ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌: ಶಾಹಿದ್‌ ಅಫ್ರಿದಿ ಪರ ಶೊಯೇಬ್‌ ಅಖ್ತರ್‌ ಬ್ಯಾಟಿಂಗ್‌

Shahid Afridi was treated harshly by seniors: Shoaib Akhtar

ಕರಾಚಿ, ಮೇ 09: ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ ತಮ್ಮ ಆತ್ಮಚರಿತ್ರೆ 'ಗೇಮ್‌ ಚೇಂಜರ್‌' ಮೂಲಕ ಒಂದಲ್ಲಾ ಒಂದು ವಿಷಯದಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ.

 ಅಫ್ರಿದಿ ಬಗ್ಗೆ ಅಚ್ಚರಿಯ ಸತ್ಯ ಬಿಚ್ಚಿಟ್ಟ ಇಮ್ರಾನ್‌ ಫರಾತ್‌ ಅಫ್ರಿದಿ ಬಗ್ಗೆ ಅಚ್ಚರಿಯ ಸತ್ಯ ಬಿಚ್ಚಿಟ್ಟ ಇಮ್ರಾನ್‌ ಫರಾತ್‌

ತಮ್ಮ ಆತ್ಮಚರಿತ್ರೆಯಲ್ಲಿ ಪಾಕ್‌ ಕ್ರಿಕೆಟ್‌ ತಂಡದ ಮಾಜಿ ದಿಗ್ಗಜರಾದ ಜಾವೇದ್‌ ಮಿಯಾಂದಾದ್‌ ಮತ್ತು ವಕಾರ್‌ ಯೂನಿಸ್‌ ಅವರನ್ನು ಜರಿದಿದ್ದ ಅಫ್ರಿದಿ ವಿರುದ್ಧ ಅಸಮಾಧಾನದ ಅಲೆಯೇ ಎದ್ದಿತ್ತು. ಎಡಗೈ ಬ್ಯಾಟ್ಸ್‌ಮನ್‌ ಇಮ್ರಾನ್‌ ಫರಾತ್‌ ಸೇರಿದಂತೆ ಹಲವು ಕ್ರಿಕೆಟಿಗರು ಮತ್ತು ಪಾಕ್‌ ಕ್ರಿಕೆಟ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಅಫ್ರಿದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದೀಗ ಸಾರ್ವಕಾಲಿಕ ವಿಶ್ವ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ರಾವಲ್‌ಪಿಂಡಿ ಎಕ್ಸ್‌ಪ್ರೆಸ್‌ ಖ್ಯಾತಿಯ ಪಾಕ್‌ನ ಮಾಜಿ ಬೌಲರ್‌ ಶೊಯೇಬ್‌ ಅಖ್ತರ್‌, ಆಲ್‌ರೌಂಡರ್‌ ಅಫ್ರಿದಿ ಪರವಾಗಿ ನಿಂತಿದ್ದು, ಅಫ್ರಿದಿ ಹಿರಿಯ ಆಟಗಾರರ ಕುರಿತಾಗಿ ಹೇಳಿರುವುದು ಸರಿಯಾಗೇ ಇದೆ. ಅವರ್ಯಾರೂ ಅಫ್ರಿದಿಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡಿಲ್ಲ ಎಂದು ಆಲ್‌ರೌಂಡರ್‌ ಪರ ಬ್ಯಾಟ್‌ ಬೀಸಿದ್ದಾರೆ.

 ನಿನಗೆ ಚಿಕಿತ್ಸೆ ಅಗತ್ಯವಿದೆ, ಪಾಕಿಸ್ತಾನಕ್ಕೆ ಬಾ: ಗಂಭೀರ್‌ಗೆ ಅಫ್ರಿದಿ ಮತ್ತೆ ಟಾಂಗ್‌ ನಿನಗೆ ಚಿಕಿತ್ಸೆ ಅಗತ್ಯವಿದೆ, ಪಾಕಿಸ್ತಾನಕ್ಕೆ ಬಾ: ಗಂಭೀರ್‌ಗೆ ಅಫ್ರಿದಿ ಮತ್ತೆ ಟಾಂಗ್‌

ಅಫ್ರಿದಿ, ತಮ್ಮ ಕ್ರಿಕೆಟ್‌ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಹಿರಿಯ ಆಟಗಾರರು ತಮ್ಮೊಂದಿಗೆ ಕಠೋರವಾಗಿ ವರ್ತಿಸಿದ್ದಾರೆ ಎಂದು 'ಗೇಮ್‌ ಚೇಂಜರ್‌ನಲ್ಲಿ' ಆರೋಪಿಸಿದ್ದಾರೆ. 1999ರಲ್ಲಿ ಭಾರತ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್‌ ಪಂದ್ಯದ ವೇಳೆ ಅಂದಿನ ಪಾಕ್‌ ತಂಡದ ಕೋಚ್‌ ಜಾವೇದ್‌ ಮಿಯಾಂದಾದ್‌ ತಮ್ಮನ್ನು ಬ್ಯಾಟಿಂಗ್‌ ಅಭ್ಯಾಸ ನಡೆಸಲು ಬಿಡಲೇ ಇಲ್ಲ ಎಂದು ಉದಾಹರಣೆಯನ್ನೂ ನೀಡಿದ್ದಾರೆ.

 ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಪಿಚ್‌ ಮಧ್ಯದಲ್ಲಿ ಮೋರೆ-ಜಾವೇದ್‌ ಜಟಾಪಟಿ ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಪಿಚ್‌ ಮಧ್ಯದಲ್ಲಿ ಮೋರೆ-ಜಾವೇದ್‌ ಜಟಾಪಟಿ

ಇನ್ನು ಅಫ್ರೀದಿ ಪರವಾಗಿ ಮಾತನಾಡಿರುವ ಅಖ್ತರ್‌ ಕೂಡ ತಮ್ಮ ವೃತ್ತಿ ಬದುಕಿನ ದಿನಗಳಲ್ಲಿ ಹಿರಿಯ ಆಟಗಾರರ ಅವಕೃಪೆ ಎದುರಿಸಿರುವುದಾಗಿ ಹೇಳಿದ್ದಾರೆ. "ಹಿರಿಯ ಆಟಗಾರರು ನಮ್ಮನ್ನು ನಡೆಸಿಕೊಳ್ಳುತ್ತಿದ್ದ ದಯನೀಯ ರೀತಿ ಕುರಿತಾಗಿ ಅಫ್ರಿದಿ ಕೊಂಚ ಕಡಿಮೆಯೇ ಬರೆದಿದ್ದಾರೆ. ಏಕಂದರೆ ಹಿರಿಯ ಆಟಗಾರರ ದಬ್ಬಾಳಿಕೆಯನ್ನು ನನ್ನ ಕಣ್ಣಾರೆ ವೀಕ್ಷಿಸಿದ್ದೇನೆ. ಈ ವಿಚಾರದಲ್ಲಿ ಅಫ್ರಿದಿ ಅವರನ್ನು ಸಂಪೂರ್ಣ ಬೆಂಬಲಿಸುತ್ತೇನೆ,'' ಎಂದು ಅಖ್ತರ್‌ ಸ್ಥಳೀಯ ಮಾಧ್ಯಮವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಮೂರು ವಿಶ್ವಕಪ್‌ಗಳಲ್ಲಿ ಅಝರುದ್ದೀನ್‌ ಸಾಧನೆಯೇನು?ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಮೂರು ವಿಶ್ವಕಪ್‌ಗಳಲ್ಲಿ ಅಝರುದ್ದೀನ್‌ ಸಾಧನೆಯೇನು?

ಇಷ್ಟಲ್ಲದೆ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ತಮ್ಮನ್ನು ಹೊಗಳುವಂತೆ ಜಾವೇದ್‌ ಮಿಯಾಂದಾದ್‌ ಕೇಳಿಕೊಂಡಿದ್ದರು. ಇದಾದ ಬಳಿಕ ಜಾವೇದ್‌ ಮೇಲಿದ್ದ ಗೌರವವೆಲ್ಲವೂ ಕಳೆದುಹೋಯಿತು ಎಂದು ಅಫ್ರಿದಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಹಿಗ್ಗಾಮುಗ್ಗಾ ಜರಿದ ಫರಾತ್‌

ಶಾಹಿದ್‌ ಅಫ್ರಿದಿ ಜತೆ ಹೆಚ್ಚು ಕಾಲ ಕ್ರಿಕೆಟ್‌ ಆಡಿದ ಅನುಭವ ಹೊಂದಿರುವ ಪಾಕಿಸ್ತಾನ ತಂಡದ ಅವಕೃಪೆ ಎದುರಿಸುತ್ತಿರುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಇಮ್ರಾನ್‌ ಫರಾತ್‌, ಮಾಜಿ ಆಲ್‌ರೌಂಡರ್‌ನ ವ್ಯಕ್ತಿತ್ವದ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ. ಅಫ್ರಿದಿ ತಮ್ಮ ಸ್ವಾರ್ಥಕ್ಕಾಹಿ ಹಲವು ಕ್ರಿಕೆಟಿಗರ ವೃತ್ತಿ ಬದುಕನ್ನು ಹಾಳು ಮಾಡಿದ್ದಾರೆ. ಅವರೊಬ್ಬ ಸ್ವಾರ್ಥಿ ಎಂದೆಲ್ಲಾ ಹಿಗ್ಗಾಮುಗ್ಗಾ ಜರಿದಿದ್ದಾರೆ. ತಮ್ಮ ಸಾಲು ಸಾಲು ಟ್ವೀಟ್‌ಗಳ ಮೂಲಕ ಅಫ್ರಿದಿಯನ್ನು ಜರಿದಿರುವ 36 ವರ್ಷದ ಎಡಗೈ ಬ್ಯಾಟ್ಸ್‌ಮನ್‌ ಫರಾತ್‌, 20 ವರ್ಷಗಳ ಕಾಲ ತಮ್ಮ ವಯಸ್ಸಿನ ಕುರಿತಾಗಿ ಸುಳ್ಳು ಹೇಳುತ್ತಾ ಬಂದ ವ್ಯಕ್ತಿಗೆ ನಾಚಿಕೆಯಾಗಬೇಕು. ಇಂತಹ ವ್ಯಕ್ತಿ ಪಾಕ್‌ನ ದಿಗ್ಗಜ ಆಟಗಾರರನ್ನು ಹೆಸರಿಸಿ ಅವರ ವಿರುದ್ಧ ಟೀಕೆ ಮಾಡುತ್ತಿದ್ದಾನೆ ಎಂದು ಕುಟುಕಿದ್ದಾರೆ.

20 ವರ್ಷ ಸುಳ್ಳು ಹೇಳಿದ್ದ

"ಅಫ್ರಿದಿ ಅವರ ಹೊಸ ಪುಸ್ತಕದ ಬಗ್ಗೆ ಕೇಳಿ ಮತ್ತು ಓದಿದ ಬಳಿಕ ನನಗೇ ನಾಚಿಕೆಯಾಗುತ್ತದೆ. ತಮ್ಮ ವಯಸ್ಸಿನ ಕುರಿತಾಗಿ 20 ವರ್ಷ ಸುಳ್ಳು ಹೇಳಿದ ವ್ಯಕ್ತಿ ಇದೀಗ ಎಲ್ಲವನ್ನೂ ಸ್ಪಷ್ಟಪಡಿಸಲು ಮುಂದಾಗಿದ್ದು, ಪಾಕಿಸ್ತಾನದ ದಿಗ್ಗಜ ಆಟಗಾರರನ್ನು ಟೀಕಿಸುತ್ತಿದ್ದಾನೆ,'' ಎಂದು ಫರಾತ್‌ ತಮಮ್ ಟ್ವೀಟ್‌ ನಲ್ಲಿ ಕಿಡಿ ಕಾರಿದ್ದಾರೆ.

ಹೇಳುವುದು ಸಾಕಷ್ಟಿದೆ

ಮಾಜಿ ಕ್ರಿಕೆಟಿಗರನ್ನು ದೂಶಿಸುತ್ತಿರುವ ಅಫ್ರಿದಿ ಅವರ ಬಗ್ಗೆ ಹೇಳಲು ಹೊರಟರೆ ಸಾಕಷ್ಟಿದೆ ಎಂದಿರುವ ಫರಾತ್‌, "ಈ ವ್ಯಕ್ತಿಯ ಕುರಿತಾಗಿ ಹೇಳುವುದಾದರೆ ನನ್ನ ಬಳಿ ಸಾಕಷ್ಟು ಕಥೆಗಳಿವೆ. ಅವರ ಜೊತೆ ಆಟವಾಡಿದ ಅನುಭವವಿದೆ. ಅವರಿಗೆ ಉತ್ತಮ ರಾಜಕರಣಿ ಆಗುವ ಪ್ರತಿಭೆ ಇದೆ,'' ಎಂದು ವ್ಯಂಗ್ಯವಾಡಿದ್ದಾರೆ.

ಸ್ವಾರ್ಥ ತುಂಬಿರುವ ಆಟಗಾರ

"ಅಂದಹಾಗೆ ನನ್ನ ಬಳಿ ಈ ವ್ಯಕ್ತಿಯ ಕುರಿತಾಗಿ ಹೇಳಲು ಇರುವ ಕಥೆ ಕಡಿಮೆಯೇ. ಇನ್ನು ಅವರ ಪುಸ್ತಕದಲ್ಲಿ ಹೆಸರಿಸಿರುವ ಮಾಜಿ ಆಟಗಾರರೆಲ್ಲ ಈಗಲೇ ಮಾತನಾಡಿ ಒಬ್ಬ ಸ್ವಾರ್ಥ ತುಂಬಿದ ಆಟಗಾರನ ಕುರಿತು ಸತ್ಯಾಂಶ ಏನೆಂಬುದನ್ನು ಬಹಿರಂಗ ಪಡಿಸಬೇಕಾಗಿ ವಿನಂತಿಸುತ್ತೇನೆ. ಆತ ತನ್ನ ಒಳಿತಿಗಾಗಿ ಹಲವು ಕ್ರಿಕೆಟಿಗರ ವೃತ್ತಿ ಬದುಕನ್ನು ಹಾಳುಮಾಡಿದ,'' ಎಂದು ಫರಾತ್‌ ತಮ್ಮ ಟ್ವೀಟ್‌ಗಳಲ್ಲಿ ಅಫ್ರಿದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Story first published: Thursday, May 9, 2019, 18:04 [IST]
Other articles published on May 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X