ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ಬ್ಯಾಟ್ ಬಳಸಿ 37 ಎಸೆತಕ್ಕೆ ಚೊಚ್ಚಲ ಶತಕ ಬಾರಿಸಿದ್ದೆ: ಶಾಹಿದ್ ಅಫ್ರಿದಿ

Shahid Afridi used Sachin Tendulkars bat for 37-ball ton

ಇಸ್ಲಮಾಬಾದ್, ಮೇ 5: 1996ರಲ್ಲಿ ಯುವ ಬ್ಯಾಟ್ಸ್ಮನ್ ಶಾಹಿದ್ ಅಫ್ರಿದಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 37 ಎಸೆತಗಳಿಗೆ ಚೊಚ್ಚಲ ಏಕದಿನ ಶತಕ ಬಾರಿಸಿದ್ದರು. ಈ ಶತಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ನೂತನ ದಾಖಲೆಗೂ ಕಾರಣವಾಗಿತ್ತು. ಅಫ್ರಿದಿ ಆ ಶತಕ ಬಾರಿಸಲು ಅವತ್ತು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಬ್ಯಾಟ್ ಬಳಸಿದ್ದರಂತೆ. ಇದನ್ನು ಸ್ವತಃ ಅಫ್ರಿದಿಯೇ ಹೇಳಿಕೊಂಡಿದ್ದಾರೆ.

ಕಾಲೆಳೆದ ಅಫ್ರಿದಿಗೆ ಖಾರವಾಗೇ ತಿರುಗೇಟು ನೀಡಿದ ಗೌತಮ್ ಗಂಭೀರ್!ಕಾಲೆಳೆದ ಅಫ್ರಿದಿಗೆ ಖಾರವಾಗೇ ತಿರುಗೇಟು ನೀಡಿದ ಗೌತಮ್ ಗಂಭೀರ್!

ಇತ್ತೀಚೆಗೆ ಬಿಡುಗಡೆಗೊಂಡಿರುವ ಅಫ್ರಿದಿ ಆತ್ಮಚರಿತ್ರೆ 'ಗೇಮ್ ಚೇಂಜರ್‌'ನಲ್ಲಿ ಈ ವಿಚಾರವನ್ನು ಅಫ್ರಿದಿ ಬರೆದುಕೊಂಡಿದ್ದಾರೆ. ಕ್ರೀಡಾ ಉಪಕರಣಗಳನ್ನು ತಯಾರಿಸುವ ಪಾಕಿಸ್ತಾನದ ಖ್ಯಾತ ಕೇಂದ್ರ ಸಿಯಾಲ್‌ಕೋಟ್‌ಗೆ ಬ್ಯಾಟ್ ತೆಗೆದುಕೊಂಡು ಹೋಗುವಂತೆ ತೆಂಡೂಲ್ಕರ್ ತನ್ನ ನೆಚ್ಚಿನ ಬ್ಯಾಟನ್ನು ವಾಕರ್ ಯೂನಿಸ್‌ಗೆ ನೀಡಿದ್ದರು. ಆಗ ಆ ಬ್ಯಾಟನ್ನು ತಾನು ಬಳಸಿಕೊಂಡಿದ್ದೆ ಎಂದು ಅಫ್ರಿದಿ ಹೇಳಿದ್ದಾರೆ.

ಗುಟ್ಟನ್ನು ಬಿಚ್ಚಿಡುತ್ತ ಅಫ್ರಿದಿ, 'ಬ್ಯಾಟನ್ನು ಸಿಯಾಲ್‌ಕೊಟ್‌ಗೆ ತೆಗೆದುಕೊಂಡು ಹೋಗುವ ಮುನ್ನ ವಾಕರ್ ಏನು ಮಾಡಿದರು ಹೇಳಿ? ನಾನು ನೈರೋಬಿ ಪಂದ್ಯದಲ್ಲಿ ಬ್ಯಾಟಿಂಗ್‌ ತೆರಳುವುದಕ್ಕೂ ಮುನ್ನ ಆ ಬ್ಯಾಟನ್ನು ನನ್ನ ಕೈಗೆ ನೀಡಿದ್ದರು. ಸಚಿನ್ ನೆಚ್ಚಿನ ಬ್ಯಾಟ್ ಸಹಾಯದಿಂದ ನಾನು ಅವತ್ತು ಸ್ಫೋಟಕ ಶತಕ ಬಾರಿಸಿದ್ದೆ' ಎಂದಿದ್ದಾರೆ.

ವಿಶ್ವಕಪ್ ರಿವೈಂಡ್: ಪಾಕ್‌ಗೆ ಮುಖಭಂಗ ತಂದಿದ್ದ ವಾರ್ನ್ 4 ವಿಕೆಟ್ ಟ್ರಿಕ್!ವಿಶ್ವಕಪ್ ರಿವೈಂಡ್: ಪಾಕ್‌ಗೆ ಮುಖಭಂಗ ತಂದಿದ್ದ ವಾರ್ನ್ 4 ವಿಕೆಟ್ ಟ್ರಿಕ್!

ಕೀನ್ಯಾದ ನೈರೋಬಿಯ ಜಿಮ್ಕಾನ ಕ್ಲಬ್ ಗ್ರೌಂಡ್‌ನಲ್ಲಿ 1996ರಲ್ಲಿ ನಡೆದಿದ್ದ ಕೀನ್ಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಶ್ರೀಲಂಕಾ ನಾಲ್ಕು ತಂಡಗಳ ಟೂರ್ನಿಯ ಪಾಕ್-ಲಂಕಾ ಮುಖಾಮುಖಿಯಲ್ಲಿ ಅಫ್ರಿದಿ 37 ಎಸೆತಗಳಿಗೆ ಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ 82 ರನ್‌ಗಳ ಭರ್ಜರಿ ಗೆಲುವನ್ನಾಚರಿಸಿತ್ತು.

Story first published: Sunday, May 5, 2019, 14:29 [IST]
Other articles published on May 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X