ಪಾಕ್ ವಿರುದ್ಧ ಸೋತ ನಂತರ ಟೀಮ್ ಇಂಡಿಯಾ ಆಟಗಾರರು ಕ್ಷಮೆ ಕೇಳುತ್ತಿದ್ದರು: ಶಾಹಿದ್ ಅಫ್ರಿದಿ

ಭಾರತ ಹಾಗೂ ಪಾಕಿಸ್ತಾನ ದ್ವಿಪಕ್ಷೀಯ ಸರಣಿ ನಡೆಯದೆ ದಶಕಗಳೇ ಕಳೆದಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕಾಳಗ ಅಭಿಮಾನಿಗಳ ಪಾಲಿಗೆ ಯಾವಾಗಲೂ ರಸದೌತಣವನ್ನು ನೀಡುತ್ತಿತ್ತು. ಆದರೆ ಭಾರತ ಪಾಕ್ ಸರಣಿಯ ಬಗ್ಗೆ ಪಾಕಿಸ್ತಾನ ಮಾಜಿ ನಾಯಕ ಶಾಹಿದ್ ಅಫ್ರಿದಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಟೀಮ್ ಇಂಡಿಯಾ ಪಾಕಿಸ್ತಾನ ತಂಡದ ವಿರುದ್ಧ ಸಾಕಷ್ಟು ಸೋಲನ್ನು ಕಂಡಿದೆ. ಭಾರತದ ವಿರುದ್ಧದ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಯಾವಾಗಲೂ ಮೇಲುಗೈ ಸಾಧಿಸಿಕೊಂಡು ಬಂದಿದೆ ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ. ಮಾತ್ರವಲ್ಲದೆ ಪಾಕಿಸ್ತಾನದ ವಿರುದ್ಧ ಭಾರತ ಸೋತ ಬಳಿಕ ಪಾಕ್ ಆಟಗಾರರಲ್ಲಿ ಕ್ಷಮೆ ಕೇಳುತ್ತಿದ್ದರು ಎಂದು ಹೇಳಿ ಅಚ್ಚರಿ ಹುಟ್ಟಿಸಿದ್ದಾರೆ.

ಕ್ರಿಕೆಟ್‌ ಜಗತ್ತಿನಲ್ಲಿ ನಿರ್ಮಾಣವಾಗಿರುವ ಬಲು ಅಪರೂಪದ 5 ದಾಖಲೆಗಳು!

ತುಂಬಾ ಬಾರಿ ಸೋಲಿಸಿದ್ದೇವೆ

ತುಂಬಾ ಬಾರಿ ಸೋಲಿಸಿದ್ದೇವೆ

ಭಾರತ ಕ್ರಿಕೆಟ್ ತಂಡವನ್ನು ನಾವು ತುಂಬಾ ಬಾರಿ ಸೋಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಅವರು ಸೋತ ಬಳಿಕ ನಮ್ಮಲ್ಲಿ ಕ್ಷಮೆಯನ್ನು ಕೇಳುತ್ತಿದ್ದರು ಎಂದು ಪಾಕಿಸ್ತಾನದ ಮಾಜಿ ಕ್ರಿಕಟಿಗ ಶಾಹಿದ್ ಅಫ್ರಿದಿ ಹೇಳಿಕೆಯನ್ನು ನೀಡಿದ್ದಾರೆ.

ಭಾರತದ ವಿರುದ್ಧ ಆಡುವುದನ್ನು ಆನಂದಿಸುತ್ತೇನೆ

ಭಾರತದ ವಿರುದ್ಧ ಆಡುವುದನ್ನು ಆನಂದಿಸುತ್ತೇನೆ

ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ವಿರುದ್ಧ ಕ್ರಿಕೆಟ್ ಆಡುವುದನ್ನು ನಾನು ಯಾವಾಗಲೂ ಆನಂದಿಸುತ್ತೇವೆ ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ. ಈ ತಂಡಗಳ ವಿರುದ್ಧ ಆಡುವಾಗ ತುಂಬಾ ಒತ್ತಡವಿರುತ್ತದೆ. ಅವೆರಡೂ ಅತ್ಯುತ್ತಮ ತಂಡಗಳು ಮತ್ತು ದೊಡ್ಡ ತಂಡಗಳು. ಅಲ್ಲಿನ ವಾತಾವರಣದಲ್ಲಿ ಪ್ರದರ್ಶನವನ್ನು ನಿಡುವುದು ದೊಡ್ಡ ಸಂಗತಿ ಎಂದು ಅಫ್ರಿದಿ ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರತದ ವಿರುದ್ಧ ಪಾಕ್ ಮೇಲುಗೈ

ಭಾರತದ ವಿರುದ್ಧ ಪಾಕ್ ಮೇಲುಗೈ

ಭಾರತ ಪಾಕಿಸ್ತಾನ ಕ್ರಿಕೆಟ್ ಇತಿಹಾಸವನ್ನು ನೋಡಿದರೆ ಪಾಕಿಸ್ತಾನ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗುತ್ತದೆ.ಎರಡೂ ದೇಶಗಳು 59 ಬಾರಿ ಮುಖಾಮುಖಿಯಾಗಿದ್ದು ಪಾಕಿಸ್ತಾನ 12 ಬಾರಿ ಗೆಲುವು ಕಂಡಿದ್ದರೆ ಭಾರರ 9ಪಂದ್ಯಗಳಲ್ಲಿ ವಿಜಯ ಸಾಧಿಸಿದೆ. ಏಕದಿನ ಪಂದ್ಯಗಳಲ್ಲಿ ಈ ವ್ಯತ್ಯಾಸ ಇನ್ನೂ ದೊಡ್ಡದಿದೆ. 75 ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದಿದ್ದರೆ ಭಾರತ 55 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ ದಾಖಲೆ ಹೊಂದಿದೆ. ಆದರೆ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಭಾರತ ಪಾಕ್‌ಗಿಂತ ಮುನ್ನಡೆ ಹೊಂದಿದ್ದು ಮುಖಾಮುಖಿಯಾಗಿರುವ 8 ಪಂದ್ಯಗಳಲ್ಲಿ ಭಾರತ 6ರಲ್ಲಿ ಗೆದ್ದುಕೊಂಡಿದೆ.

ಆದರೆ ಅಫ್ರಿದಿ ಕಾಲಿಟ್ಟ ಬಳಿಕ ಭಾರತದ್ದೇ ಮೇಲುಗೈ

ಆದರೆ ಅಫ್ರಿದಿ ಕಾಲಿಟ್ಟ ಬಳಿಕ ಭಾರತದ್ದೇ ಮೇಲುಗೈ

ಶಾಹಿದ್ ಅಫ್ರಿದಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಬಾರತ ಸೋತಿದ್ದೇ ಹೆಚ್ಚು ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಬೀಗಿದ್ದು ನಿಜ. ಆದರೆ ಶಾಹಿದ್ ಅಫ್ರಿದಿ 1996ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಅದಾದ ನಂತರ ಪಾಕಿಸ್ತಾನದ ವಿರುದ್ಧ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು ಎಂದು ದಾಖಲೆ ಹೇಳುತ್ತದೆ. ಅದರಲ್ಲೂ ಭಾರತ ಹೆಚ್ಚಿನ ಪಂದ್ಯಗಳನ್ನು ಪಾಕ್ ವಿರುದ್ಧ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ.

ಪಾಕಿಸ್ತಾನಕ್ಕಿಂತ ಭಾರತದಲ್ಲಿ ಹೆಚ್ಚು ಪ್ರೀತಿ ಹೇಳಿಕೆಗೆ ಬದ್ಧ

ಪಾಕಿಸ್ತಾನಕ್ಕಿಂತ ಭಾರತದಲ್ಲಿ ಹೆಚ್ಚು ಪ್ರೀತಿ ಹೇಳಿಕೆಗೆ ಬದ್ಧ

2016 ರ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಬಂದ ಪಾಕಿಸ್ತಾನ ತಂಡದ ನಾಯಕ ಅಫ್ರಿದಿ. ಪಾಕಿಸ್ತಾನದಲ್ಲಿ ಅವರು ಪಡೆದುಕೊಂಡದ್ದಕ್ಕಿಂತ ಹೆಚ್ಚಿನ ಪ್ರೀತಿಯನ್ನು ಪಡೆದುಕೊಂಡಿದ್ದೇನೆ ಎಂದು ಹೇಳಿದ್ದರು. ಕಾಶ್ಮೀರದ ಬಗ್ಗೆ ಇತ್ತೀಚೆಗೆ ಅವರು ನೀಡಿದ್ದ ಹೇಳಿಕೆಗಳು ಮತ್ತು ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅವರೊಂದಿಗಿನ ವಾಗ್ವಾದಗಳೂ ಅವರ ಮತ್ತು ಭಾರತೀಯ ಅಭಿಮಾನಿಗಳ ನಡುವಿನ ಸಂಬಂಧವನ್ನು ಗಮನಾರ್ಹವಾಗಿ ಕೆಡಿಸಿದೆ. ಆದರೆ ಅಫ್ರಿದಿ ಮಾತ್ರ ತಾವು ಅಂದಿನ ಹೇಳಿಕೆಗೆ ಬದ್ದವಾಗಿರುವುದಾಗಿ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, July 5, 2020, 14:09 [IST]
Other articles published on Jul 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X