ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್ ವಿರುದ್ಧ ಭಾರತ ಏಕದಿನ ಸರಣಿ ಸೋತಿದ್ದು ಒಳ್ಳೇದೆ ಆಯ್ತು: ದ್ರಾವಿಡ್

Series defeat against Australia warning sign for India ahead of the World Cup: Dravid

ಬೆಂಗಳೂರು, ಮಾರ್ಚ್ 20: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಮುನ್ನಡೆಯಲ್ಲಿದ್ದ ಭಾರತ 2-3ರಿಂದ ಐದು ಪಂದ್ಯಗಳ ಸರಣಿಯನ್ನು ಸೋತಿತ್ತು. ಇದು 2019ರ ಐಸಿಸಿ ವಿಶ್ವಕಪ್‌ ಗೆಲುವಿನ ನೆಲೆಯಲ್ಲಿ ವಿರಾಟ್ ಕೊಹ್ಲಿ ಬಳಗಕ್ಕೆ ಎಚ್ಚರಿಕೆ ಗಂಟೆ ಎಂದು ಟೀಮ್ ಇಂಡಿಯಾ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಕೊಹ್ಲಿ ನಾಯಕತ್ವದ ಆರ್‌ಸಿಬಿಗೆ ಭೀತಿಯೊಡ್ಡುವಂತಿದೆ ಧೋನಿ ಅಂಕಿ-ಅಂಶಗಳು!ಕೊಹ್ಲಿ ನಾಯಕತ್ವದ ಆರ್‌ಸಿಬಿಗೆ ಭೀತಿಯೊಡ್ಡುವಂತಿದೆ ಧೋನಿ ಅಂಕಿ-ಅಂಶಗಳು!

ತವರಿನಲ್ಲಿ ನಡೆದಿದ್ದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಭಾರತ ಮೊದಲೆರಡು ಪಂದ್ಯ ಗೆದ್ದು ಸರಣಿ ಗೆಲುವಿನ ಮುನ್ಸೂಚನೆ ನೀಡಿತ್ತು. ಆದರೆ ಅನಂತರದ ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತಾ ಸಾಗಿದ ಪ್ರವಾಸಿ ಆಸ್ಟ್ರೇಲಿಯಾ ಸರಣಿಯನ್ನು 3-2ರಿಂದ ಗೆದ್ದು ಭಾರತಕ್ಕೆ ಆಘಾತ ನೀಡಿತ್ತು.

ಭಾರತದ ಈ ಸೋಲು ಮೇ 30ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ತಂಡಕ್ಕೆ ಎಚ್ಚರಿಕೆ ನೀಡಿದಂತಿದೆ ಎಂದು ದ್ರಾವಿಡ್ ಅಭಿಪ್ರಾಯಿಸಿದ್ದಾರೆ. 'ನಾವು ವಿಶ್ವಕಪ್‌ನಲ್ಲಿ ಪಾಲ್ಗೊಂಡು ಸುಲಭವಾಗಿ ಗೆದ್ದು ಬರುತ್ತೇವೆ ಎಂಬ ಕಲ್ಪನೆಯಿರುತ್ತದೆ. ಆದರೆ ಇಂಥ ಸೋಲು ನಮ್ಮನ್ನು ಎಚ್ಚರಿಸುತ್ತವೆ' ಎಂದು ರಾಹುಲ್ ತಿಳಿಸಿದರು.

ವಿರಾಟ್ ಕೊಹ್ಲಿಯ ಆರ್‌ಸಿಬಿ ನಾಯಕತ್ವವನ್ನು ಅಣಕಿಸಿದ ಗೌತಮ್ ಗಂಭೀರ್!ವಿರಾಟ್ ಕೊಹ್ಲಿಯ ಆರ್‌ಸಿಬಿ ನಾಯಕತ್ವವನ್ನು ಅಣಕಿಸಿದ ಗೌತಮ್ ಗಂಭೀರ್!

'ಹಾಗೆ ನೋಡಿದರೆ ಆಸೀಸ್ ವಿರುದ್ಧದ ಸರಣಿ ಸೋಲು ಒಂದರ್ಥದಲ್ಲಿ ಒಳ್ಳೆಯದೆ ಆಯ್ತು. ಯಾಕೆಂದರೆ ಆ (ಆಸ್ಟ್ರೇಲಿಯಾ ವಿರುದ್ಧದ) ಸೋಲು ನಾವು ವಿಶ್ವಕಪ್‌ನಲ್ಲಿ ತುಂಬಾ ತುಂಬಾ ಚೆನ್ನಾಗಿ ಆಡಬೇಕು ಅನ್ನೋದನ್ನು ನಮಗೆ ಎಚ್ಚರಿಸುತ್ತದೆ, ನೆನಪಿಸುತ್ತದೆ' ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ಜೊತೆ ಮಾತನಾಡುತ್ತ ದ್ರಾವಿಡ್ ವಿವರಿಸಿದರು.

Story first published: Wednesday, March 20, 2019, 17:33 [IST]
Other articles published on Mar 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X