ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶೆಫಾಲಿ ಸ್ಫೋಟಕ ಅರ್ಧ ಶತಕ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯ

Shafali Verma slam 30-ball 60, India Women beat South Africa women by 9-wicket

ಲಕ್ನೋ: ಲಕ್ನೋವಿನ ಭಾರತ್ ರತ್ನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ನಡೆದ ಭಾರತದ ವನಿತೆಯರು ಮತ್ತು ದಕ್ಷಿಣ ಆಫ್ರಿಕಾ ನಡುವಿನ 3ನೇ ಟಿ20ಐ ಪಂದ್ಯದಲ್ಲಿ ಭಾರತದ ಮಹಿಳಾ ತಂಡ 9 ವಿಕೆಟ್ ಭರ್ಜರಿ ಜಯ ಗಳಿಸಿದೆ. ಯುವ ಬ್ಯಾಟ್ಸ್‌ಮನ್‌ ಶೆಫಾಲಿ ವರ್ಮಾ ಅವರ ಸ್ಫೋಟಕ ಅರ್ಧ ಶತಕದೊಂದಿಗೆ ಭಾರತ ಪಂದ್ಯ ಗೆದ್ದಿದೆ, ಆದರೆ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-1ರ ಸೋಲನುಭವಿಸಿದೆ.

ಪಂದ್ಯದ ವೇಳೆ ಕಣ್ಣೀರು ಹಾಕಿದ ಕೃನಾಲ್ ಪಾಂಡ್ಯ, ಕಾರಣ ಏನ್ ಗೊತ್ತಾ?!ಪಂದ್ಯದ ವೇಳೆ ಕಣ್ಣೀರು ಹಾಕಿದ ಕೃನಾಲ್ ಪಾಂಡ್ಯ, ಕಾರಣ ಏನ್ ಗೊತ್ತಾ?!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ಮಹಿಳಾ ತಂಡ, ಲಿಜೆಲ್ ಲೀ 12, ಫಾಯೆ ಟುನಿಕ್ಲಿಫ್ 18, ನಾಯಕಿ ಸುನೆ ಲೂಸ್ 28, ಲಾರಾ ಗುಡಾಲ್ 25, ಸಿನಾಲೋ ಜಫ್ತಾ 16 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 112 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಭಾರತದ ಮಹಿಳಾ ತಂಡ, ಶೆಫಾಲಿ ವರ್ಮಾ 60 (30), ನಾಯಕಿ ಸ್ಮೃತಿ ಮಂಧಾನ ಅಜೇಯ 48 (28), ಹರ್ಲಿನ್ ಡಿಯೋಲ್ ಅಜೇಯ 4 ರನ್‌ನೊಂದಿಗೆ 11 ಓವರ್‌ನಲ್ಲಿ 1 ವಿಕೆಟ್ ಕಳೆದು 114 ರನ್ ಗಳಿಸಿತು. ರಾಜೇಶ್ವರಿ ಗಾಯಕ್ವಾಡ್ ಪಂದ್ಯಶ್ರೇಷ್ಠೆ ಎನಿಸಿದರೆ, ಶೆಫಾಲಿ ವರ್ಮಾ ಸರಣಿ ಶ್ರೇಷ್ಠೆ ಎನಿಸಿದರು.

ಪಾದಾರ್ಪಣೆ ಪಂದ್ಯದಲ್ಲೇ ವೇಗದ ಅರ್ಧ ಶತಕ ಚಚ್ಚಿದ ಕೃನಾಲ್ ಪಾಂಡ್ಯಪಾದಾರ್ಪಣೆ ಪಂದ್ಯದಲ್ಲೇ ವೇಗದ ಅರ್ಧ ಶತಕ ಚಚ್ಚಿದ ಕೃನಾಲ್ ಪಾಂಡ್ಯ

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಭಾರತದ ಅರುಂಧತಿ ರೆಡ್ಡಿ 1, ರಾಜೇಶ್ವರಿ ಗಾಯಕ್ವಾಡ್ 3, ರಾಧಾ ಯಾದವ್ 1, ದೀಪ್ತಿ ಶರ್ಮಾ 1, ಸಿಮ್ರಾನ್ ಬಹದ್ದೂರ್ 1 ವಿಕೆಟ್‌ ಪಟೆದರೆ, ಭಾರತದ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ನೊಂಡುಮಿಸೊ ಶಾಂಗೇಸ್ 1 ವಿಕೆಟ್‌ನೊಂದಿಗೆ ಗಮನ ಸೆಳೆದರು.

Story first published: Wednesday, March 24, 2021, 8:03 [IST]
Other articles published on Mar 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X