ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನ ರೀತಿ ಬೌಲಿಂಗ್ ಮಾಡಿದ್ರೆ ಉಪಯೋಗವಿಲ್ಲ; ಉಮ್ರಾನ್ ಮಲಿಕ್ ಬಗ್ಗೆ ಅಫ್ರಿದಿ ಹೊಟ್ಟೆಕಿಚ್ಚಿನ ಹೇಳಿಕೆ!

Shaheen Afridi gives controversial statement on Umran Maliks fast deliveries

ಇಂಡಿಯನ್ ಪ್ರೀಮಿಯರ್ ಲೀಗ್ ಹಲವಾರು ಯುವ ಕ್ರಿಕೆಟಿಗರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿ ಮಿಂಚಲು ಅವಕಾಶವನ್ನು ಕಲ್ಪಿಸಿಕೊಟ್ಟ ವೇದಿಕೆಯಾಗಿದೆ. ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಮಿಂಚಿ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಸ್ಟಾರ್ ಆಟಗಾರರಾಗಿ ಮೆರೆಯುತ್ತಿರುವ ಹಲವಾರು ಆಟಗಾರರ ಉದಾಹರಣೆಗಳು ನಮ್ಮ ನಿಮ್ಮೆಲ್ಲರ ಮುಂದೆಯೇ ಇವೆ.

ಐಪಿಎಲ್ 2022 ಮುಕ್ತಾಯದ ಬೆನ್ನಲ್ಲೇ ಶುರು ಟೀಮ್ ಇಂಡಿಯಾ ಪಂದ್ಯಗಳು; ಜೂನ್-ಜುಲೈ ತಿಂಗಳ ವೇಳಾಪಟ್ಟಿಐಪಿಎಲ್ 2022 ಮುಕ್ತಾಯದ ಬೆನ್ನಲ್ಲೇ ಶುರು ಟೀಮ್ ಇಂಡಿಯಾ ಪಂದ್ಯಗಳು; ಜೂನ್-ಜುಲೈ ತಿಂಗಳ ವೇಳಾಪಟ್ಟಿ

ಇಷ್ಟು ವರ್ಷಗಳ ಐಪಿಎಲ್ ಆವೃತ್ತಿಯಂತೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿಯೂ ಯುವ ಕ್ರಿಕೆಟಿಗರು ಸಿಕ್ಕ ಅವಕಾಶಗಳನ್ನು ಸರಿಯಾದ ರೀತಿ ಬಳಸಿಕೊಂಡು ಒಳ್ಳೆಯ ಪ್ರದರ್ಶನವನ್ನು ನೀಡಿದ್ದಾರೆ. ಹೀಗೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ ಕಾರಣ ವೇಗಿ ಉಮ್ರಾನ್ ಮಲಿಕ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಕೊಹ್ಲಿ, ಗೇಲ್, ಬಟ್ಲರ್, ರಾಹುಲ್: ಐಪಿಎಲ್‌ನಲ್ಲಿ ವೇಗಿಗಳಿಗೆ ಅತಿಹೆಚ್ಚು ರನ್ ಬಾರಿಸಿರುವ ಆಟಗಾರ ಯಾರು?ಕೊಹ್ಲಿ, ಗೇಲ್, ಬಟ್ಲರ್, ರಾಹುಲ್: ಐಪಿಎಲ್‌ನಲ್ಲಿ ವೇಗಿಗಳಿಗೆ ಅತಿಹೆಚ್ಚು ರನ್ ಬಾರಿಸಿರುವ ಆಟಗಾರ ಯಾರು?

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವೇಗದ ಎಸೆತಗಳನ್ನು ಎಸೆದು ಮಿಂಚಿದ ಉಮ್ರಾನ್ ಮಲಿಕ್ ಇದೇ ತಿಂಗಳ 9ರಿಂದ ಆರಂಭವಾಗಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿಗೆ ಆಯ್ಕೆಯಾಗಿದ್ದಾರೆ. ಇನ್ನು ಉಮ್ರಾನ್ ಮಲಿಕ್ ಎಸೆದ ವೇಗದ ಎಸೆತಗಳು ಕೇವಲ ಭಾರತಕ್ಕೆ ಸೀಮಿತವಾಗಿರದೇ ವಿಶ್ವ ಕ್ರಿಕೆಟ್‍ನಲ್ಲೂ ಸದ್ದು ಮಾಡುತ್ತಿದ್ದು, ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿರುವ ಪಾಕಿಸ್ತಾನದ ವೇಗಿ ಶಾಹಿನ್ ಅಫ್ರಿದಿ ಭಾರತದ ಯುವ ಪ್ರತಿಭೆ ಇಮ್ರಾನ್ ಮಲಿಕ್ ಕುರಿತಾಗಿ ಎದುರಾದ ಪ್ರಶ್ನೆಗೆ ಈ ಕೆಳಕಂಡಂತೆ ಉತ್ತರಿಸಿದ್ದಾರೆ.

ಆ ರೀತಿ ಬೌಲಿಂಗ್ ಮಾಡಿದ್ರೆ ಉಪಯೋಗವಿಲ್ಲ

ಆ ರೀತಿ ಬೌಲಿಂಗ್ ಮಾಡಿದ್ರೆ ಉಪಯೋಗವಿಲ್ಲ

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೋರ್ವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉಮ್ರಾನ್ ಮಲಿಕ್ ಮತ್ತು ಲಾಕಿ ಫರ್ಗ್ಯುಸನ್ ಎಸೆದ ವೇಗದ ಎಸೆತಗಳ ರೀತಿ ನೀವೂ ಬೌಲಿಂಗ್ ಮಾಡಲು ಬಯಸುತ್ತೀರಾ ಎಂಬ ಪ್ರಶ್ನೆಯನ್ನು ಶಾಹೀನ್ ಅಫ್ರಿದಿಗೆ ಎಸೆದರು. ಆದರೆ ಈ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅಫ್ರಿದಿ ವೇಗವಾದ ಎಸೆತಗಳನ್ನು ಹಾಕುವುದರಿಂದ ಯಾವುದೇ ಉಪಯೋಗವಿಲ್ಲ, ನಾನು ಯಾವಾಗಲೂ ಲೈನ್ & ಲೆಂತ್ ಇಟ್ಟುಕೊಂಡು ಬೌಲಿಂಗ್ ಮಾಡಲು ಯತ್ನಿಸುತ್ತೇನೆ, ಈ ರೀತಿ ಲೈನ್ & ಲೆಂತ್ ಇಲ್ಲದೇ ಬೌಲಿಂಗ್ ಮಾಡಿದರೆ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಹಿಡಿತ ಸಾಧಿಸಲು ಆಗುವುದಿಲ್ಲ, ನಾನು ವೇಗಕ್ಕಿಂತ ಲೈನ್ & ಲೆಂತ್ ಮತ್ತು ಸ್ವಿಂಗ್ ಕಡೆ ಗಮನಹರಿಸಲು ಇಚ್ಛಿಸುತ್ತೇನೆ ಎಂದಿದ್ದಾರೆ.

ಶಾಹೀನ್ ಅಫ್ರಿದಿ ಹೇಳಿಕೆಗೆ ಭಾರತ ಕ್ರಿಕೆಟ್ ಅಭಿಮಾನಿಗಳ ಕಿಡಿ

ಶಾಹೀನ್ ಅಫ್ರಿದಿ ಹೇಳಿಕೆಗೆ ಭಾರತ ಕ್ರಿಕೆಟ್ ಅಭಿಮಾನಿಗಳ ಕಿಡಿ

ಇನ್ನು ಶಾಹೀನ್ ಅಫ್ರಿದಿ ವೇಗದಿಂದ ಬೌಲಿಂಗ್ ಮಾಡಿದರೆ ಯಾವುದೇ ಉಪಯೋಗವಿಲ್ಲ ಎಂದು ನೀಡಿರುವ ಹೇಳಿಕೆಯನ್ನು ಕಂಡ ಭಾರತ ಕ್ರಿಕೆಟ್ ಅಭಿಮಾನಿಗಳು ಈತ ಪರೋಕ್ಷವಾಗಿ ಉಮ್ರಾನ್ ಮಲಿಕ್ ಕಂಡು ಹೊಟ್ಟೆಕಿಚ್ಚಿನ ಹೇಳಿಕೆಯನ್ನು ನೀಡುತ್ತಿದ್ದಾನೆ ಎಂದು ಕಿಡಿಕಾರಿದ್ದಾರೆ. ಸಾಧ್ಯವಾದರೆ ಅವರ ರೀತಿ ವೇಗದ ಎಸೆತಗಳನ್ನು ಎಸೆದು ತೋರಿಸಬೇಕು, ಅದನ್ನು ಬಿಟ್ಟು ತನ್ನ ಬೌಲಿಂಗ್ ಕುರಿತು ತಾನೇ ಹೊಗಳಿಕೊಳ್ಳುವುದು ಸರಿಯಲ್ಲ ಎಂದು ಅಫ್ರಿದಿ ವಿರುದ್ಧ ಟೀಕೆಗಳನ್ನು ನಡೆಸಿದ್ದಾರೆ.

ಶಾಹೀನ್ ಅಫ್ರಿದಿ ಅಂಕಿ ಅಂಶ

ಶಾಹೀನ್ ಅಫ್ರಿದಿ ಅಂಕಿ ಅಂಶ

ಒಟ್ಟಾರೆ 24 ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನಾಡಿರುವ ಶಾಹಿನ್ ಅಫ್ರಿದಿ 95 ವಿಕೆಟ್ ಪಡೆದಿದ್ದಾರೆ, 39 ಏಕದಿನ ಪಂದ್ಯಗಳನ್ನಾಡಿ 59 ವಿಕೆಟ್ ಪಡೆದಿದ್ದಾರೆ ಹಾಗೂ 40 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿರುವ ಶಾಹೀನ್ ಅಫ್ರಿದಿ 47 ವಿಕೆಟ್ ಪಡೆದಿದ್ದಾರೆ.

Story first published: Saturday, June 4, 2022, 22:51 [IST]
Other articles published on Jun 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X