ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಈ ಯುವ ಆಟಗಾರನನ್ನು ಜೂನಿಯರ್ ಪೊಲಾರ್ಡ್ ಎಂದ ವಿರೇಂದ್ರ ಸೆಹ್ವಾಗ್

Shahrukh Khan reminds us of a young Kieron Pollard says Virender Sehwag
ಈ ಆಟಗಾರನನ್ನ ಹಾಡಿ ಹೊಗಳಿದ Virender Sehwag | Oneindia Kannada

ಏಪ್ರಿಲ್ 9ರಂದು ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಕೆಲ ಆಟಗಾರರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮುಂದೂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಉಳಿದ 31 ಪಂದ್ಯಗಳು ಇಂಗ್ಲೆಂಡ್ ಅಥವಾ ಯುಎಇಯಲ್ಲಿ ನಡೆಸುವ ಆಲೋಚನೆಯಲ್ಲಿದೆ ಬಿಸಿಸಿಐ.

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ನಡೆದಿರುವ 29 ಪಂದ್ಯಗಳ ಪೈಕಿ ಕೇವಲ 3 ಆಟಗಾರರು ಮಾತ್ರ ಶತಕವನ್ನು ಸಿಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದೇವದತ್ ಪಡಿಕ್ಕಲ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಶತಕ ಸಿಡಿಸಿರುವ ಆಟಗಾರರು. ಇದೀಗ ವಿರೇಂದ್ರ ಸೆಹ್ವಾಗ್ ಪಂಜಾಬ್ ಕಿಂಗ್ಸ್ ತಂಡದ ಶಾರುಖ್ ಖಾನ್ ಆಟದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದು ಆತ ಜೂನಿಯರ್ ಪೊಲಾರ್ಡ್ ಎಂದಿದ್ದಾರೆ.

ಕೀರನ್ ಪೊಲಾರ್ಡ್ ಓರ್ವ ಸ್ಫೋಟಕ ಆಟಗಾರ, ಪೊಲಾರ್ಡ್ ಬ್ಯಾಟಿಂಗ್ ಮಾಡಲು ನಿಂತರೆ ಸಾಲು ಸಾಲು ಸಿಕ್ಸರ್ ಸಿಡಿಸಿ ದೊಡ್ಡ ಮೊತ್ತವನ್ನು ಕಲೆ ಹಾಕುತ್ತಾರೆ. ಅದೇ ರೀತಿ ಪಂಜಾಬ್ ಕಿಂಗ್ಸ್ ತಂಡದ ಶಾರುಖ್ ಖಾನ್ ಕೂಡ ಸಾಲು ಸಾಲು ದೊಡ್ಡ ಹೊಡೆತಗಳನ್ನು ಹೊಡೆಯಬಲ್ಲ ಸಾಮರ್ಥ್ಯವಿರುವ ಆಟಗಾರ ಎಂದು ವಿರೇಂದ್ರ ಸೆಹ್ವಾಗ್ ಶಾರುಖ್ ಖಾನ್‌ನನ್ನು ಹೊಗಳಿದ್ದಾರೆ. ಪ್ರಸ್ತುತ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡದ ಶಾರುಖ್ ಖಾನ್‌ಗೆ ಮೇಲಿನ ಕ್ರಮಾಂಕದಲ್ಲಿ ಆಡುವ ಅವಕಾಶವನ್ನು ನೀಡಿದರೆ ಖಂಡಿತವಾಗಿಯೂ ಆತ ಸ್ಫೋಟಕ ಆಟವಾಡುವ ಮೂಲಕ ಶತಕವನ್ನು ಬಾರಿಸಬಲ್ಲ ಎಂದು ವಿರೇಂದ್ರ ಸೆಹ್ವಾಗ್ ವಿಶ್ವಾಸ ವ್ಯಕ್ತಪಡಿಸಿದರು

Story first published: Sunday, May 16, 2021, 16:14 [IST]
Other articles published on May 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X