ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನನ್ನ ಬೌಲಿಂಗ್‌ಗೆ ಚಚ್ಚುತ್ತಿದ್ದರು': ಇಬ್ಬರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಹೆಸರಿಸಿದ ಶೇನ್ ವಾರ್ನ್

Shane Warne names the ‘two greatest batsmen of all time

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪಾಯಕಾರಿ ಸ್ಪಿನ್ನರ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದವರು ಆಸ್ಟ್ರೇಲಿಯಾದ ಶೇನ್ ವಾರ್ನ್. ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್, ಭಾರತದ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಮತ್ತು ವಾರ್ನ್ ಕ್ರಿಕೆಟ್‌ ರಂಗದಲ್ಲಿ ಸ್ಪಿನ್ ಬೌಲರ್ ಆಗಿದ್ದುಕೊಂಡು ಮಾಡಿದ ಸಾಧನೆ ಅದ್ಭುತ. 90ರ ದಶಕದಲ್ಲಿ ಈ ಮೂರೂ ತ್ರಿಮೂರ್ತಿಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳಾಗಿ ಗಮನ ಸೆಳೆದಿದ್ದರು.

ಐಪಿಎಲ್ ಫೈನಲ್ ತಂಡಗಳ ಹೆಸರಿಸಿದ ಯುವಿಗೆ ಚಾಹಲ್ ತರ್ಲೆ ಟ್ವೀಟ್ಐಪಿಎಲ್ ಫೈನಲ್ ತಂಡಗಳ ಹೆಸರಿಸಿದ ಯುವಿಗೆ ಚಾಹಲ್ ತರ್ಲೆ ಟ್ವೀಟ್

ಪ್ರತೀ ಶ್ರೇಷ್ಠ ಬೌಲರ್‌ ಕೂಡ ತನ್ನಷ್ಟೇ ಶ್ರೇಷ್ಠ ಬ್ಯಾಟ್ಸ್‌ಮನ್‌ಗೆ ಬೌಲಿಂಗ್ ಮಾಡೋದನ್ನು, ವಿಕೆಟ್ ತೆಗೆಯೋದನ್ನು ಬಯಸುತ್ತಾನೆ. ಶೇನ್ ವಾರ್ನ್ ಕೂಡ ಇದನ್ನೇ ಬಯಸುತ್ತಿದ್ದರು. ಆದರೆ ಶೇನ್ ಅವರ ಮಾಂತ್ರಿಕ ಎಸೆತಗಳಿಗೆ ಕೇರೇ ಮಾಡದ ಇಬ್ಬರು ಬ್ಯಾಟ್ಸ್‌ಮನ್‌ಗಳು ಆ ದಿನಗಳಲ್ಲಿ ಇದ್ದರು.

ಸೂಪರ್ ಓವರ್ ಟೈ ಆದ್ರೆ?!: 2020ರ ಸೂಪರ್ ಓವರ್ ನಿಯಮಗಳಿವು!ಸೂಪರ್ ಓವರ್ ಟೈ ಆದ್ರೆ?!: 2020ರ ಸೂಪರ್ ಓವರ್ ನಿಯಮಗಳಿವು!

ತಾನು ಚೆಂಡು ಎಸೆದಾಗ ಮೈದಾನದ ಸುತ್ತಲೂ ಚೆಂಡನ್ನಟ್ಟುತ್ತಿದ್ದ ಆ ಇಬ್ಬರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಯಾರೆಂದು ವಾರ್ನ್ ಹೇಳಿಕೊಂಡಿದ್ದಾರೆ.

ಬೆಸ್ಟ್ ಬ್ಯಾಟ್ಸ್‌ಮನ್‌ಗಳು ಇವರು

ಬೆಸ್ಟ್ ಬ್ಯಾಟ್ಸ್‌ಮನ್‌ಗಳು ಇವರು

ಸ್ಪೋರ್ಟ್ಸ್‌ಕೀಡಾದ ಸಂದರ್ಶನದಲ್ಲಿ ಮಾತನಾಡಿದ ಶೇನ್ ವಾರ್ನ್, 'ನನಗನ್ನಿಸುವ ಪ್ರಕಾರ, ನನ್ನ ಕ್ರಿಕೆಟ್ ಯುಗದಲ್ಲಿ ಇದ್ದ ಇಬ್ಬರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳೆಂದರೆ ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ. ನನ್ನ ಕಾಲದಲ್ಲಿ ನಾನು ಆಡಿದ ಬೆಸ್ಟ್ ಬ್ಯಾಟ್ಸ್‌ಮನ್‌ಗಳೆಂದರೆ ಈ ಇಬ್ಬರೆ,' ಎಂದಿದ್ದಾರೆ.

ಮೈದಾನದ ಸುತ್ತಲೂ ಚೆಂಡು ಅಟ್ಟುತ್ತಿದ್ದರು

ಮೈದಾನದ ಸುತ್ತಲೂ ಚೆಂಡು ಅಟ್ಟುತ್ತಿದ್ದರು

'ಈ ಬ್ಯಾಟ್ಸ್‌ಮನ್‌ಗಳಿಗೆ (ಭಾರತದ ಸಚಿನ್ ಮತ್ತು ವೆಸ್ಟ್ ಇಂಡೀಸ್‌ನ ಲಾರಾ) ಬೌಲಿಂಗ್‌ ಮಾಡುವುದನ್ನು ನಾನು ಇಷ್ಟಪಡುತ್ತಿದ್ದೆ. ನಿಮಗೆ ಗೊತ್ತಾ, ಕೆಲವು ದಿನ ಅಥವಾ ಬಹುತೇಕ ದಿನ ಇವರು ನನ್ನ ಎಸೆತಗಳಿಗೆ ಮೈದಾನದ ಸುತ್ತಮುತ್ತಲೂ ಚೆಂಡು ಅಟ್ಟುತ್ತಿದ್ದರು. ಆದರೆ ಕೆಲವೊಮ್ಮೆ ನಾನೂ ಅವರನ್ನು ಔಟ್ ಮಾಡುತ್ತಿದ್ದೆ,' ಎಂದು ವಾರ್ನ್ ಹೇಳಿದ್ದಾರೆ.

ಆ ಕಾಲದ 'ಬಿಗ್ ತ್ರೀ'ಗಳು

ಆ ಕಾಲದ 'ಬಿಗ್ ತ್ರೀ'ಗಳು

'ನಾನು, ಬ್ರಿಯಾನ್, ಸಚಿನ್ ಈ ಮೂವರನ್ನೂ ಜನ 'ಬಿಗ್ ತ್ರೀ' ಅಂತ ಕರೆಯುತ್ತಿದ್ದರು. ಅದು ನಿಮಗೆ ಗೊತ್ತಿರಬಹುದು. ಆದರೆ ನಾವು ಮೂರೂ ಜನ ಕ್ರಿಕೆಟ್ ಅನ್ನು ಇನ್ನಷ್ಟು ಕುತೂಹಲಕಾರಿಯನ್ನಾಗಿ ಮಾಡಲು ಸಹಾಯ ಮಾಡುತ್ತಿದ್ದೆವು. ನಮ್ಮ ಕದನ ಬಹಳ ವರ್ಷಗಳ ಕಾಲ ರೋಮಾಂಚಕಾರಿ ಆಗುವಂತೆ ನೋಡಿಕೊಳ್ಳುತ್ತಿದ್ದೆವು. ಜನ ನಮ್ಮ ಆಟ ಎಂಜಾಯ್ ಮಾಡಿದ್ದಾರೆ ಅಂದುಕೊಳ್ಳುತ್ತೇನೆ,' ಎಂದು ವಾರ್ನ್ ವಿವರಿಸಿದ್ದಾರೆ.

ಶೇನ್ ವಾರ್ನ್ ಸಾಧನೆ

ಶೇನ್ ವಾರ್ನ್ ಸಾಧನೆ

ಕ್ರಿಕೆಟ್ ಇತಿಹಾಸದಲ್ಲಿ ಶೇನ್ ವಾರ್ನ್ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. 145 ಟೆಸ್ಟ್ ಪಂದ್ಯಗಳಲ್ಲಿ ಬರೋಬ್ಬರಿ 708 ವಿಕೆಟ್‌ಗಳು, 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್‌ಗಳು, 55 ಐಪಿಎಲ್ ಪಂದ್ಯಗಳಲ್ಲಿ 57 ವಿಕೆಟ್ ದಾಖಲೆ ವಾರ್ನ್ ಹೆಸರಿನಲ್ಲಿದೆ. ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ವಾರ್ನ್ ರಾಜಸ್ಥಾನ್ ರಾಯಲ್ಸ್‌ಗೆ ಕೋಚ್ ಆಗಿದ್ದಾರೆ.

Story first published: Friday, October 23, 2020, 15:44 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X