ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಲಿರುವ ಅಗ್ರ 4 ತಂಡಗಳ ಹೆಸರಿಸಿದ ಶೇನ್ ವಾರ್ನ್

Shane Warne names four teams who will finish on top and make the play-offs in IPL

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ 2020ರಲ್ಲಿ ಪ್ಲೇ ಆಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿರುವ ಅಗ್ರ ನಾಲ್ಕು ತಂಡಗಳು ಯಾವುದೆಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ ದಂತಕತೆ ಶೇನ್ ವಾರ್ನ್ ಹೆಸರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಈ ಬಾರಿ ಪ್ಲೇ ಆಫ್‌ನಲ್ಲಿ ಪಾರಮ್ಯ ಮೆರೆಯಲಿದೆ ಎಂದು ವಾರ್ನ್ ವಾರ್ನ್ ಮಾಡಿದ್ದಾರೆ. ಬುಧವಾರ (ಸೆಪ್ಟೆಂಬರ್ 30) ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲುವ ಮೊದಲು ಆರ್‌ಆರ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಇತ್ತು. ಆದರೆ ಈಗ ಆರ್‌ಆರ್‌ ಕೆಳ ಕುಸಿದಿದೆ.

ಅದ್ಭುತ ಫೀಲ್ಡಿಂಗ್‌ನಿಂದ ಕ್ರಿಕೆಟ್‌ ದೇವರ ಮನಗೆದ್ದಿದ್ದ ನಿಕೋಲಸ್ ಪೂರನ್‌ನ ಕಷ್ಟದ ದಿನಗಳುಅದ್ಭುತ ಫೀಲ್ಡಿಂಗ್‌ನಿಂದ ಕ್ರಿಕೆಟ್‌ ದೇವರ ಮನಗೆದ್ದಿದ್ದ ನಿಕೋಲಸ್ ಪೂರನ್‌ನ ಕಷ್ಟದ ದಿನಗಳು

ಸದ್ಯದ ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮೊದಲ ನಾಲ್ಕು ಸ್ಥಾನಗಳಲ್ಲಿವೆ.

ಸಂಜುಗೆ ಶ್ಲಾಘನೆ

ಸಂಜುಗೆ ಶ್ಲಾಘನೆ

ರಾಜಸ್ಥಾನ್ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ಸಂಜು ಸ್ಯಾಮ್ಸನ್ ಬಗ್ಗೆ ಶೇನ್ ವಾರ್ನ್ ಮೆಚ್ಚುಗೆಯ ಮಾತನಾಡಿದ್ದಾರೆ. 'ಈ ಐಪಿಎಲ್ ಸೀಸನ್‌ನಲ್ಲಿ ಸಂಜು ಉತ್ತಮ ಪ್ರದರ್ಶನ ನೀಡಿದರೆ ಶೀಘ್ರದಲ್ಲೇ ಸ್ಯಾಮ್ಸನ್ ಟೀಮ್ ಇಂಡಿಯಾದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಕಾಣಿಸಿಕೊಳ್ಳಲಿದ್ದಾರೆ,' ಎಂದು ವಾರ್ನ್ ಹೇಳಿದ್ದಾರೆ.

ನಾಲ್ಕು ತಂಡಗಳು

ನಾಲ್ಕು ತಂಡಗಳು

ಈ ಬಾರಿ ಲೀಗ್ ಹಂತದಲ್ಲಿ ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮೊದಲ ನಾಲ್ಕು ಸ್ಥಾನಗಳಲ್ಲಿ ಆಟ ಮುಗಿಸಲಿವೆ ಎಂದು ವಾರ್ನ್ ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಇರಲಿದೆ

ರಾಜಸ್ಥಾನ್ ರಾಯಲ್ಸ್ ಇರಲಿದೆ

'ಪ್ಲೇ ಆಫ್ ನಾಲ್ಕು ತಂಡಗಳಲ್ಲಿ ರಾಜಸ್ಥಾನ್ ರಾಯಲ್ಸ್ ಇರಲಿದೆ. ಚೆನ್ನೈ ಬಿಟ್ಟು ಪ್ಲೇ ಆಫ್ ಊಹಿಸೋದು ಕಷ್ಟ. ಇನ್ನು ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಕೂಡ ಪ್ಲೇ ಆಫ್‌ನಲ್ಲಿ ಸ್ಥಾನ ಪಡೆಯಲಿದೆ,' ಎಂದು ಪಿಟಿಐ ಜೊತೆ ಮಾತನಾಡಿದ ವಾರ್ನ್ ಹೇಳಿದ್ದಾರೆ.

ಆರ್‌ಆರ್ ಪಾರಮ್ಯ

ಆರ್‌ಆರ್ ಪಾರಮ್ಯ

ರಾಜಸ್ಥಾನ್ ರಾಯಲ್ಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಶೇನ್ ವಾರ್ನ್ ಈ ಬಾರಿ ಆರ್‌ಆರ್ ಪಾರಮ್ಯ ಮೆರೆಯಲಿದೆ ಎಂದಿದ್ದಾರೆ. ಈವರೆಗೆ ಆಡಿರುವ ಪಂದ್ಯಗಳಲ್ಲಿ ಆರ್‌ಆರ್ ಉತ್ತಮ ಪ್ರದರ್ಶನವನ್ನೇ ನೀಡಿದೆ. ಕೆಕೆಆರ್ ವಿರುದ್ಧ ಮಾತ್ರ ಆರ್‌ಆರ್ ಸೋತು ಕೊಂಚ ಹಿನ್ನಡೆ ಅನುಭವಿಸಿದೆ.

Story first published: Thursday, October 1, 2020, 19:40 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X