ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಷೇಧ ಪೂರ್ಣಗೊಳಿಸಲಿರುವ ಶಕೀಬ್ ಅಲ್ ಹಸನ್, ಲಂಕಾ ಪ್ರವಾಸಕ್ಕೆ ಲಭ್ಯ

Shakib Al Hasan Could Return To Bangladesh Team For Tour Of Sri Lanka

ಬಾಂಗ್ಲಾದೇಶದ ಅನುಭವಿ ಕ್ರಿಕೆಟಿಗ ಶಕೀಬ್ ಅಲ್ ಹಸನ್ ತಮ್ಮ ನಿಷೇಧ ಶಿಕ್ಷೆಯನ್ನು ಪೂರ್ಣಗೊಳಿಸಲಿದ್ದಾರೆ. ಅಕ್ಟೋಬರ್ 29ಕ್ಕೆ ಶಕೀಬ್ ಅಲ್ ಹಸನ್ ನಿಷೇಧ ಶಿಕ್ಷೆ ಅಂತ್ಯವಾಗಲಿದ್ದು ಮುಂದಿನ ಲಂಕಾ ಪ್ರವಾಸಕ್ಕೆ ತಂಡವನ್ನು ಸೇರಿಕೊಳ್ಳಲು ಉತ್ಸಾಹಿತರಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾರತೀಯ ಬುಕ್ಕಿಯೋರ್ವ ಶಕೀಬ್ ಅಲ್ ಹಸನ್ ಅವರನ್ನು ಸಂಪರ್ಕಿಸಿದ್ದ. ಆದರೆ ಈ ವಿಚಾರವನ್ನು ಶಕೀಬ್ ಅಲ್ ಹಸನ್ ವರದಿ ಮಾಡದೆ ಮುಚ್ಚಿಟ್ಟಿದ್ದರು. ಈ ವಿಚಾರ ಬೆಳಕಿಗೆ ಬಂದು ಎರಡು ವರ್ಷಗಳ ನಿಷೇಧ ಶಿಕ್ಷೆಗೆ ಶಕೀಬ್ ಗುರಿಯಾಗಿದ್ದರು.

ಐಪಿಎಲ್ 2020: ಶ್ರೇಷ್ಠ ಐಪಿಎಲ್ XI ತಂಡವನ್ನು ಪ್ರಕಟಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ಐಪಿಎಲ್ 2020: ಶ್ರೇಷ್ಠ ಐಪಿಎಲ್ XI ತಂಡವನ್ನು ಪ್ರಕಟಿಸಿದ ಗ್ಲೆನ್ ಮ್ಯಾಕ್ಸ್‌ವೆಲ್

ಆದರೆ ಬಳಿಕ ಒಂದು ವರ್ಷದ ಶಿಕ್ಷೆಯಿಂದ ವಿನಾಯಿತಿ ಪಡೆದುಕೊಳ್ಳುವಲ್ಲಿ ಶಕೀಬ್ ಅಲ್ ಹಸನ್ ಯಶಸ್ವಿಯಾಗಿದ್ದು ಒಂದು ವರ್ಷದ ಶಿಕ್ಷೆಯನ್ನು ಪೂರೈಸಬೆಕಾಗಿತ್ತು. ಹೀಗಾಗಿ ಮುಂದಿನ ಅಕ್ಟೋಬರ್ ತಿಂಗಳಿಗೆ ಈ ಶಿಕ್ಎಯ ಅವಧಿ ಸಂಪೂರ್ಣವಾಗಲಿದೆ. ಮತ್ತೆ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳುವ ಹುಮ್ಮಸ್ಸಿನಲ್ಲಿ ಶಕೀಬ್ ಅಲ್ ಹಸನ್ ಇದ್ದಾರೆ.

ಬಾಂಗ್ಲಾದೇಶದ ಶ್ರೀಲಂಕಾ ಪ್ರವಾಸ ಬಹುತೇಕ ಖಚಿತವಾಗಿದೆ. 3 ಟಿ20 ಪಂದ್ಯಗಳ ಸರಣಿ ಆಯೋಜನೆಗೆ ತೀರ್ಮಾನವಾಗಿದ್ದು ಈ ಬಗ್ಗೆ ವೇಳಾಪಟ್ಟಿಯನ್ನೂ ಸಿದ್ದಪಡಿಸಲಾಗಿದೆ. ಈ ಸರಣಿಗೆ ಮುನ್ನ ತನ್ನ ಫಿಟ್‌ನೆಸ್ ಸಾಭೀತುಪಡಿಸಿಕೊಂಡು ಮತ್ತೆ ತಂಡಕ್ಕೆ ಸೇರಿಕೊಳ್ಳುವ ಭರವಸೆಯನ್ನು ಹೊಂದಿದ್ದಾರೆ ಶಕೀಬ್ ಅಲ್ ಹಸನ್.

ಶಕೀಬ್ ಅಲ್ ಹಸನ್ ಮತ್ತೆ ತಂಡವನ್ನು ಸೇರಿಕೊಳ್ಳುವ ಬಗ್ಗೆ ಬಾಂಗ್ಲಾದೇಶದ ಕೋಚ್ ರಸೆಲ್ ಡೊಮಿಂಗೋ ಪ್ರತಿಕ್ರಿಯಿಸಿದ್ದು, "ಈಗಾಗಲೇ ಆರೇಳು ತಿಂಗಳು ತಂಡ ಉಳಿದ ಸದಸ್ಯರೂ ಕೂಡ ಕ್ರಿಕೆಟ್‌ನಿಂದ ದೂರವಿರುವುದರಿಂದ ಶಕೀಬ್ ಅಲ್ ಹಸನ್ ಅವರು ಒಂದು ವರ್ಷ ತಂಡದಿಂದ ಹೊರಗಿದ್ದ ವಿಚಾರ ಹೆಚ್ಚಿನ ಬದಲಾವಣೆ ಆದಂತೆ ಅನಿಸುತ್ತಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.

ಸಿಪಿಎಲ್ 2020: ಕೆರಿಬಿಯನ್ ಲೀಗ್‌ನಲ್ಲಿ ಮಿಂಚು ಹರಿಸಬಹುದಾದ 4 ವಿದೇಶಿ ಆಟಗಾರರುಸಿಪಿಎಲ್ 2020: ಕೆರಿಬಿಯನ್ ಲೀಗ್‌ನಲ್ಲಿ ಮಿಂಚು ಹರಿಸಬಹುದಾದ 4 ವಿದೇಶಿ ಆಟಗಾರರು

"ತಂಡದ ಎಲ್ಲಾ ಸದಸ್ಯರೂ ಕೂಡ ಈ ಸಂದರ್ಭದಲ್ಲಿ ಫಿಟ್ ಆಗಿದ್ದಾರೆ ಎಂದು ಭಾವಿಸುತ್ತೇವೆ. ಖಂಡಿತಾವಾಗಿಯೂ ಅವರ ಫಿಟ್‌ನೆಸ್ ಕಾಪಾಡಿಕೊಳ್ಳಲು ತಂಡದ ಮಾನದಂಡಗಳು ಇವೆ. ಶಕೀಬ್ ಅಲ್ ಹಸನ್ ಸೇರಿದಂತೆ ತಮಡದ ಎಲ್ಲಾ ಸದಸ್ಯರಿಗೂ ಕೆಲ ಆಟದ ಸಮಯವನ್ನು ಏರ್ಪಡಿಸಲಾಗುತ್ತದೆ" ಎಂದು ಕೋಚ್ ಡೊಮಿಂಗೋ ಹೇಳಿದ್ದಾರೆ.

Story first published: Wednesday, August 12, 2020, 19:32 [IST]
Other articles published on Aug 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X