ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಸಿಸಿ ವರ್ಲ್ಡ್ ಕ್ರಿಕೆಟ್ ಸಮಿತಿ ಸೇರಿದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್

Shane Warne joins MCC World Cricket committee

ಕ್ಯಾನ್ಬೆರಾ, ಅಕ್ಟೋಬರ್ 25: ಆಸ್ಟ್ರೇಲಿಯಾದ ಶ್ರೇಷ್ಠ ಸ್ಪಿನ್ ಬೌಲರ್ ಶೇನ್ ವಾರ್ನ್ ಅವರು ಇಂಗ್ಲೆಂಡ್ ನ ಮೇರಿಲೆಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ವರ್ಲ್ಡ್ ಕ್ರಿಕೆಟ್ ಸಮಿತಿಯನ್ನು ಸೇರಿಕೊಂಡಿದ್ದಾರೆ. ಆಟಕ್ಕೆ ಸಂಬಂಧಿಸಿ ನಿಯಮಾವಳಿಗಳನ್ನು ಬದಲಿಸಲು ಸಲಹೆ ನೀಡುವ ಎಂಸಿಸಿ ಪ್ರಭಾವಶಾಲಿ ವಿಶ್ವ ಕ್ರಿಕೆಟ್ ಸಮಿತಿಯನ್ನು ಶೇನ್ ಸ್ಥಾನ ಪಡೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿಂಡೀಸ್‌ನ ಡ್ವೇಯ್ನ್ ಬ್ರಾವೋ ಗುಡ್‌ಬೈಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿಂಡೀಸ್‌ನ ಡ್ವೇಯ್ನ್ ಬ್ರಾವೋ ಗುಡ್‌ಬೈ

ಆಸ್ಟ್ರೇಲಿಯಾದ ರಾಡ್ ಮಾರ್ಷ್ ಸ್ಥಾನಕ್ಕೆ 49ರ ಹರೆಯದ ಶೇನ್ ವಾರ್ನ್ ಅವರನ್ನು ಸೇರಿಸಿಕೊಳ್ಳಲಾಗಿದೆ. 2012ರಿಂದಲೂ ಸಮಿತಿಯಲ್ಲಿದ್ದು ಸೇವೆ ಸಲ್ಲಿಸಿದ್ದ ಮಾರ್ಷ್ ಸ್ಥಾನದಿಂದ ಕೆಳಗಿಳಿದಿದ್ದರಿಂದ ಆ ಜಾಗಕ್ಕೆ ಆಸ್ಟ್ರೇಲಿಯಾದ ಮತ್ತೊಬ್ಬ ಕ್ರಿಕೆಟ್ ದಿಗ್ಗಜ ಸೇರಿಕೊಂಡಂತಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಾರ್ನ್, 'ಎಂಸಿಸಿ ವರ್ಲ್ಡ್ ಕ್ರಿಕೆಟ್ ಕಮಿಟಿಯ ಸದಸ್ಯನಾಗುವ ಅವಕಾಶ ನನಗೆ ಒದಗಿದ್ದು ಇದೊಂದು ರೀತಿಯ ಗೌರವವೆಂದು ನಾನು ಭಾವಿಸುತ್ತೇನೆ. ಸಮಿತಿಯಲ್ಲಿದ್ದು ಚರ್ಚಿಸಲು ನನ್ನ ಬಳಿ ಸಾಕಷ್ಟು ವಿಚಾರಗಳಿವೆ. ಸಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತ ಒಂದಿಷ್ಟು ಕೊಡುಗೆ ನೀಡಲು ನಾನು ಬಯಸಿದ್ದೇನೆ' ಎಂದರು.

ಈ 'ಟೈ' ಎನ್ನುವುದು ಎಷ್ಟು ಕ್ರೂರ: ಭಾರತ Vs ವಿಂಡೀಸ್ ಟ್ವಿಟ್ಟರ್ ಪ್ರತಿಕ್ರಿಯೆಈ 'ಟೈ' ಎನ್ನುವುದು ಎಷ್ಟು ಕ್ರೂರ: ಭಾರತ Vs ವಿಂಡೀಸ್ ಟ್ವಿಟ್ಟರ್ ಪ್ರತಿಕ್ರಿಯೆ

1992 ರಿಂದ 2007ರ ವರೆಗೆ ಒಟ್ಟು 145 ಟೆಸ್ಟ್ ಪಂದ್ಯಗಳನ್ನಾಡಿರುವ ವಾರ್ನ್ 700 ವಿಕೆಟ್ ಪಡೆದ ಮೊದಲ ಬೌಲರ್ ಕೀರ್ತಿಗೆ ಪಾತ್ರರಾದವರು. ಒಟ್ಟು 708 ವಿಕೆಟ್ ಪಡೆದಿರುವ ಶೇನ್ ವಾರ್ನ್, ಟೆಸ್ಟ್ ಕ್ರಿಕೆಟ್ ನಲ್ಲಿ ಅಧಿಕ ವಿಕೆಟ್ ಪಡೆದ ಸರ್ವಕಾಲಿಕ ಆಟಗಾರರ ಸಾಲಿನಲ್ಲಿ ಈಗಲೂ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಶ್ರೀಲಂಕಾ ದಿಗ್ಗಜ ಮುತ್ತಯ್ಯ ಮುರಳೀಧರನ್ ಇದ್ದಾರೆ.

Story first published: Thursday, October 25, 2018, 16:46 [IST]
Other articles published on Oct 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X