ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಳೆದ 6 ಪಂದ್ಯಗಳಲ್ಲಿ 52ರನ್ ಕಲೆಹಾಕಿದ್ದ ಶಾಯ್ ಹೋಪ್‌, ಭಾರತದ ವಿರುದ್ಧ ಸೆಂಚುರಿ ಸಿಡಿಸಿದ್ದೇಗೆ?

Shai hope

ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ವಿಂಡೀಸ್ ಸ್ಟಾರ್ ಬ್ಯಾಟರ್ ಶಾಯ್ ಹೋಪ್‌ ತನ್ನ 100ನೇ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದರು. ಇವರ ಶತಕ ತಂಡಕ್ಕೆ ಆಧಾರವಾಗಿದ್ದಲ್ಲದೆ, ವಿಶೇಷ ದಾಖಲೆ ಪಟ್ಟಿಗೆ ಸೇರ್ಪಡೆಯಾದರು. ದುರಾದೃಷ್ಟವಶಾತ್ ಶೈ ಹೋಪ್ ಶತಕವು ತಂಡದ ಗೆಲುವಿಗೆ ಕಾರಣವಾಗಲಿಲ್ಲ.

ಶಾಯ್ಶೈ ಹೋಪ್ ಶತಕ ಹಾಗೂ ನಾಯಕ ನಿಕೋಲಸ್ ಪೂರನ್ 74ರನ್‌ಗಳ ನೆರವಿನಿಂದ ವಿಂಡೀಸ್ 300ರ ಗಡಿದಾಟಿತು. ಜೊತೆಗೆ ಆರು ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿತು. ಆದ್ರೆ ಈ ಗುರಿಯನ್ನ ಬೆನ್ನತ್ತುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಇನ್ನೆರಡು ಎಸೆತ ಬಾಕಿ ಇರುವಂತೆ ಗೆಲುವಿನ ದಡ ತಲುಪಿತು. ಶ್ರೇಯಸ್ ಅಯ್ಯರ್, ಸ್ಯಾಮ್ಸನ್ ಹಾಗೂ ಅಕ್ಷರ್ ಪಟೇಲ್ ಅಜೇಯ ಅರ್ಧಶತದ ನೆರವಿನಿಂದ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿದೆ.

100ನೇ ಪಂದ್ಯದಲ್ಲಿ ಶತಕ ಸಿಡಿಸಿದ 10 ಬ್ಯಾಟರ್‌

100ನೇ ಪಂದ್ಯದಲ್ಲಿ ಶತಕ ಸಿಡಿಸಿದ 10 ಬ್ಯಾಟರ್‌

ಶಾಯ್ ಹೋಪ್‌ ತನ್ನ 100ನೇ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ವಿಶೇಷ ದಾಖಲೆಯ ಪಟ್ಟಿಗೆ ಸೇರಿದ್ದಾರೆ. ಇದಕ್ಕೂ ಮೊದಲು ಒಟ್ಟು 9 ಬ್ಯಾಟ್ಸ್‌ಮನ್‌ಗಳು ತಮ್ಮ 100ನೇ ಏಕದಿನ ಪಂದ್ಯದಲ್ಲಿ ಮೂರಂಕಿ ಗಡಿದಾಟಿದ್ದಾರೆ. 135 ಎಸೆತಗಳಲ್ಲಿ 115ರನ್ ಕಲೆಹಾಕಿದ ಶೈ ಹೋಪ್ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡಿತ್ತು.

100ನೇ ಏಕದಿನ ಪಂದ್ಯದಲ್ಲಿ 100 ರನ್ ಸಿಡಿಸಿದ ಪ್ಲೇಯರ್ಸ್‌
ಗಾರ್ಡನ್ ಗ್ರೀನಿಡ್ಜ್ (WI) ವಿರುದ್ಧ ಪಾಕಿಸ್ತಾನ - 102*, 1988
ಕ್ರಿಸ್ ಕೈರ್ನ್ಸ್ (NZ) vs ಭಾರತ - 115, 1999
ಮೊಹಮ್ಮದ್ ಯೂಸುಫ್ (PAK) vs ಶ್ರೀಲಂಕಾ - 129, 2002
ಕುಮಾರ ಸಂಗಕ್ಕಾರ (SL) vs ಆಸ್ಟ್ರೇಲಿಯಾ - 101, 2004
ಕ್ರಿಸ್ ಗೇಲ್ (WI) ವಿರುದ್ಧ ಇಂಗ್ಲೆಂಡ್ - 132*, 2004
ಮಾರ್ಕಸ್ ಟ್ರೆಸ್ಕೋಥಿಕ್ (ENG) ವಿರುದ್ಧ ಬಾಂಗ್ಲಾದೇಶ - 100*, 2005
ರಾಮನರೇಶ್ ಸರ್ವಾನ್ (WI) vs ಭಾರತ - 115*, 2006
ಡೇವಿಡ್ ವಾರ್ನರ್ (AUS) vs ಭಾರತ - 124, 2017
ಶಿಖರ್ ಧವನ್ (IND) vs ದಕ್ಷಿಣ ಆಫ್ರಿಕಾ - 109, 2018
ಶಾಯ್ ಹೋಪ್ (WI) vs ಭಾರತ - 115, 2022

ವೆಸ್ಟ್ ಇಂಡೀಸ್‌ನಲ್ಲಿ ಏಕದಿನ ಸರಣಿ ಗೆದ್ದ ಭಾರತದ ನಾಯಕರು: ಗಂಗೂಲಿಯಿಂದ ಶಿಖರ್ ಧವನ್‌ವರೆಗೆ..

ಶಾಯ್ ಹೋಪ್ ಬ್ಯಾಟಿಂಗ್ ಕುರಿತು ಆಕಾಶ್ ಚೋಪ್ರಾ ಪ್ರಶಂಸೆ

ಶಾಯ್ ಹೋಪ್ ಬ್ಯಾಟಿಂಗ್ ಕುರಿತು ಆಕಾಶ್ ಚೋಪ್ರಾ ಪ್ರಶಂಸೆ

ಟೀಂ ಇಂಡಿಯಾ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಶಾಯ್ ಹೋಪ್ ವಿಶೇಷ ಮೈಲುಗಲ್ಲು ತಲುಪಿದ್ದರ ಕುರಿತಾಗಿ ಮಾತನಾಡಿದ್ದಾರೆ.

"ಶಾಯ್‌ ಹೋಪ್ ಅವರು ತಮ್ಮ 100 ನೇ ಒಡಿಐನಲ್ಲಿ ಶತಕ ಗಳಿಸಿದ 10 ನೇ ಆಟಗಾರರಾದರು. ಆರಂಭವು ಕೂಡ ಚೆನ್ನಾಗಿತ್ತು. ಶಾಯ್ ಹೋಪ್ ಸ್ವಲ್ಪ ನಿಧಾನವಾಗಿ ಆಡಿದರು ಮತ್ತು ಅವರು ಸ್ವಾರ್ಥ ಆಟವಾಡುತ್ತಿದ್ದಾರೆ ಎಂದು ಕೆಲವು ಟೀಕೆಗಳಿವೆ. "ಈ ಸರಣಿಗೆ ಬರುವುದಕ್ಕೂ ಮೊದಲು ಅವರು ತುಂಬಾ ಕೆಟ್ಟ ಫಾರ್ಮ್‌ನಲ್ಲಿದ್ದರು, ಅವರ ಬ್ಯಾಟ್‌ನಿಂದ ರನ್‌ಗಳು ಬರುತ್ತಿರಲಿಲ್ಲ.

"ಆದರೆ ಅಂತಿಮವಾಗಿ ಅವರ ಬ್ಯಾಟ್‌ನಿಂದ ರನ್‌ ಬಂದಿದೆ. ಆಟಗಾರನು ಉತ್ತಮವಾಗಿದ್ದರೆ, ಅವನು ಇಂದು ಅಥವಾ ನಾಳೆ ಅಲ್ಲದಿದ್ದರೂ ಮರುದಿನ ರನ್ ಗಳಿಸುತ್ತಾನೆ. ಅವರು ಶತಕವನ್ನು ಗಳಿಸಿದ್ದು, ಆ ಶಕ್ತಿ ಆತನಿಗಿದೆ ಎಂದು ತೋರಿಸಿದರು, ಯಾವುದೇ ಸಂದರ್ಭದಲ್ಲಿ ಭಾರತದ ವಿರುದ್ಧ ಅವರ ಸಂಖ್ಯೆಗಳು(ರನ್‌) ತುಂಬಾ ಉತ್ತಮವಾಗಿವೆ'' ಎಂದು ಆಕಾಶ್ ಚೋಪ್ರಾ ಹೊಗಳಿದ್ದಾರೆ.

ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಹೇಳಿ ಎಂದ ಅಭಿಮಾನಿಗೆ ಅಖ್ತರ್ ಕೊಟ್ಟ ಉತ್ತರವಿದು

ಭಾರತದ ವಿರುದ್ಧ ಪ್ರತಿ ಬಾರಿಯೂ ಮಿಂಚುವ ಬ್ಯಾಟರ್ ಶಾಯ್ ಹೋಪ್

ಭಾರತದ ವಿರುದ್ಧ ಪ್ರತಿ ಬಾರಿಯೂ ಮಿಂಚುವ ಬ್ಯಾಟರ್ ಶಾಯ್ ಹೋಪ್

ಹೌದು ಶಾಯ್ ಹೋಪ್‌, ಕಳೆದ ಆರು ಏಕದಿನ ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 52ರನ್‌ಗಳಾಗಿತ್ತು. ಆದ್ರೆ ಟೀಂ ಇಂಡಿಯಾ ವಿರುದ್ಧ ಶಾಯ್ ಹೋಪ್ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಭಾರತದ ವಿರುದ್ಧ ಉತ್ತಮ ಬ್ಯಾಟಿಂಗ್ ಸರಾಸರಿ ಹೊಂದಿರುವ ಈ ಬ್ಯಾಟರ್ ಮತ್ತೊಮ್ಮೆ ಸ್ಕೋರ್ ಮಾಡಿದ್ದರೆ.

ಏಕದಿನ ಫಾರ್ಮೆಟ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಶಾಯ್ ಹೋಪ್ ಉತ್ತಮ ದಾಖಲೆ ಹೊಂದಿದ್ದಾರೆ. 22 ಏಕದಿನ ಪಂದ್ಯಗಳಲ್ಲಿ 47.50 ಬ್ಯಾಟಿಂಗ್ ಸರಾಸರಿಯಲ್ಲಿ 855 ರನ್ ಕಲೆಹಾಕಿದ್ದಾರೆ. ಬೇರೆ ಯಾವೊಂದು ಬಲಿಷ್ಠ ತಂಡದ ವಿರುದ್ಧವೂ ಇಲ್ಲದ ರೆಕಾರ್ಡ್‌ ಅನ್ನು ಟೀಂ ಇಂಡಿಯಾ ವಿರುದ್ಧ ಹೊಂದಿದ್ದಾರೆ.

Story first published: Monday, July 25, 2022, 17:44 [IST]
Other articles published on Jul 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X