ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರಿದ ಶೇನ್ ವಾರ್ನ್

Shane Warne criticises the Indian teams management for ignoring R Ashwin

ಲಂಡನ್, ಸೆಪ್ಟೆಂಬರ್ 2: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಓವಲ್ ಮೈದಾನದಲ್ಲಿ ಇಂದಿನಿಂದ ಗುರುವಾರದಿಂದ ಆರಂಭವಾಗಿದೆ. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್ ಅಶ್ವಿನ್ ಮತ್ತೊಮ್ಮೆ ತಂಡದಲ್ಲಿ ಸ್ಥಾನವನ್ನು ಪಡೆಯುವಲ್ಲಿ ವಿಫಲವಾಗಿದ್ದಾರೆ. ಅನುಭವಿ ಆಟಗಾರನನ್ನು ಸತತ ನಾಲ್ಕನೇ ಪಂದ್ಯದಲ್ಲಿಯೂ ಕಡೆಗಣನೆ ಮಾಡಿದ ಕಾರಣಕ್ಕೆ ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ತಂಡದ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.

400 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತದ ಕೇವಲ ಮೂವರು ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಓವಲ್ ಟೆಸ್ಟ್‌ ಪಂದ್ಯದಲ್ಲಿ ಖಚಿತ ಎಂದೇ ಹೇಳಲಾಗಿತ್ತು. ಹಾಗಿದ್ದರೂ ಆರ್ ಅಶ್ವಿನ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲವಾದರು. ಇದು ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಮೂಡಿಸಿದೆ.

ಇನ್ನು ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಆರ್ ಅಶ್ವಿನ್ ಸೇರ್ಪಡೆ ಮಾಡದಿರುವ ನಿರ್ಧಾರವನ್ನು ಕಟುವಾಗಿ ಟೀಕಿಸಿರುವ ವಾರ್ನ್ ಇದು ತಂಡದ ಮ್ಯಾನೇಜ್‌ಮೆಂಟ್‌ನ ಹಠಮಾರಿ ಧೋರಣೆ ಎಂದಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ಎರಡೂ ತಂಡಗಳನ್ನು ಗಮನಸಿದರೆ ಇಂಗ್ಲೆಂಡ್ ತಂಡ ಹೆಚ್ಚು ಸಮತೋಲಿತವಾಗಿರುವಂತೆ ಕಾಣಿಸುತ್ತದೆ ಎಂದಿದ್ದಾರೆ ಶೇನ್ ವಾರ್ನ್.

 ಓವಲ್ ಕ್ರೀಡಾಂಗಣದಲ್ಲಿ ಬಲಿಷ್ಠ ತಂಡ ಯಾವುದು, ಯಾರು ಹೆಚ್ಚು ಸೋತಿದ್ದಾರೆ ಗೊತ್ತಾ? ಓವಲ್ ಕ್ರೀಡಾಂಗಣದಲ್ಲಿ ಬಲಿಷ್ಠ ತಂಡ ಯಾವುದು, ಯಾರು ಹೆಚ್ಚು ಸೋತಿದ್ದಾರೆ ಗೊತ್ತಾ?

ಇನ್ನು ಇದೇ ಸಂದರ್ಭದಲ್ಲಿ ನಾನಾಗಿದ್ದರೆ ತಂಡಕ್ಕೆ ಆರ್ ಅಶ್ವಿನ್ ಅವರನ್ನು ಆಯ್ಕೆ ಮಾಡಿರುತ್ತಿದ್ದೆ ಎಂದು ಶೇನ್ ವಾರ್ನ್ ಹೇಳಿದ್ದಾರೆ. ಯಾಕೆಂದರೆ ಈ ಪಿಚ್‌ನಲ್ಲಿ ಚೆಂಡು ಉತ್ತಮವಾಗಿ ತಿರುವು ಪಡೆಯುತ್ತದೆ. ನೀವು ಕೇವಲ ಮೊದಲ ಇನ್ನಿಂಗ್ಸ್‌ಅನ್ನು ಮಾತ್ರವೇ ಪರಿಗಣಿಸಿ ತಂಡವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಅಷ್ಟು ಮಾತ್ರವಲ್ಲದೆ ಬ್ಯಾಟ್ಸ್‌ಮನ್ ಆಗಿಯೂ ಆರ್ ಅಶ್ವಿನ್ ಉತ್ತಮವಾಗಿ ಆಡಬಲ್ಲರು. ಆತ ಐದು ಶತಕವನ್ನು ಗಳಿಸಿದ್ದಾರೆ. ಈ ಮೂಲಕ ನೀವು ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರನನ್ನು ಕಣಕ್ಕಿಳಿಸಿದಂತಾಗುತ್ತದೆ ಎಂದಿದ್ದಾರೆ ಶೇನ್ ವಾರ್ನ್.

ಒಂದು ಇನ್ನಿಂಗ್ಸ್ ದೃಷ್ಟಿಯಲ್ಲಿಟ್ಟು ಆಯ್ಕೆ ಸಾಧ್ಯವಿಲ್ಲ

ಒಂದು ಇನ್ನಿಂಗ್ಸ್ ದೃಷ್ಟಿಯಲ್ಲಿಟ್ಟು ಆಯ್ಕೆ ಸಾಧ್ಯವಿಲ್ಲ

ಇನ್ನು ಆರ್ ಅಶ್ವಿನ್‌ಗೆ ಆಡುವ ಬಳಗದಲ್ಲಿ ಸ್ಥಾನ ದೊರೆಯದ ಬಗ್ಗೆ ಲಾರ್ಡ್ಸ್ ಪಂದ್ಯದಲ್ಲಿಯೂ ಶೇನ್ ವಾರ್ನ್ ಪ್ರಶ್ನಿಸಿದ್ದರು. ಇಂಗ್ಲೆಂಡ್ ತಂಡದ ಸ್ಪಿನ್ನರ್ ಮೊಯೀನ್ ಅಲಿ ಅಜಿಂಕ್ಯಾ ರಹಾನೆ ಹಾಗೂ ರವೀಂದ್ರ ಜಡೇಜಾ ವಿಕೆಟ್ ಪಡೆದಾಗ ಟೀಮ್ ಇಂಡಿಯಾ ಆರ್ ಅಶ್ವಿನ್ ಆಡಿಸಬೇಕಿತ್ತು ಎಂದು ವಾರ್ನ್ ಅಭಿಪ್ರಾಯಪಟ್ಟಿದ್ದರು.

"ಓರ್ವ ಸ್ಪಿನ್ನರ್ ಪಂದ್ಯವನ್ನು ತಿರುಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಚ್ಚರಿ, ಅಚ್ಚರಿ. ಇದೇ ಕಾರಣಕ್ಕಾಗಿಯಾ ನೀವು ಯಾವುದೇ ಪರಿಸ್ಥಿತಿಯಲ್ಲಾದರೂ ಓರ್ವನೇ ಸ್ಪಿನ್ನರ್‌ನನ್ನು ಆಡಿಸುತ್ತೀರಿ? ನೆನಪಿಡಿ ನೀವು ಕೇವಲ ಒಂದು ಇನ್ನಿಂಗ್ಸ್‌ಗಾಗಿ ಮಾತ್ರವೇ ತಂಡವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಗೆಲುವಿಗಾಗಿ ಸ್ಪಿನ್" ಎಂದು ವಾರ್ನ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮೇಲುಗೈ ಸಾಧಿಸಿದ ಇಂಗ್ಲೆಂಡ್

ಮೇಲುಗೈ ಸಾಧಿಸಿದ ಇಂಗ್ಲೆಂಡ್

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇಂಗ್ಲೆಂಡ್ ನಾಯಕ ಜೋ ರೂಟ್ ಆಯ್ಕೆಯನ್ನು ಇಂಗ್ಲೆಂಡ್ ತಂಡದ ವೇಗಿಗಳು ಸಮರ್ಥನೆ ಮಾಡಿಕೊಂಡಿದ್ದಾರೆ. ಮೊದಲ ಐವತ್ತು ಓವರ್‌ಗಳ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಟೀಮ್ ಇಂಡಿಯಾದ ಪ್ರಮುಖ ಆರು ಆಟಗಾರರನ್ನು ಔಟ್ ಮಾಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್‌ನಲ್ಲಿಯೂ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಇಂಗ್ಲೆಂಡ್ ತಂಡದ ಪರವಾಗಿ ಒಲ್ಲೀ ರಾಬಿನ್ಸನ್ ಹಾಗೂ ಕ್ರಿಸ್ ವೋಕ್ಸ್ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದರೆ ಜೇಮ್ಸ್ ಆಂಡರ್ಸನ್ ಹಾಗೂ ಕ್ರೇಗ್ ಓವರ್ಟನ್ ತಲಾ ಒಂದು ವಿಕೆಟ್ ಪಡೆದುಕೊಂಡರು. ಟೀಮ್ ಇಂಡಿಯಾದ ಪರವಾಗಿ ಬ್ಯಾಟಿಂಗ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಮಾತ್ರವೇ ಯಶಸ್ಸು ಸಾಧಿಸಿದ್ದಾರೆ. ಕೊಹ್ಲಿ 50 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಉಳಿದಂತೆ ಎಲ್ಲಾ ಬ್ಯಾಟ್ಸ್‌ಮನ್‌ಗಳು ಕೂಡ ಸಂಪೂರ್ಣವಾಗಿ ವಿಫಲವಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಎರಡು ತಂಡಗಳ ಆಡುವ ಬಳಗ

ಎರಡು ತಂಡಗಳ ಆಡುವ ಬಳಗ

ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.

ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಒಲ್ಲಿ ಪೋಪ್, ಜಾನಿ ಬೈರ್‌ಸ್ಟೊ (ವಿಕೆಟ್ ಕೀಪರ್), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಕ್ರೇಗ್ ಓವರ್‌ಟನ್, ಜೇಮ್ಸ್ ಆಂಡರ್ಸನ್, ಒಲ್ಲಿ ರಾಬಿನ್ಸನ್

Story first published: Thursday, September 2, 2021, 21:02 [IST]
Other articles published on Sep 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X