ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಿಂದ ಭಾರತದಲ್ಲಿ ಕ್ರಿಕೆಟ್‌ ಬೆಳವಣಿಗೆ: ಶಾಹಿದ್ ಅಫ್ರಿದಿ

Shahid Afridi Credits Ipl For Success Of Indian Cricket

ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಭಾರತದಲ್ಲಿ ಕ್ರಿಕೆಟ್‌ನಲ್ಲಾದ ಬದಲಾವಣೆ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಭಾರತದ ಕ್ರಿಕೆಟ್‌ನಲ್ಲಿ ಆಗಿರುವ ಸಕಾರಾತ್ಮಕ ಬೆಳವಣಿಗೆಗೆ ಐಪಿಎಲ್ ಕಾರಣ ಎಂಬ ಅಭಿಪ್ರಾಯವನ್ನು ಅಫ್ರಿದಿ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ಪಾಕಿಸ್ತಾನ್ ಪ್ರೀಮಿಯರ್ ಲೀಗ್‌ 5ನೇ ಆವೃತ್ತಿ ನಡೆಯುತ್ತಿದೆ. ಪಾಕಿಸ್ತಾನದಲ್ಲೂ ಇದೇ ರೀತಿಯ ಬೆಳವಣಿಗೆಯನ್ನು ಪಾಕಿಸ್ತಾನದ ಮಾಜಿ ಆಟಗಾರರು ನಿರೀಕ್ಷಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಈ ಹೇಳಿಕೆಯನ್ನು ನೀಡಿದ್ದಾರೆ.

ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ಯಾರೆನ್ ಸ್ಯಮಿಗೆ ಪಾಕಿಸ್ತಾನ ಪೌರತ್ವ!ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ಯಾರೆನ್ ಸ್ಯಮಿಗೆ ಪಾಕಿಸ್ತಾನ ಪೌರತ್ವ!

ಭಾರತದಲ್ಲಿ ಐಪಿಎಲ್ ಭಾರತೀಯ ಕ್ರಿಕೆಟ್‌ಗೆ ಪೂರಕವಾಗಿ ಬೆಳೆಯುತ್ತಿದೆ. ಭಾರತೀಯ ಯುವ ಆಟಗಾರರು ಐಪಿಎಲ್‌ನಲ್ಲಿ ಆಡುವಾಗ ವಿದೇಶಿ ಆಟಗಾರರ ಜೊತೆಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುತ್ತಾರೆ. ಇದು ಆಟಗಾರರಿಗೆ ಒತ್ತಡವನ್ನು ನಿಭಾಯಿಸಲು ಸಹಕಾರಿಯನ್ನಾಗಿ ಮಾಡುತ್ತದೆ ಎಂದಿದ್ದಾರೆ.

ಐಪಿಎಲ್ ಭಾರತೀಯ ಕ್ರಿಕೆಟನ್ನು ಬದಲಾಯಿಸಿದೆ. ಪಾಕಿಸ್ತಾನ್ ಪ್ರಿಮಿಯರ್ ಕೂಡ ಅದೇ ರೀತಿ ಪಾಕಿಸ್ತಾನ ಕ್ರಿಕೆಟ್‌ಗೆ ಸಹಕಾರಿಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ ಅಫ್ರಿದಿ. ಈಗಾಗಲೆ ಅನೇಕ ಯುವ ಕ್ರಿಕೆಟಿಗರು ಪಿಎಸ್‌ಎಲ್‌ನಿಂದ ಬೆಳಕಿಗೆ ಬಂದಿದ್ದಾರೆ. ವಿಶ್ವ ದರ್ಜೆಯ ಆಟಗಾರರ ಜೊತೆಗೆ ಆಡುತ್ತಾ ಯುವ ಕ್ರಿಕೆಟಿಗರು ಒತ್ತಡವನ್ನು ನಿಭಾಯಿಸಲು ಕಲಿಯುತ್ತಾರೆ ಎಂದಿದ್ದಾರೆ ಶಾಹಿದ್ ಅಫ್ರಿದಿ.

ನೊ ಡೌಟ್, ಈತನೇ ವಿಶ್ವಶ್ರೇಷ್ಟ ಆಟಗಾರ: ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದ ಕೇನ್ ವಿಲಿಯಮ್ಸನ್ನೊ ಡೌಟ್, ಈತನೇ ವಿಶ್ವಶ್ರೇಷ್ಟ ಆಟಗಾರ: ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದ ಕೇನ್ ವಿಲಿಯಮ್ಸನ್

ಐಪಿಎಲ್ ಆರಂಭಿಕ ಆವೃತ್ತಿಯಲ್ಲಿ ಶಾಹಿದ್ ಅಫ್ರಿದಿ ಕೂಡ ಐಪಿಎಲ್ ನ ಭಾಗವಾಗಿದ್ದರು. ಐಪಿಎಲ್‌ನಲ್ಲಿ ಹೆಸರಾಂತ ಕ್ರಿಕೆಟಿಗರಲ್ಲಿ ಶಾಹಿದ್ ಅಫ್ರಿದಿ ಕೂಡ ಒಬ್ಬರಾಗಿದ್ದರು. ಡೆಕ್ಕನ್ ಚಾರ್ಜರ್ಸ್ ತಂಡವನ್ನು ಪ್ರತಿನಿಧಿಸಿದ್ದ ಅಫ್ರಿದಿ 10 ಪಂದ್ಯಗಳಲ್ಲಿ ಆಡಿದ್ದರು. ಆದರೆ 81 ರನ್‌ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ 9 ವಿಕೆಟ್ ಪಡೆದು ಮಿಂಚಿದ್ದರು.

Story first published: Sunday, February 23, 2020, 19:50 [IST]
Other articles published on Feb 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X