ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಲ್‌ ರೌಂಡರ್‌ಗಳಲ್ಲಿ ಹಸನ್‌ಗೆ ಅಗ್ರ ಸ್ಥಾನ, ಭಾರತ 10ರೊಳಗೂ ಇಲ್ಲ!

Shakib Al Hasan tops ODI all-rounders list, no Indian in top 10

ನವದೆಹಲಿ, ಮೇ 22: ಎಂಆರ್‌ಎಫ್ ಟೈರ್ಸ್ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಆಲ್‌ ರೌಂಡರ್ಸ್ ಯಾದಿಯಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ನಂ.1 ಸ್ಥಾನದಲ್ಲಿದ್ದಾರೆ. ಅಚ್ಚರಿಯೆಂದರೆ ಈ ಪಟ್ಟಿಯಲ್ಲಿ ಭಾರತದ ಯಾವೊಬ್ಬರೂ 10ರೊಳಗೂ ಸ್ಥಾನ ಪಡೆದುಕೊಂಡಿಲ್ಲ.

ವಿಶ್ವಕಪ್‌: ಯುವ ಬೌಲರ್‌ಗಳಿಗೆ ಎಚ್ಚರಿಕೆ ರವಾನಿಸಿದ ಯುನಿವರ್ಸಲ್ ಬಾಸ್!ವಿಶ್ವಕಪ್‌: ಯುವ ಬೌಲರ್‌ಗಳಿಗೆ ಎಚ್ಚರಿಕೆ ರವಾನಿಸಿದ ಯುನಿವರ್ಸಲ್ ಬಾಸ್!

ತಂಡಗಳಲ್ಲಿ ಇಂಗ್ಲೆಂಡ್ ನಂ.1 ಸ್ಥಾನದಲ್ಲಿ ಗಟ್ಟಿಯಾಗಿದೆ. ಭಾರತ, ಇಂಗ್ಲೆಂಡ್ ಬೆನ್ನಲ್ಲಿ ಅಂದರೆ ದ್ವಿತೀಯ ಸ್ಥಾನದಲ್ಲಿದೆ. ಬ್ಯಾಟ್ಸ್ಮನ್‌ ಮತ್ತು ಬೌಲರ್‌ಗಳ ಸಾಲಿನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಮೊದಲ ಸ್ಥಾನದಲ್ಲಿರುವುದು ವಿಶ್ವಕಪ್ ಹೊಸ್ತಿನಲ್ಲಿ ದೇಸೀ ಕ್ರಿಕೆಟ್ ಪ್ರೇಮಿಗಳಿಗೆ ಹುರುಪು ತುಂಬಿದೆ.

ವಿಶ್ವಕಪ್‌: ಮ್ಯಾಕ್ಸ್‌ವೆಲ್ ಮಿಂಚೋದು ಬ್ಯಾಟಿಂಗ್‌ನಲ್ಲ ಇಲ್ಲ ಬೌಲಿಂಗ್‌ನಲ್ಲ?!ವಿಶ್ವಕಪ್‌: ಮ್ಯಾಕ್ಸ್‌ವೆಲ್ ಮಿಂಚೋದು ಬ್ಯಾಟಿಂಗ್‌ನಲ್ಲ ಇಲ್ಲ ಬೌಲಿಂಗ್‌ನಲ್ಲ?!

ಏಕದಿನ ವಿಶ್ವಕಪ್ ಸಮೀಪದಲ್ಲಿರುವುದರಿಂದ ತಂಡಗಳ ಬಲಾಬಲ ಅಂದಾಜಿಸಲು ನೆರವಾದೀತು; ನೂತನ ರ್ಯಾಂಕ್ ಪಟ್ಟಿಯಲ್ಲಿ ಬಿದ್ದವರ-ಎದ್ದವರ ಕಿರು ಮಾಹಿತಿ ಇಲ್ಲಿದೆ.

10 ಸ್ಥಾನಗಳಲ್ಲಿ ಹತ್ತೂ ತಂಡಗಳು

10 ಸ್ಥಾನಗಳಲ್ಲಿ ಹತ್ತೂ ತಂಡಗಳು

ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಲಿರುವ 10 ತಂಡಗಳು ಏಕದಿನ ರ್ಯಾಂಕಿಂಗ್‌ನ ಮೊದಲ ಹತ್ತು ಸ್ಥಾನಗಳಲ್ಲಿವೆ. ಇಂಗ್ಲೆಂಡ್, ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ , ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಕ್ರಮವಾಗಿ ಮೊದಲ ಹತ್ತು ಸ್ಥಾನಗಳನ್ನು ಅಲಂಕರಿಸಿವೆ.

ಕೊಹ್ಲಿ ಬೆನ್ನಲ್ಲಿ ರೋಹಿತ್

ಕೊಹ್ಲಿ ಬೆನ್ನಲ್ಲಿ ರೋಹಿತ್

ಏಕದಿನ ಬ್ಯಾಟ್ಸ್ಮನ್‌ಗಳಲ್ಲಿ ಕೊಹ್ಲಿ 890 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ 839 ಪಾಯಿಂಟ್ ಗಳಿಸಿದ್ದಾರೆ. ಇನ್ನು ರಾಸ್ ಟೇಲರ್ (ನ್ಯೂಜಿಲ್ಯಾಂಡ್-831 ಪಾಯಿಂಟ್), ಶಾಯ್ ಹೋಪ್ (ವೆಸ್ಟ್ ಇಂಡೀಸ್), ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ), ಫ್ರಾಂಕೋಯಿಸ್ ಡು ಪ್ಲೆಸಿಸ್, ಬಾಬರ್ ಅಝಾಮ್ (ಪಾಕ್), ಜೋ ರೂಟ್ (ಇಂಗ್ಲೆಂಡ್), ಫಕರ್ ಝಮಾನ್ (ಪಾಕ್), ಮಾರ್ಟಿನ್ ಗಪ್ಟಿಲ್ (ನ್ಯೂಜಿಲ್ಯಾಂಡ್) ಅನಂತರದ ಸ್ಥಾನಗಳಲ್ಲಿದ್ದಾರೆ.

ಬೂಮ್ರಾ ಮಿಂಚು

ಬೂಮ್ರಾ ಮಿಂಚು

ವಿಶ್ವಕಪ್‌ ಹೊಸ್ತಿಲಲ್ಲಿ ಏಕದಿನ ಬೌಲಿಂಗ್ ಮತ್ತು ಬ್ಯಾಟ್ಸ್ಮನ್‌ ಎರಡೂ ವಿಭಾಗಗಳಲ್ಲಿ ಭಾರತದ ಆಟಗಾರರೇ ಮೊದಲ ಸ್ಥಾನದಲ್ಲಿರೋದು ದೇಸಿಗರ ಪಾಲಿಗೆ ಬೀಗಲಿಕ್ಕೊಂದು ನೆಪವಾಗಿದೆ. ಬೂಮ್ರಾ 774 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನ, ನ್ಯೂಜಿಲ್ಯಾಂಡ್‌ನ ಟ್ರೆಂಟ್ ಬೌಲ್ಟ್ ದ್ವಿತೀಯ (759), ಅಫ್ಘಾನ್‌ನ ಆದಿಲ್ ರಶೀದ್ ತೃತೀಯ, ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಚತುರ್ಥ ಮತ್ತು ಕಾಗಿಸೋ ರಬಾಡಾ ಐದನೇ ಸ್ಥಾನಗಳಲ್ಲಿದ್ದಾರೆ.

ಆಲ್‌ ರೌಂಡರ್‌ಗಳಲ್ಲಿ ಹಸನ್‌

ಆಲ್‌ ರೌಂಡರ್‌ಗಳಲ್ಲಿ ಹಸನ್‌

ಆಲ್ ರೌಂಡರ್‌ಗಳಲ್ಲಿ ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ 359 ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ರಶೀದ್ ಖಾನ್ (ಅಫ್ಘಾನಿಸ್ತಾನ), ಮೊಹಮ್ಮದ್ ನಬಿ (ಅಫ್ಘಾನ್), ಇಮಾದ್ ವಾಸಿಮ್ (ಪಾಕ್), ಮಿಚೆಲ್ ಸ್ಯಾಂಟ್ನರ್ (ಕಿವೀಸ್) ಕ್ರಮವಾಗಿ ನಾಲ್ಕರಿಂದ ಐದನೇ ಸ್ಥಾನಗಳಲ್ಲಿದ್ದಾರೆ. ಭಾರತದ ಯಾವ ಆಟಗಾರರೂ 10ರೊಳಗೂ ಸ್ಥಾನ ಪಡೆದಿಲ್ಲ. ಈ ಯಾದಿಯಲ್ಲಿ ಭಾರತದವರಲ್ಲಿ ಕೇದಾರ್ ಜಾಧವ್ 13ನೇ ಸ್ಥಾನದಲ್ಲಿದ್ದಾರೆ.

Story first published: Wednesday, May 22, 2019, 19:46 [IST]
Other articles published on May 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X