ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೋವಾ ತಂಡಕ್ಕೆ ಅಜರುದ್ದೀನ್ ಮಗನ ಆಯ್ಕೆ ಏಕೆ?

By Mahesh
Shadab Jakati hits out at Mohammed Azharuddin sons selection in Goa team

ಹೈದರಾಬಾದ್, ಆಗಸ್ಟ್ 27: ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಮಗನನ್ನು ಗೋವಾ ತಂಡಕ್ಕೆ ಆಯ್ಕೆ ಮಾಡಿರುವುದರ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾಜಿ ಆಟಗಾರ ಶಬಾದ್ ಜಕಾತಿ ಅವರು ಪ್ರಶ್ನಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಲಯನ್ಸ್ ಪರ ಕೂಡಾ ಆಡಿದ್ದ ಶಬಾದ್ ಜಕಾತಿ ಅವರು, 28 ವರ್ಷ ವಯಸ್ಸಿನ ಅಸಾದುದ್ದೀನ್ ಅವರ ಆಯ್ಕೆಯನ್ನು ಪ್ರಶ್ನಿಸಿದ್ದಾರೆ.

ಇಲ್ಲಿ ತನಕ ಒಂದೇ ಒಂದು ಪಂದ್ಯವಾಡದಿರುವ ಅಸಾದುದ್ದೀನ್ ಅವರಿಗೆ ರಣಜಿ ಟ್ರೋಫಿಯಲ್ಲಿ ಆಡಲು ಅವಕಾಶ ಸಿಕ್ಕಿದ್ದು ಹೇಗೆ?, ಅಪ್ಪ ಅಜರುದ್ದೀನ್ ಅವರ ನಾಮಬಲದಿಂಡ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ರವಿಶಾಸ್ತ್ರಿ ವಿರುದ್ಧ ಗುಡುಗಿದ ಮಾಜಿ ಕ್ರಿಕೆಟಿಗ ಅಜರುದ್ದೀನ್ ರವಿಶಾಸ್ತ್ರಿ ವಿರುದ್ಧ ಗುಡುಗಿದ ಮಾಜಿ ಕ್ರಿಕೆಟಿಗ ಅಜರುದ್ದೀನ್

ರಣಜಿ ಪಂದ್ಯ ಹಾಗಿರಲಿ, ಪ್ರಥಮ ದರ್ಜೆ ಪಂದ್ಯವನ್ನೂ ಆಡಿಲ್ಲ. 2009ರಲ್ಲಿ ಕೊನೆಬಾರಿ ಪಂದ್ಯವಾಡಿದ್ದಾರೆ ಎಂದು ತಿಳಿದು ಬಂದಿದೆ. ಅದು ಕೂಡಾ ಹೈದರಾಬಾದ್ ಕೋಲ್ಟ್ಸ್ ತಂಡದ ಆಹ್ವಾನಿತ ಟೂರ್ನಮೆಂಟ್ ಆಗಿತ್ತು. ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಯತ್ನಿಸಿ, ರಾಜ್ಯ ತಂಡ ಸೇರಲು ಸಾಧ್ಯವಾಗದ ಕಾರಣ, ಈಗ ಗೋವಾ ತಂಡ ಸೇರಿದ್ದಾರೆ ಎಂದು ಜಕಾತಿ ವಾಗ್ದಾಳಿ ನಡೆಸಿದ್ದಾರೆ.

ಗೋವಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೂರಜ್ ಲೋಟ್ಲಿಕರ್ ಅವರು, ನನಗೆ ನಿವೃತ್ತಿ ಹೊಂದುವಂತೆ ಒತ್ತಡ ಹೇರಿದ್ದಲ್ಲದೆ, ಮುಂದಿನ ಐಪಿಎಲ್ ನಲ್ಲಿ ಆಡದಂತೆ ನೋಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಶಬಾದ್ ಜಕಾತಿ, ಸ್ವಪ್ನಿಲ್ ಆಸ್ನೋಟಿಕರ್ ಅವರನ್ನು ಪ್ರೀ ಸೀಸನ್ ಕ್ಯಾಂಪಿನಿಂದ ಹೊರಗಿಡಲಾಗಿದೆ. ಯುವ ಆಟಗಾರರಿಗೆ ಅವಕಾಶ ಕೊಡಿ ಎಂದು ಪರೋಕ್ಷವಾಗಿ ಸೂಚಿಸಲಾಗಿದೆ. ಇಬ್ಬರು ಕೂಡಾ ಐಪಿಎಲ್ ಮೂಲಕ ಬೆಳಕಿಗೆ ಬಂದ ಪ್ರತಿಭೆಗಳು.

ಅಸಾದುದ್ದೀನ್ ಅಲ್ಲದೆ ಕರ್ನಾಟಕದಿಂದ ವಲಸೆ ಹೋಗಿರುವ ಅಮಿತ್ ವರ್ಮಾ ಅವರ ಆಯ್ಕೆ ಬಗ್ಗೆ ಕೂಡಾ ಜಕಾತಿ ಅವರು ಪ್ರಶ್ನಿಸಿದ್ದಾರೆ. ಕರ್ನಾಟಕದಿಂದ ಅಸ್ಸಾಂಗೆ ವಲಸೆ ಹೋಗಿದ್ದ ಅಮಿತ್ ಅವರು 66 ಪ್ರಥಮ ದರ್ಜೆ ಪಂದ್ಯಗಳಿಂದ 3815ರನ್ ಹಾಗೂ 60 ವಿಕೆಟ್ ಗಳಿಸಿದ್ದಾರೆ.

ಜಕಾತಿ ಅಲ್ಲದೆ ಅಭಿಶೇಕ್ ನಾಯರ್, ಪಾರಸ್ ಡೋಗ್ರಾ, ರಜತ್ ಭಾಟಿಯಾ, ಪಂಕಜ್ ಸಿಂಗ್ ಅವರು ತಮ್ಮ ತವರು ರಾಜ್ಯ ತೊರೆದು ಬೇರೆ ತಂಡ ಸೇರಿದ್ದಾರೆ.

Story first published: Thursday, October 25, 2018, 15:39 [IST]
Other articles published on Oct 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X