ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡರ್ಬನ್: ಶ್ರೀಲಂಕಾಕ್ಕೆ ಐತಿಹಾಸಿಕ ಜಯ ತಂದಿತ್ತ ಕುಸಲ್ ಪೆರೇರಾ

Sensational Kusal Perera inspires record-breaking Sri Lanka victory

ಡರ್ಬನ್, ಫೆಬ್ರವರಿ 17: ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವು ರೋಚಕ ಜಯ ದಾಖಲಿಸಿದೆ. 10ನೇ ವಿಕೆಟ್ ಗೆ ದಾಖಲೆಯ ಜೊತೆಯಾಟ ಕಂಡ ವಿಶ್ವ ಫರ್ನಾಂಡೋ ಹಾಗೂ ಕುಸಲ್ ಪೆರೆರಾ ತಮ್ಮ ತಂಡಕ್ಕೆ ಒಂದು ವಿಕೆಟ್ ಗಳ ತಂದು ಕೊಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ನೀಡಿದ್ದ 304 ರನ್ ಗೆಲುವಿನ ಗುರಿ ಬೆನ್ನು ಹತ್ತಿದ ಶ್ರೀಲಂಕಾ 69.4 ಓವರುಗಳಲ್ಲಿ 226 ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ಕುಸಲ್ ಪೆರೆರಾ ಅಜೇಯ 153 ರನ್ ಗಳಿಸಿ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.

ಒಂದೇ ಪಂದ್ಯದಲ್ಲಿ 2 ದ್ವಿಶತಕ ದಾಖಲೆ ಬರೆದ ಲಂಕಾದ ಏಂಜೆಲೋ ಪೆರೆರಾ! ಒಂದೇ ಪಂದ್ಯದಲ್ಲಿ 2 ದ್ವಿಶತಕ ದಾಖಲೆ ಬರೆದ ಲಂಕಾದ ಏಂಜೆಲೋ ಪೆರೆರಾ!

ಅಂತಿಮ ವಿಕೆಟ್ ಜೊತೆಯಾಟದಲ್ಲಿ ವಿಶ್ವ ಫೆರ್ನಾಂಡೋ(ಅಜೇಯ 6) ಅವರೊಂದಿಗೆ 78 ರನ್ ಜೊತೆಯಾಟದಲ್ಲಿ ಸಾಧಿಸಿದರು. ವಿಶ್ವ ಫರ್ನಾಂಡೋ 27 ಎಸೆತ ಎದುರಿಸಿ 6 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಬ್ಯಾಟಿಂಗ್ ಸ್ಟ್ರೈಕ್ ಹೆಚ್ಚು ಹೊತ್ತು ಉಳಿಸಿಕೊಂಡ ಕುಸಲ್ ಪೆರೆರಾ ಅವರ ಆಟಕ್ಕೆ ವಿಶ್ವದ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 59.24 ಓವರ್ ಗಳಲ್ಲಿ 235 ರನ್ ಗಳಿಸಿತ್ತು. ಶ್ರೀಲಂಕಾ ಮೊದಲ ಇನಿಂಗ್ಸ್ ನಲ್ಲಿ 59.2 ಓವರ್ ಗಳಲ್ಲಿ 191 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ 2ನೇ ಇನಿಂಗ್ಸ್ ನಲ್ಲಿ 79.1 ಓವರ್ ಗಳಲ್ಲಿ 259 ರನ್ ಗಳಿಸಿ 304 ರನ್ ಗೆಲುವಿನ ಗುರಿ ನೀಡಿತ್ತು. ಶ್ರೀಲಂಕಾ ಎರಡನೇ ಇನಿಂಗ್ಸ್ ನಲ್ಲಿ 85.3 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 304 ರನ್ ಗಳಿಸಿ ಅದ್ಭುತ ಜಯ ದಾಖಲಿಸಿದೆ.

ಇದಕ್ಕೂ ಮುನ್ನ ಪಾಕಿಸ್ತಾನದ ಇನ್ಜಾಮಾಮ್ ಉಲ್ ಹಕ್ ಹಾಗೂ ಮುಷ್ತಾಕ್ ಅಹ್ಮದ್ ಅವರು 10ನೇ ವಿಕೆಟ್ ಗೆ ಅತಿ ಹೆಚ್ಚು ರನ್ ಜೊತೆಯಾಟ ಸಾಧಿಸಿದ ದಾಖಲೆ ಹೊಂದಿದ್ದರು. ಕರಾಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 57ರನ್ ಜೊತೆಯಾಟ ಕಂಡಿದ್ದರು.

Story first published: Sunday, February 17, 2019, 17:46 [IST]
Other articles published on Feb 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X