ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಟಿ20ಐ ನಂ.1 Rankನಿಂದ ಕೆಳಗಿಳಿದ 16ರ ಪೋರಿ ಶೆಫಾಲಿ ವರ್ಮಾ

Shafali Verma loses top spot in ICC T20I rankings, slips to third

ನವದೆಹಲಿ, ಮಾರ್ಚ್ 9: ಭಾರತ ಮಹಿಳಾ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಶೆಫಾಲಿ ವರ್ಮಾ, ಐಸಿಸಿ ಟಿ20ಐ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಿಂದ ಕೆಳಗಿಳಿದಿದ್ದಾರೆ. ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತ ಬೆನ್ನಲ್ಲೇ ಶೆಫಾಲಿ ರ್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ. ಮಹಿಳಾ ಟಿ20 ವಿಶ್ವಕಪ್ ಕೈತಪ್ಪಿದ್ದಕ್ಕಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದ ಯುವ ಆಟಗಾರ್ತಿಗೆ ಮತ್ತೊಂದು ಆಘಾತವಾಗಿದೆ.

'ಒಂದಿನ ನೀವು ಟ್ರೋಫಿ ಗೆದ್ದೇ ಗೆಲ್ಲುತ್ತೀರಿ': ಭಾರತದ ಬೆನ್ನು ತಟ್ಟಿದ ದಿಗ್ಗಜರು!'ಒಂದಿನ ನೀವು ಟ್ರೋಫಿ ಗೆದ್ದೇ ಗೆಲ್ಲುತ್ತೀರಿ': ಭಾರತದ ಬೆನ್ನು ತಟ್ಟಿದ ದಿಗ್ಗಜರು!

ಈಗಿನ್ನೂ ಬರೀ 16ರ ಹರೆಯದವರಾಗಿರುವ ಶೆಫಾಲಿ ವರ್ಮಾ, ಆಸ್ಟ್ರೇಲಿಯಾದಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿಯೇ ಶೆಫಾಲಿ ಬರೋಬ್ಬರಿ 19 ಸ್ಥಾನಗಳ ಜಿಗಿತದೊಂದಿಗೆ ನಂ.1 ಸ್ಥಾನ ಆವರಿಸಿಕೊಂಡಿದ್ದರು.

ಧೋನಿ ಭವಿಷ್ಯದ ಬಗ್ಗೆ ಬಾಯ್ತೆರೆದ ಕನ್ನಡಿಗ ಜೋಶಿಯಿರುವ ಆಯ್ಕೆಸಮಿತಿ!ಧೋನಿ ಭವಿಷ್ಯದ ಬಗ್ಗೆ ಬಾಯ್ತೆರೆದ ಕನ್ನಡಿಗ ಜೋಶಿಯಿರುವ ಆಯ್ಕೆಸಮಿತಿ!

ಆದರೆ ಸದ್ಯ ಐಸಿಸಿ ಟಿ20ಐ ರ್ಯಾಂಕಿಂಗ್‌ನಲ್ಲಿ ಶೆಫಾಲಿ ಕೆಳ ಕುಸಿದಿದ್ದಾರೆ. ಸದ್ಯದ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಭಾರತದ ಮೂವರು ಆಟಗಾರ್ತಿಯರು 10ರೊಳಗೆ ಸ್ಥಾನ ಪಡೆದಿದ್ದಾರೆ.

ಅಗ್ರ ಸ್ಥಾನದಲ್ಲಿ ಬೆತ್ ಮೂನಿ

ಅಗ್ರ ಸ್ಥಾನದಲ್ಲಿ ಬೆತ್ ಮೂನಿ

ಐಸಿಸಿ ಸೋಮವಾರ (ಮಾರ್ಚ್ 9) ಪ್ರಕಟಿಸಿರುವ ನೂತನ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾ ಆಟಗಾರ್ತಿ ಬೆತ್ ಮೂನಿ ನಂ.1 ಸ್ಥಾನ ಪಡೆದುಕೊಂಡಿದ್ದಾರೆ. ನೂಜಿಲೆಂಡ್‌ನ ಸೂಝಿ ಬೇಟ್ಸ್ ದ್ವಿತೀಯ ರ್ಯಾಂಕ್‌ನಲ್ಲಿದ್ದರೆ, ಭಾರತದ ಪೋರಿ ಶೆಫಾಲಿ 3ನೇ ಶ್ರೇಯಾಂಕದಲ್ಲಿದ್ದಾರೆ.

ಶೆಫಾಲಿಗೆ ಕೊನೇ ಆಟ ಮುಳುವಾಯ್ತು

ಶೆಫಾಲಿಗೆ ಕೊನೇ ಆಟ ಮುಳುವಾಯ್ತು

ಮಹಿಳಾ ಟಿ20 ವಿಶ್ವಕಪ್‌ನಲ್ಲಿ 259 ರನ್ ಗಳಿಸಿದ್ದ ಬೆತ್ ಮೂನಿ, ಅತ್ಯಧಿಕ ರನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ವಿಶ್ವಕಪ್‌ನಲ್ಲಿನ ಅದ್ಭುತ ಪ್ರದರ್ಶನವೇ ಮೂನಿಯನ್ನು ಅಗ್ರಸ್ಥಾನಕ್ಕೇರಿಸಿದೆ. ವಿಶ್ವಕಪ್‌ ಅತ್ಯಧಿಕ ರನ್ ಪಟ್ಟಿಯಲ್ಲಿ ಶೆಫಾಲಿ 163 ರನ್‌ನೊಂದಿಗೆ 5ನೇ ಸ್ಥಾನ ಪಡೆದುಕೊಂಡಿದ್ದರು. ಶೆಫಾಲಿ ಫೈನಲ್ ಪಂದ್ಯದಲ್ಲೇ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದೇ ಒಂದರ್ಥದಲ್ಲಿ ಕುಸಿತಕ್ಕೆ ಕಾರಣ.

10 ಸ್ಥಾನಗಳಲ್ಲಿ ಮೂವರು ಭಾರತೀಯರು

10 ಸ್ಥಾನಗಳಲ್ಲಿ ಮೂವರು ಭಾರತೀಯರು

ಮಹಿಳಾ ಟಿ20 ರ್ಯಾಂಕಿಂಗ್‌ನ ಮೊದಲ 10 ಸ್ಥಾನಗಳಲ್ಲಿ 1. ಬೆತ್ ಮೂನಿ (ಆಸ್ಟ್ರೇಲಿಯಾ, 762 ಪಾಯಿಂಟ್ಸ್), 2. ಸೂಝಿ ಬೇಟ್ಸ್ (ನ್ಯೂಜಿಲೆಂಡ್, 750), 3. ಶೆಫಾಲಿ ವರ್ಮಾ (744), 4. ಸೋಫಿ ಡಿವೈನ್ (ನ್ಯೂಜಿಲೆಂಡ್, 742), 5. ಅಲಿಸಾ ಹೀಲಿ (ಆಸ್ಟ್ರೇಲಿಯಾ, 714), 6. ಮೆಗ್ ಲ್ಯಾನಿಂಗ್ (ಆಸೀಸ್, 712), 7. ಸ್ಮೃತಿ ಮಂಧಾನ (ಭಾರತ, 694), 8. ಸ್ಟಫಾನಿ ಟೇಲರ್ (ವೆಸ್ಟ್ ಇಂಡೀಸ್, 661), 9. ಜೆಮಿಮಾ ರೋಡ್ರಿಗಸ್ (ಭಾರತ, 643), 10. ನಟಾಲಿಯಾ ಸೈವರ್ (ಇಂಗ್ಲೆಂಡ್, 636) ಇದ್ದಾರೆ.

ಬೌಲಿಂಗ್‌ನಲ್ಲಿ ಸೋಫಿ ಮುಂದು

ಬೌಲಿಂಗ್‌ನಲ್ಲಿ ಸೋಫಿ ಮುಂದು

ಮಹಿಳಾ ಟಿ20ಐ ಬೌಲಿಂಗ್‌ ರ್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್, ಆಸ್ಟ್ರೇಲಿಯಾದ ಮೇಗನ್ ಶಟ್, ಬಾಂಗ್ಲಾದ ಶಬ್ನಿಮ್ ಇಸ್ಮಾಯಿಲ್, ನ್ಯೂಜಿಲಡಂಡ್‌ನ ಅಮೆಲಿಯಾ ಕೆರ್, ಆಸ್ಟ್ರೇಲಿಯಾದ ಜೆಸ್ ಜೊನಾಸ್ಸೆನ್ ಕ್ರಮವಾಗಿ ಮೊದಲ ಐದು ಸ್ಥಾನ ಪಡೆದುಕೊಂಡಿದ್ದಾರೆ. ಭಾರತದ ದೀಪ್ತಿ ಶರ್ಮಾ, ರಾಧಾ ಯಾದವ್, ಪೂನಂ ಯಾದವ್ 6,7,8ರಲ್ಲಿದ್ದಾರೆ.

ಭಾರತಕ್ಕೆ ನಾಲ್ಕನೇ ಸ್ಥಾನ

ಭಾರತಕ್ಕೆ ನಾಲ್ಕನೇ ಸ್ಥಾನ

ಇನ್ನು ಟಿ20ಐ ಆಲ್ ರೌಂಡರ್‌ಗಳಲ್ಲಿ ಸೋಫಿ ಡಿವೈನ್ (ನ್ಯೂಜಿಲೆಂಡ್), ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ), ನಟಾಲಿಯಾ ಸೈವರ್ (ಇಂಗ್ಲೆಂಡ್), ಹೇಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್), ದೀಪ್ತೀ ಶರ್ಮಾ (ಭಾರತ) ಆರಂಭಿಕ ಐದು ಸ್ಥಾನ ಪಡೆದಿದ್ದಾರೆ. ತಂಡಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಭಾರತ ಮತ್ತು ಸೌತ್ ಆಫ್ರಿಕಾ ಆರಂಭಿಕ ಐದು ಸ್ಥಾನಗಳನ್ನು ಪಡೆದುಕೊಂಡಿವೆ.

Story first published: Monday, March 9, 2020, 17:36 [IST]
Other articles published on Mar 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X