ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಪಾಕ್‌ನ ಹೀನಾಯ ಸೋಲಿಗೆ ಶಾಹಿದ್ ಅಫ್ರಿದಿ ಪ್ರತಿಕ್ರಿಯೆ

Shahid Afridi reacts after Pakistans easy loss to inexperienced England in 1st ODI

ಕರಾಚಿ: ಪಾಕಿಸ್ತಾನ ಮತ್ತು ಇಂಗ್ಲೆಂಡ್ ಮಧ್ಯೆ ಸೀಮಿತ ಓವರ್‌ಗಳ ಸರಣಿ ಶುರುವಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ 9 ವಿಕೆಟ್‌ಗಳ ಹೀನಾಯ ಸೋಲನುಭವಿಸಿದೆ. ಇದಕ್ಕೆ ಪಾಕಿಸ್ತಾನ ಮಾಜಿ ನಾಯಕ ಶಾಹಿದ್ ಅಫ್ರಿದಿ ಪ್ರತಿಕ್ರಿಯಿಸಿದ್ದಾರೆ.

ದ್ರಾವಿಡ್ ಪೂರ್ಣಕಾಲಿಕ ಕೋಚ್ ಆಗುವುದು ಬೇಡ ಎಂದ ವಾಸಿಂ ಜಾಫರ್: ಕಾರಣ ಇಲ್ಲಿದೆದ್ರಾವಿಡ್ ಪೂರ್ಣಕಾಲಿಕ ಕೋಚ್ ಆಗುವುದು ಬೇಡ ಎಂದ ವಾಸಿಂ ಜಾಫರ್: ಕಾರಣ ಇಲ್ಲಿದೆ

ಇಂಗ್ಲೆಂಡ್-ಶ್ರೀಲಂಕಾ ಸರಣಿಯ ಬಳಿಕ ಇಂಗ್ಲೆಂಡ್‌ ತಂಡದಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಪಾಕ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಂಗ್ಲ ತಂಡದಲ್ಲಿ ಅನೇಕ ಪ್ರಮುಖ ಆಟಗಾರರು ಆಡಿರಲಿಲ್ಲ. 9 ಅನ್‌ಕ್ಯಾಪ್ಡ್ ಆಟಗಾರರಿದ್ದ ಸಂಪೂರ್ಣ ಹೊಸ ತಂಡ ಪಾಕ್‌ ವಿರುದ್ಧದ ಪಂದ್ಯದಲ್ಲಿ ಆಡಿತ್ತು.

ಆದರೆ ಹೊಸ ಇಂಗ್ಲೆಂಡ್‌ ತಂಡ ಬಹಳ ಸುಲಭವಾಗಿ ಪಾಕ್‌ ಅನುಭವಿಗಳ ತಂಡವನ್ನು ಸೋಲಿಸಿತ್ತು. ಡೇವಿಡ್ ಮಲನ್, ಝ್ಯಾಕ್ ಕ್ರಾಲೆ ಅರ್ಧ ಶತಕ ಮತ್ತು ಶಕೀಬ್ ಮಹಮೂದ್ ಅದ್ಭುತ ಬೌಲಿಂಗ್‌ ನಿಂದಾಗಿ ಇಂಗ್ಲೆಂಡ್‌ ತಂಡ ಪಾಕ್ ವಿರುದ್ಧ ಪಾರಮ್ಯ ಮೆರೆದಿತ್ತು. ಪಾಕ್ ಸೋಲಿನ ಬಗ್ಗೆ ಅಫ್ರಿದಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಿಶ್ವಕಪ್‌ಗೂ ಮುನ್ನ ಐಪಿಎಲ್: ಯುಎಇ ಪಿಚ್ ಬಗ್ಗೆ ಮಾರ್ಕ್ ಬೌಷರ್ ಮಹತ್ವದ ಹೇಳಿಕೆವಿಶ್ವಕಪ್‌ಗೂ ಮುನ್ನ ಐಪಿಎಲ್: ಯುಎಇ ಪಿಚ್ ಬಗ್ಗೆ ಮಾರ್ಕ್ ಬೌಷರ್ ಮಹತ್ವದ ಹೇಳಿಕೆ

"ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ನಾವು ಈ ಪಂದ್ಯವನ್ನು ಮರೆಯಬೇಕು. ಪಾಕಿಸ್ತಾನ ತಂಡ ಖಂಡಿತಾ ಇಷ್ಟು ದುರ್ಬಲ ತಂಡವಲ್ಲ. ಕಮಾನ್ ಬಾಯ್ಸ್, ಲಾರ್ಡ್ಸ್‌ನಲ್ಲಿ ಶನಿವಾರ ನಡೆಯುವ ಪಂದ್ಯದಲ್ಲಿ ಬಲಿಷ್ಠರಾಗಿ ಹೋರಾಡಿ. ಚೆನ್ನಾಗಿ ಆಡಿದಿರಿ ಇಂಗ್ಲೆಂಡ್. ಹೊಸ ತಂಡದಿಂದ ಟಾಪ್ ಕ್ಲಾಸ್ ಪ್ರದರ್ಶನ ಬಂದಿತ್ತು," ಎಂದು ಅಫ್ರಿದಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.

Story first published: Friday, July 9, 2021, 16:24 [IST]
Other articles published on Jul 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X