದ್ ನೈಮ್ ಸ್ಫೋಟಕ ಬ್ಯಾಟಿಂಗ್‌ನಿಂದ (81 ರನ್, 48 ಎಸೆತ) ಬಾಂಗ್ಲಾ ಗುರಿ ತಲುಪುವುದರಲ್ಲಿತ್ತಾದರೂ ಚಹಾರ್, ದೂಬೆ ಬ್ರೇಕ್ ಒತ್ತಿದ್ದರಿಂದ ನಾಗಿಣಿ ಪಡೆ 144 ರನ್‌ಗೆ ಶರಣಾಯಿತು.

ಬೆಸ್ಟ್ ಬೌಲಿಂಗ್ ಫಿಗರ್

ಬೆಸ್ಟ್ ಬೌಲಿಂಗ್ ಫಿಗರ್

2012ರಲ್ಲಿ ಶ್ರೀಲಂಕಾದ ಅಜಂತ ಮೆಂಡಿಸ್ 4 ಓವರ್‌ ಎಸೆದು, 8 ರನ್‌ ನೀಡಿ 6 ವಿಕೆಟ್ ಮುರಿದಿದ್ದರು. ಜಿಂಬಾಬ್ವೆ ವಿರುದ್ಧ ಮೆಂಡಿಸ್ ಈ ಸಾಧನೆ ಮಾಡಿದ್ದರು. ಆದರೆ ಬಾಂಗ್ಲಾ ಎದುರು ಕೇವಲ 3.2 ಓವರ್‌ ಎಸೆದ ಚಹಾರ್ 7 ರನ್‌ಗೆ 6 ವಿಕೆಟ್ ಪಡೆದು ಟಿ20ಐ ಕ್ರಿಕೆಟ್‌ನ ಬೆಸ್ಟ್ ಬೌಲಿಂಗ್ ಫಿಗರ್ ಇತಿಹಾಸ ಬರೆದಿದ್ದಾರೆ.

ಭಾರತದ ಹ್ಯಾಟ್ರಿಕ್ ಸಾಧಕರು

ಭಾರತದ ಹ್ಯಾಟ್ರಿಕ್ ಸಾಧಕರು

ಟೆಸ್ಟ್‌ನಲ್ಲಿ ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಏಕದಿನ ಕ್ರಿಕೆಟ್‌ನಲ್ಲಿ ಚೇತನ್ ಶರ್ಮಾ, ಕಪಿಲ್ ದೇವ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಮತ್ತು ಟಿ20ಐ ಕ್ರಿಕೆಟ್‌ನಲ್ಲಿ ದೀಪಕ್ ಚಹಾರ್ ಹ್ಯಾಟ್ರಿಕ್ ವಿಕೆಟ್ ಸಾಧನೆಗಾಗಿ ಭಾರತ ಪರ ಗುರುತಿಸಿಕೊಂಡಿದ್ದಾರೆ.

Story first published: Monday, November 11, 2019, 1:24 [IST]
Other articles published on Nov 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X