ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬರ್ಮಿಂಗ್‌ಹ್ಯಾಮ್ ಫಿಯೋನಿಕ್ಸ್‌ಗೆ ಸೋಫಿ ಡಿವೈನ್ ಬದಲು ಸಹಿ ಹಾಕಿದ ಶೆಫಾಲಿ ವರ್ಮಾ

Shafali Verma signed as Sophie Devines replacement by Birmingham Phoenix in The Hundred

ನವದೆಹಲಿ: ಭಾರತದ ಸ್ಟಾರ್ ಮಹಿಳಾ ಕ್ರಿಕೆಟರ್ ಶೆಫಾಲಿ ವರ್ಮಾ ದ ಹಂಡ್ರೆಡ್ ವಿಮ್ಸನ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬರ್ಮಿಂಗ್‌ಹ್ಯಾಮ್ ಫಿಯೋನಿಕ್ಸ್ ತಂಡದಲ್ಲಿ ಸೋಫಿ ಡಿವೈನ್ ಬದಲಿಗೆ ಶೆಫಾಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಗುರುವಾರ (ಜೂನ್ 10) ದ ಹಂಡ್ರೆಡ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ವಿದೇಶಿ ಆಟಗಾರ್ತಿಯರ ಪಟ್ಟಿ ಪ್ರಕಟವಾಗಿದ್ದು, ಇದರಲ್ಲಿ ಶೆಫಾಲಿ ಕೂಡ ಇದ್ದಾರೆ.

ಎಂಎಸ್ ಧೋನಿಯಿಂದ ಭಾರತದ ನಾಯಕತ್ವ ಸಿಗಲಿಲ್ಲ: ಯುವರಾಜ್ ಸಿಂಗ್ಎಂಎಸ್ ಧೋನಿಯಿಂದ ಭಾರತದ ನಾಯಕತ್ವ ಸಿಗಲಿಲ್ಲ: ಯುವರಾಜ್ ಸಿಂಗ್

ದ ಹಂಡ್ರೆಡ್ ಅನ್ನೋದು 100 ಎಸೆತಗಳ ಟೂರ್ನಿ. ಲಂಡನ್‌ನ ಕಿಯಾ ಓವಲ್‌ನಲ್ಲಿ ಜುಲೈ 21ರಿಂದ ಟೂರ್ನಿ ಆರಂಭಗೊಳ್ಳಲಿದೆ. ಭಾರತದ ಸೂಪರ್‌ ಸ್ಟಾರ್ ಆಟಗಾರ್ತಿಯರಾದ ಹರ್ಮನ್ ಪ್ರೀತ್‌ ಕೌರ್, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್ ಮತ್ತು ಶೆಫಾಲಿ ವರ್ಮಾ ಬೇರೆ ಬೇರೆ ತಂಡಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೋವಿಡ್-19 ಕಾರಣದಿಂದಾಗಿ ಪ್ರಯಾಣ ಸಮಸ್ಯೆ ಇರುವುದರಿಂದ ನ್ಯೂಜಿಲೆಂಡ್‌ ರಾಷ್ಟ್ರೀಯ ತಂಡ ಕ್ರಿಕೆಟರ್ ಮತ್ತು ಫೀಲ್ಡ್ ಹಾಕಿ ಪ್ಲೇಯರ್ ಆಗಿರುವ ಸೋಫಿ ಡಿವೈನ್ ದ ಹಂಡ್ರೆಡ್‌ನಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಪಂದ್ಯಗಳತ್ತ ಗಮನ ಕೊಡುವ ಉದ್ದೇಶದಿಂದಲೂ ಸೋಫಿ ಚುಟುಕು ಟೂರ್ನಿಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

'ಆ್ಯಷಸ್ ಸರಣಿಗಿಂತ ಭಾರತ-ಪಾಕಿಸ್ತಾನ ಸರಣಿಗೆ ಹೆಚ್ಚು ಅಭಿಮಾನಿಗಳಿದ್ದಾರೆ''ಆ್ಯಷಸ್ ಸರಣಿಗಿಂತ ಭಾರತ-ಪಾಕಿಸ್ತಾನ ಸರಣಿಗೆ ಹೆಚ್ಚು ಅಭಿಮಾನಿಗಳಿದ್ದಾರೆ'

ಆಸ್ಟ್ರೇಲಿಯಾದ ಮಾಜಿ ಕೋಚ್ ಬೆನ್ ಸಾಯರ್ ಅವರು ಬರ್ಮಿಂಗ್‌ಹ್ಯಾಮ್‌ ಫಿಯೋನಿಕ್ಸ್ ತಂಡಕ್ಕೆ ಮುಖ್ಯಕೋಚ್ ಆಗಿದ್ದಾರೆ. 'ವಿಶ್ವ ನಂ.1 ಬ್ಯಾಟರ್ ಸೋಫಿ ಆಡುತ್ತಿಲ್ಲ ಅನ್ನೋದು ಸಹಜವಾಗೇ ನಿರಾಶೆ ಮೂಡಿಸಿದೆ. ಆದರೆ ಶೆಫಾಲಿ ತಂಡ ಸೇರಿಕೊಂಡಿದ್ದು ತಂಡಕ್ಕೆ ಬೂಸ್ಟ್ ನೀಡಿದೆ. ಟೂರ್ನಿಯ ತಯಾರಿಯತ್ತ ನಾವು ಎದುರು ನೋಡುತ್ತಿದ್ದೇವೆ,' ಎಂದು ಸಾಯರ್ ಹೇಳಿದ್ದಾರೆ.

Story first published: Thursday, June 10, 2021, 19:51 [IST]
Other articles published on Jun 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X