ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈಕೆ ಮಹಿಳಾ ಟಿ20ಯ ದೃಷ್ಟಿಕೋನವನ್ನೇ ಬದಲಾಯಿಸಿದ ಆಟಗಾರ್ತಿ: ಸಂಜಯ್ ಬಂಗಾರ್

Shafali Verma Has Provided Fresh Perspective To How Women’s T20 Can Be Played: Sanjay Bangar

ಮಹಿಳಾ ಟಿ20 ತಂಡದಲ್ಲಿ ಸದ್ಯ ಮಿಂಚು ಹರಿಸುತ್ತಿರುವ ಆಟಗಾರ್ತಿ ಶೆಫಾಲಿ ವರ್ಮ. ಟೀಮ್ ಇಂಡಿಯಾ ಫೈನಲ್ ಹಂತಕ್ಕೇರಲು ಶೆಫಾಲಿ ಅದ್ಭುತ ಕೊಡುಗೆಯನ್ನು ನೀಡಿದ್ದಾರೆ. ಶೆಫಾಲಿ ವರ್ಮ ಆಟವನ್ನು ಟೀಮ್ ಇಂಡಿಯಾದ ದಿಗ್ಗಜ ಆಟಗಾರರು ಕೊಂಡಾಡಿದ್ದಾರೆ. ಇದೀಗ ಮತ್ತೋರ್ವ ಮಾಜಿ ಆಟಗಾರ ಶೆಫಾಲಿ ವರ್ಮ ಆಟದ ಬಗ್ಗೆ ಮನಸೋತಿದ್ದಾರೆ.

ಭಾರತದ ಮಾಜಿ ಕೋಚ್ ಹಾಗೂ ಮಾಜಿ ಆಟಗಾರ ಸಂಜಯ್ ಬಂಗಾರ್ ಶಫಾಲಿ ಆಟದ ವೈಖರಿಯನ್ನು ಕೊಂಡಾಡಿದ್ದಾರೆ. ಮಾತ್ರವಲ್ಲ. ಶಫಾಲಿ ವರ್ಮ ಮಹಿಳಾ ಟಿ20 ಆಟದ ದೃಷ್ಟಿಕೋನವನ್ನೇ ಬದಲಾಯಿಸಿದ ಆಟಗಾರ್ತಿ ಎಂದು ಹೇಳಿದ್ದಾರೆ.

ಮಹಿಳಾ ಟಿ20 ವಿಶ್ವಕಪ್ ಫೈನಲ್: ಗೆದ್ದೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಕನ್ನಡತಿ ವೇದಾಮಹಿಳಾ ಟಿ20 ವಿಶ್ವಕಪ್ ಫೈನಲ್: ಗೆದ್ದೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಕನ್ನಡತಿ ವೇದಾ

ಆರಂಭಿಕ ಆಟಗಾರ್ತಿ ಯಾಗಿರುವ ಶಫಾಲಿ ವರ್ಮ ಮೊದಲ ಎಸೆತದಿಂದಲೇ ಸ್ಪೋಟಕ ಆಟವನ್ನು ಪ್ರದರ್ಶಿಸುವ ಸಾಮರ್ಥ್ಯ ಹೊಂದಿದ್ದಾರೆ. ವೇಗದ ಬೌಲರ್‌ಗಳನ್ನು ದಂಡಿಸುವ ಸಾಮರ್ಥ್ಯ ಹೊಂದಿರುವ ಶಫಾಲಿ ಬೌಲರ್‌ಗಳನ್ನು ಕಂಗೆಡಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ.

ಕ್ರಿಕೆಟ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಆಫ್‌ಸೈಡ್‌ನತ್ತ ಸರಾಗವಾಗಿ ಬಾರಿಸಿ ರನ್‌ಗಳಿಸಿಲು ಶಕ್ತನಾದರೆ ಆ ಬ್ಯಾಟರ್ ಅಂಗಳದ ಎಲ್ಲಾ ದಿಕ್ಕಿನತ್ತಲೂ ಚೆಂಡನ್ನು ಬಾರಿಸಲು ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅರ್ಥ. ಶೆಫಾಲಿ ಆಟದ ಶೈಲಿಯ ವೈಖರಿಯಿಂದ ಆಕೆಯ ಸಾಮರ್ಥ್ಯ ಅರಿವಿಗೆ ಬರುತ್ತದೆ ಎಂದು ಬಂಗಾರ್ ಹೇಳಿದ್ದಾರೆ.

ಶಫಾಲಿ ಆಟದ ಶೈಲಿ ಮಹಿಳಾ ಕ್ರಿಕೆಟ್‌ಗೆ ಹೊಸ ದೃಷ್ಟಿಕೋನವನ್ನು ನೀಡಿದೆ, ಇದು ಮಹಿಳಾ ಟಿ20 ಕ್ರಿಕೆಟ್ ಹೀಗೂ ಆಡಬಹುದು ಎಂದು ತೋರಿಸಿದಂತಿದೆ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.

Story first published: Saturday, March 7, 2020, 12:23 [IST]
Other articles published on Mar 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X