ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಕ್ಸರ್ ಕಿಂಗ್ ಅಫ್ರಿದಿಗೆ ಬೂಮ್ ಬೂಮ್ ಹೆಸರು ಕೊಟ್ಟಿದ್ದು ಯಾರು?

By Mahesh
Shahid Afridi reveals who give him famous Title Boom Boom

ಬೆಂಗಳೂರು, ಆಗಸ್ಟ್ 27: ವಿಶ್ವ ಕ್ರಿಕೆಟ್ ಶ್ರೇಷ್ಠ ಆಲ್ ರೌಂಡರ್, ಸ್ಫೋಟಕ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡ, ಪಾಕಿಸ್ತಾನದ ಮಾಜಿ ಆಟಗಾರ ಶಾಹೀದ್ ಆಫ್ರಿದಿ ಅವರು ತಮಗೆ 'ಬೂಮ್ ಬೂಮ್' ಎಂಬ ಅಡ್ಡ ಹೆಸರು ಬಂದಿದ್ದು ಹೇಗೆ ಎಂಬುದನ್ನು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಟೆಸ್ಟ್ ಹಾಗೂ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿರುವ ಅಫ್ರಿದಿ ಅವರು ಟಿ20 ಲೀಗ್ ಗಳಲ್ಲಿ ಆಡುತ್ತಿದ್ದಾರೆ. ಸದ್ಯ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಜಮೈಕಾ ತಲ್ಲಾವ್ಹಾಸ್ ಪರ ಆಡುತ್ತಿದ್ದಾರೆ. ಆದರೆ, ಮೊಣಕಾಲಿನ ನೋವಿನಿಂದ ಟೂರ್ನಮೆಂಟ್ ನಿಂದ ಹಿಂದೆ ಸರಿದಿದ್ದಾರೆ.

ಭಾರತದ ಬಾವುಟಕ್ಕೆ ಗೌರವ ನೀಡಿ ಹೃದಯ ಗೆದ್ದ ಅಫ್ರೀದಿ! ಭಾರತದ ಬಾವುಟಕ್ಕೆ ಗೌರವ ನೀಡಿ ಹೃದಯ ಗೆದ್ದ ಅಫ್ರೀದಿ!

ಬೂಮ್ ಬೂಮ್ ಹೆಸರು: 38 ವರ್ಷ ವಯಸ್ಸಿನ ಶಾಹೀದ್ ಅಫ್ರಿದಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಅಭಿಮಾನಿಗಳ ಜತೆ ಕೆಲ ಕಾಲ ಪ್ರಶ್ನೋತ್ತರ ಸೆಷನ್ಸ್ ನಡೆಸಿದರು.

ವಿಶ್ವಕಪ್ ನಂತರ ಅಫ್ರಿದಿ ಏಕದಿನ ಕ್ರಿಕೆಟ್ ಆಡಲ್ಲಂತೆ ! ವಿಶ್ವಕಪ್ ನಂತರ ಅಫ್ರಿದಿ ಏಕದಿನ ಕ್ರಿಕೆಟ್ ಆಡಲ್ಲಂತೆ !

ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, 'ಬೂಮ್ ಬೂಮ್' ಎಂಬ ಹೆಸರನ್ನು ಕೊಟ್ಟಿದ್ದು ಟೀಂ ಇಂಡಿಯಾದ ಮಾಜಿ ಆಟಗಾರ, ಕಾಮೆಂಟೆಟರ್ , ಹಾಲಿ ಕೋಚ್ ರವಿ ಶಾಸ್ತ್ರಿ ಎಂದರು.

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 476ಸಿಕ್ಸರ್ ಸಿಡಿಸಿರುವ ಅಫ್ರಿದಿ, 1996 ರಲ್ಲಿ ಕೀನ್ಯಾ ವಿರುದ್ಧ ತಮ್ಮ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದರು. ಅಫ್ರಿದಿ ಅವರು ತಮ್ಮ ವೃತ್ತಿ ಜೀವನದಲ್ಲಿ 117.01 ಸ್ಟ್ರೈಕ್ ರೇಟ್ ನಿಂದ ಮೂರು ಮಾದರಿಯ ಕ್ರಿಕೆಟ್‍ನಲ್ಲಿ 11,186 ರನ್ ರನ್ ಗಳಿಸಿದ್ದಾರೆ. ಅಲ್ಲದೇ 541 ವಿಕೆಟ್ ಗಳಿಸಿ ಮಿಂಚಿ, ಶ್ರೇಷ್ಠ ಆಲ್ ರೌಂಡರ್ ಎನಿಸಿಕೊಂಡಿದ್ದಾರೆ.

1996 ರಲ್ಲಿ ಶ್ರೀಲಂಕಾ ವಿರುದ್ಧದ ನಡೆದ ಪಂದ್ಯವೊಂದರಲ್ಲಿ 37 ಎಸೆತಗಳಲ್ಲಿ ಶತಕ ಸಿಡಿದ ಸಾಧನೆಯನ್ನು ಮಾಡಿದ್ದು, ಆಫ್ರಿದಿ ಸಿಕ್ಸರ್ ಬಾರಿಸುವ ರೀತಿಯನ್ನು ಕಂಡು ಬೂಮ್ ಬೂಮ್ ಎಂಬ ಹೆಸರು ನೀಡಲಾಗಿದೆ.

Story first published: Monday, August 27, 2018, 19:08 [IST]
Other articles published on Aug 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X